ತೆಂಗಿನೆಣ್ಣೆ ಉಪಯೋಗ ಹಲವು
Team Udayavani, Aug 13, 2019, 5:00 AM IST
ಹೆಣ್ಣು ಮಕ್ಕಳು ಸೌಂದರ್ಯವನ್ನು ಕಾಪಾಡಿ ಕೊಳ್ಳಲು ಹಲವು ಪ್ರಯತ್ನ ಮಾಡುವುದು ಸರ್ವೆ ಸಾಮಾನ್ಯ. ಅದರಲ್ಲಂತೂ ಬಳಸುವ ವಸ್ತು ಎರಡು ರೀತಿಯಲ್ಲಿ ಉಪಯೋಗವಾಗುವುದಾದರೆ ಇನ್ನೂ ಒಳ್ಳೆಯದು.
ತೆಂಗಿನ ಎಣ್ಣೆ ಪ್ರತಿನಿತ್ಯ ಮನೆಯಲ್ಲಿ ಬಳಕೆಯಾಗುವ ವಸ್ತು. ಸೌಂದರ್ಯ, ಆರೋಗ್ಯದ ದೃಷ್ಟಿಯಿಂದ ತೆಂಗಿನ ಎಣ್ಣೆಯ ಉಪಯೋಗ ಹಲವು. ಸೌಂದರ್ಯ ಪ್ರಿಯರು ತೆಂಗಿನ ಎಣ್ಣೆಯನ್ನು ದಿನನಿತ್ಯ ಬಳಕೆ ಮಾಡಬಹುದು. ಮನೆಯಲ್ಲೇ ಇದು ಸುಲಭವಾಗಿ ಸಿಗುವುದರಿಂದ ಇದರ ಬಳಕೆ ಕಷ್ಟವೇನಲ್ಲ.
ಬಳಕೆ ಹೇಗೆ
1 ಫೇಸ್‌ವಾಶ್ ಆಗಿ ಬಳಕೆ
ತೆಂಗಿನ ಎಣ್ಣೆಯನ್ನು ಫೇಸ್‌ವಾಶ್ ಮಾದರಿಯಲ್ಲಿ ಬಳಕೆ ಮಾಡಬಹುದು. ತೆಂಗಿನ ಎಣ್ಣೆ ಹೆಚ್ಚು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿ ಹೊಂದಿದೆ. ಆದ್ದರಿಂದ ಮನೆಯಿಂದ ಹೊರಗಡೆ ಹೋಗಿ ಬಂದ ಮೇಲೆ ತೆಂಗಿನ ಎಣ್ಣೆಯನ್ನು ಬಳಸಿ ಮುಖ ತೊಳೆದುಕೊಳ್ಳಬಹುದು.
2 ಫೇಸ್‌ಮಾಸ್ಕ್ನಲ್ಲಿ ಇದೆ ಉತ್ತಮ ಪ್ರತಿಕ್ರಿಯೆ
ತೆಂಗಿನ ಎಣ್ಣೆಯನ್ನು ಫೇಸ್‌ಮಾಸ್ಕ್ ಮಾದರಿಯಲ್ಲಿ ಬಳಕೆ ಮಾಡಬಹುದು. ತೆಂಗಿನ ಎಣ್ಣೆಯನ್ನು ಅರಶಿಣದೊಂದಿಗೆ ಅಥವಾ ಇತರೆ ಉಪಯುಕ್ತ ವಸ್ತುಗಳನ್ನು ಸೇರಿಸಿ ಮುಖಕ್ಕೆ ಮಾಸ್ಕ್ ಮಾದರಿಯಲ್ಲಿ ಬಳಕೆ ಮಾಡಬಹುದು.
3 ತೆಂಗಿನ ಎಣ್ಣೆಯ ಮಸಾಜ್
ತೆಂಗಿನ ಎಣ್ಣೆಯ ಮಸಾಜ್ ನಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ಮುಖಕ್ಕೆ ಕಾಂತಿ ಯುಕ್ತ ತ್ವಚೆ ಯನ್ನು ನೀಡು ತ್ತದೆ ಮತ್ತು ಇದು ಮನಸ್ಸಿನ ಒತ್ತಡ ನಿಯಂತ್ರಣ ಮಾಡುವಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.
ಮುಖಕ್ಕೆ ಕ್ರೀಮ್ ಬಳಸುವ ಮುನ್ನ ನಮ್ಮ ಚರ್ಮದ ವಿಧದ ಬಗ್ಗೆ ಎಚ್ಚರಿಕೆಯಿಂದಿರಬೇಕು. ಯಾಕೆಂದರೆ ಎಲ್ಲ ವಿಧದ ಚರ್ಮಗಳಿಗೆ ಎಲ್ಲ ಸೌಂದರ್ಯವರ್ಧಕಗಳು ಹೊಂದಿಕೊಳ್ಳುವುದಿಲ್ಲ. ತೆಂಗಿನ ಎಣ್ಣೆ ಮನೆಯಲ್ಲಿ ಸುಲಭವಾಗಿ ಸಿಗುವಂತಹುದು ಮತ್ತು ಇದನ್ನು ಸಲಭವಾಗಿ ಬಳಕೆ ಮಾಡಬಹುದು. ತೆಂಗಿನ ಎಣ್ಣೆಯನ್ನು ಹಾಗೆಯೇ ಬಳಸಬಹುದು ಅಥವಾ ಇತರೆ ವಸ್ತುಗಳೊಂದಿಗೆ ಮಿಕ್ಸ್ ಮಾಡಿಯೂ ಬಳಕೆ ಮಾಡಬಹುದು. ತೆಂಗಿನ ಎಣ್ಣೆ ಸಾಮಾನ್ಯವಾಗಿ ಎಲ್ಲ ಕ್ರೀಮ್, ಸೌಂದರ್ಯವರ್ಧಕಗಳಲ್ಲಿ ಬಳಕೆ ಮಾಡುತ್ತಾರೆ.
ಉಪಯೋಗಗಳು
1 ತೆಂಗಿನ ಎಣ್ಣೆಯಿಂದ ಚರ್ಮಕ್ಕೆ ಮಸಾಜ್ ಮಾಡುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
2 ಒಣಗಿದ ಮುಖ ಹೊಂದಿರುವವರು ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಮುಖ ಹೆಚ್ಚು ಹೊಳೆಯುತ್ತದೆ.
3 ಮುಖದ ಚರ್ಮ ಹೆಚ್ಚು ಮೃದುವಾಗಿರುವಂತೆ ನೋಡಿಕೊಳ್ಳುತ್ತದೆ.
4 ತೆಂಗಿನ ಎಣ್ಣೆಯಲ್ಲಿ ವಿಟಮಿನ್ ಸಿ ಇರುವ ಕಾರಣ ಇದು ಮುಖಕ್ಕೆ ಮಾಸcರಿಂಗ್ ನೀಡುತ್ತದೆ.
- ರಂಜಿನಿ ಮಿತ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.