ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಉಪಾಯಗಳು
Team Udayavani, Jul 12, 2022, 12:30 PM IST
ಮಳೆಗಾಲ ಎಂದರೆ ಎಲ್ಲೆಡೆ ಜಲಧಾರೆ, ಸರಾಗವಾಗಿ ಹರಿಯದ ನೀರು. ನಗರಗಳಲ್ಲಿ ಇನ್ನೂ ಕಷ್ಟ. ಇವುಗಳಿಗೆ ತೆರದುಕೊಂಡರೆ ರೋಗಗಳನ್ನು ಆಹ್ವಾನಿಸಿದಂತೆ. ಎಷ್ಟೇ ಮುಂಜಾಗೃತಿ ವಹಿಸಿದರೂ ಶೀತ, ಜ್ವರ, ಕೆಮ್ಮು ಬಿಡದೇ ಕಾಡುತ್ತದೆ. ಮಳೆಗಾಲದಲ್ಲಿ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡರೆ ಆರೋಗ್ಯ ಸಮಸ್ಯೆಯಿಂದ ದೂರವಿರಬಹುದು.
1. ಹೊರಗಡೆ ಹೋದಾಗ ಚಪ್ಪಲಿಗಳನ್ನು ಮನೆಯೊಳಗೆ ತರಬೇಡಿ. ಮಳೆ ನೀರಿನಲ್ಲಿರುವ ಬ್ಯಾಕ್ಟೀರಿಯಾಗಳು ಮನೆಯೊಳಗೆ ಬರುವ ಸಾಧ್ಯತೆಗಳು ಹೆಚ್ಚು.
2. ಮಳೆಗಾಲದಲ್ಲಿ ಎಲ್ಲರೂ ಮಾಡುವ ಬಹುದೊಡ್ಡ ತಪ್ಪು ಎಂದರೆ ಸೊಪ್ಪುಗಳನ್ನು ಸೇವಿಸುವುದು. ಮಳೆಗಾಲದಲ್ಲಿ ಸಾಧ್ಯವಾದಷ್ಟು ಸೊಪ್ಪುಗಳನ್ನು ಸೇವಿಸದೇ ದೂರವಿರಿ. ಹೊಟೇಲ್‌ಗಳಲ್ಲಿ ಕೊಡುವ ಹಸಿ ಸಲಾಡ್‌ಗಳನ್ನು ಸೇವಿಸದಿರಿ. ಏಕೆಂದರೆ ಅವುಗಳನ್ನು ಸರಿಯಾಗಿ ಶುಚಿಗೊಳಿಸುವುದು ಅನುಮಾನ
3. ಬ್ಯಾಕ್ಟೀರಿಯಾ, ಕ್ರಿಮಿಗಳಿಂದ ದೂರವಿರಲು ತಾಜಾ ತರಕಾರಿಗಳನ್ನು ಹದ ಬಿಸಿ ನೀರು ಹಾಗೂ ಉಪ್ಪು ಅಥವಾ ಆ್ಯಪಲ್ ಸೈಡರ್ ವಿನೇಗರ್ ಮಿಶ್ರಣದಿಂದ ತರಕಾರಿಗಳನ್ನು ತೊಳೆಯಿರಿ.
4. ಮಲೇರಿಯಾ ಅಥವಾ ಡೆಂಗ್ಯೂ ಜ್ವರಕ್ಕೆ ಔಷಧವಾಗಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ಲೇಟ್‌ಲೆಟ್ ಮಟ್ಟವನ್ನು ಹೆಚ್ಚಿಸುವ ತಾಜಾ ಪಪ್ಪಾಯಿ ಎಲೆಗಳು ಅಥವಾ ಅದರ ಕ್ಯಾಪ್ಸೂಲ್‌ಗಳನ್ನು ಸುಲಭವಾಗಿ ಸಿಗುವಂತೆ ಇಟ್ಟುಕೊಳ್ಳಿ
5. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ನಮ್ಮ ಮೊದಲ ಆದ್ಯತೆಯಾಗಿರಲಿ. ಏಕೆಂದರೆ ಕಾಮಾಲೆ, ಮಲೇರಿಯ, ಡೆಂಗ್ಯೂ, ಹೆಪಟೈಟಿಸ್ ಎ ಮತ್ತು ಇ, ಅತಿಸಾರ ಅಥವಾ ಆಹಾರ ವಿಷದಂತಹ ಸಮಸ್ಯೆಗಳ ವಿರುದ್ಧ ರಕ್ಷಣೆ ನಮ್ಮ ಮೊದಲ ಆದ್ಯತೆ ಆಗಿರಬೇಕು. ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಿ, ನಿದ್ರೆಯನ್ನು ತಪ್ಪಿಸಬೇಡಿ. ಪ್ರೋಬಯಾಟಿಕ್‌ಗಳ ದೈನಂದಿನ ಪ್ರಮಾಣದಲ್ಲಿ ಸೇರಿಸಿ. ಹಣ್ಣುಗಳನ್ನು ಸೇವಿಸಿ. ಒತ್ತಡದ ಮಟ್ಟವನ್ನು ನಿಭಾಯಿಸಿ.
6. ಸೊಳ್ಳೆಯಿಂದ ಮುಕ್ತಿಗೆ ಪ್ರಮುಖ ತೈಲಗಳು: ಸಿಟ್ರೊನೆಲ್ಲಾ, ಲ್ಯಾವೆಂಡರ್, ಥೈಮ್, ನೀಮ್ ಹಾಗೂ ಟೀ ಟ್ರೀ. ಇವೆಲ್ಲವು ಸೊಳ್ಳೆಯ ಕಡಿತದ ಮುಕ್ತಿ ನೀಡುವ ತೈಲಗಳು. ಕೋಣೆಗಳಿಗೆ ಸಿಂಪಡಿಸುವುದು. ಮೈಗೆ ಹಚ್ಚಿಕೊಳ್ಳುವುದರಿಂದ ಸೊಳ್ಳೆ ಕಡಿತದಿಂದ ದೂರವಿರಬಹುದು.
ರಮ್ಯಾ ಎಂ.ಕೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.