ಕೂದಲ ಆರೈಕೆಗಿರಲಿ ಹೆಚ್ಚಿನ ಕಾಳಜಿ
Team Udayavani, May 7, 2019, 7:21 AM IST
ಬೇಸಗೆಯಲ್ಲಿ ಕೂದಲಿನ ಸಮಸ್ಯೆ ಹೆಚ್ಚು. ಹೀಗಾಗಿ ಈ ವೇಳೆ ಕೂದಲಿನ ಆರೈಕೆಗೂ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.
ಬಿಸಿಲಿನ ಶಾಖದಿಂದ ಕೂದಲು ಉದುರುವ, ಕೂದಲಿಗೆ ಹಾನಿಯಾಗುವ ಸಂಭವ ಅಧಿಕವಾಗಿರುತ್ತದೆ. ಅತಿ ಹೆಚ್ಚು ಬೆವರು, ಧೂಳು ಕೂದಲಿನ ಬುಡದಲ್ಲಿ ಕುಳಿತು ಸಮಸ್ಯೆಗೆ ಕಾರಣವಾಗುತ್ತದೆ. ಅಲ್ಲದೇ ಬಿಸಿಲಿಗೆ ಕೂದಲು ಒಣಗುವುದರಿಂದ ಕೂದಲಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಹೀಗಾಗಿ ಬೇಸಗೆಯಲ್ಲಿ ಕೂದಲಿನ ಆರೈಕೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಮನೆಯಿಂದ ಹೊರಗಡೆ ಹೋಗುವಾಗ ಆದಷ್ಟು ಬಿಸಲಿನ ಶಾಖದಿಂದ ತಪ್ಪಿಸಿಕೊಳ್ಳವುದು ಉತ್ತಮ. ದಿನಕ್ಕೊಮ್ಮೆ ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ಕೂದಲು ಆರೋಗ್ಯಕರವಾಗಿರುತ್ತದೆ.
ಕೂದಲಿನ ಆರೈಕೆಗೆ ಟಿಪ್ಸ್
1 ಎಣ್ಣೆ ಕೂದಲಿನ ಆರೈಕೆಗೆ ಎಣ್ಣೆ ಉತ್ತಮ ಪರಿಹಾರ.
ಇದು ಕೂದಲಿನ ಆರೈಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕೂದಲಿನ ಬುಡಕ್ಕೆ ಸರಿಯಾಗಿ ಎಣ್ಣೆ ಹಾಕಿ ಮಸಾಜ್ ಮಾಡುವುದುರಿಂದ ಕೂದಲಿಗೆ ಹೊಳಪು ಬರುವುದರ ಜತೆಗೆ ಕೂದಲಿಗೆ ಹಾನಿಯಾಗುವುದು ತಪ್ಪುತ್ತದೆ.
2 ನೈಸರ್ಗಿಕ ವಸ್ತುಗಳ ಬಳಕೆ
ಕೂದಲಿನ ಆರೈಕೆಗೆ ಆದಷ್ಟು ನೈಸರ್ಗಿಕ ವಸ್ತುಗಳ ಬಳಕೆ ಉತ್ತಮ. ಇದರಿಂದ ಕೂದಲಿನ ಮೇಲಾಗುವ ಹಾನಿಯಾಗುವುದನ್ನು ತಪ್ಪಿಸಬಹುದು.
3 ಗ್ರೀನ್ ಟೀಯಿಂದ ಕೂದಲಿನ ಬುಡಕ್ಕೆ ಮಸಾಜ್ ಮಾಡುವುದರಿಂದ ಕೂದಲಿನ ಆರೋಗ್ಯ ವೃದ್ಧಿಸುತ್ತದೆ. ಒಂದು ಕಪ್ ನೀರಿಗೆ ಎರಡು ಬ್ಯಾಗ್ ಗ್ರೀನ್ ಟೀ ಹಾಕಿ ಆ ನೀರಿನಿಂದ ಕೂದಲಿನ ಬುಡಕ್ಕೆ ಮಸಾಜ್ ಮಾಡಿ.
4 ದಾಸವಾಳದ ಸೊಪ್ಪಿನ ರಸದಿಂದ ಕೂದಲಿಗೆ ಮಸಾಜ್ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುವುದು. ತಲೆ ತಂಪಾಗಿರುವುದು. ಬೇಸಗೆಯಲ್ಲಿ ದಾಸವಾಳವನ್ನು ನೀರಿನಲ್ಲಿ ಅರೆದು ಸ್ನಾನ ಮಾಡುವುದು ಕೂದಲಿನ ಆರೋಗ್ಯಕ್ಕೆ ಉತ್ತಮ.
5 ಮದರಂಗಿಯು ಕೂದಲಿನ ಆರೈಕೆಗೆ ಉತ್ತಮ. ಮದರಂಗಿಯನ್ನು ಅರೆದು ಮೊಟ್ಟೆಯ ಬಿಳಿ ಭಾಗವನ್ನು ಮಿಶ್ರ ಮಾಡಿ ತಲೆಗೆ ಹಚ್ಚಿಕೊಳ್ಳಬೇಕು.ಇದರಿಂದ ಕೂದಲ ರಕ್ಷಣೆ ಸಾಧ್ಯ.
ಅಲ್ಲದೇ ಕೂದಲಿನ ರಕ್ಷಣೆ, ಪೋಷಣೆಗೆ ಹೆಚ್ಚು ನೀರು ಕುಡಿಯಬೇಕು. ಧ್ಯಾನ, ಯೋಗ ಮಾಡುವುದು ಉತ್ತಮ.
– ರಂಜಿನಿ ಮಿತ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.