ಬಹೂಪಯೋಗಿ ಶುಂಠಿ
Team Udayavani, Feb 18, 2020, 5:29 AM IST
ನಮ್ಮ ಮನೆಯ ಅಡುಗೆ ಮನೆಯಲ್ಲಿ ಹಲವಾರು ಔಷಧ ಗುಣಗಳಿರುವ ಮತ್ತು ಆರೋಗ್ಯದಾಯಕ ವಸ್ತುಗಳಿವೆ. ಅವುಗಳ ಪ್ರಯೋಜನವನ್ನು ತಿಳಿದು ಬಳಸಿದರೆ ರೋಗ ನಿಯಂತ್ರಣಕಾರಿಯಾಗಿ ಇದು ಕೆಲಸ ಮಾಡುತ್ತದೆ. ಬೆಳ್ಳುಳ್ಳಿ, ಈರುಳ್ಳಿ, ಶುಂಠಿಗೆ ಮೊದಲಾದ ವಸ್ತುಗಳಿಗೆ ಔಷಧ ಗುಣಗಳಿವೆ. ಶುಂಠಿ ರೋಗನಿರೋಧಕ ಶಕ್ತಿಯನ್ನು ಮತ್ತು ಹಲವಾರು ಪ್ರಯೋಜನಗಳನ್ನು ಹೊಂದಿದೆ.
ಶುಂಠಿ ಕಷಾಯ, ಶುಂಠಿ ಚಟ್ನಿ ಅಥವಾ ಶುಂಠಿ ಪುಡಿ ರೀತಿಯಲ್ಲಿ ಬಳಕೆ ಮಾಡಬಹುದು.
ಪ್ರಯೋಜನಗಳು
1. ಸ್ನಾಯುಸೆಳೆತ ಮೊದಲಾದ ನೋವುಗಳಿಗೆ ಶುಂಠಿ ಹೆಚ್ಚು ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತದೆ. ಅಧ್ಯಯನದ ಪ್ರಕಾರ, 2 ಗ್ರಾಂ. ನಷ್ಟು ಶುಂಠಿಯನ್ನು 12 ದಿನ ಸೇವಿಸಿದರೆ ನೋವು ನಿವಾರಣೆಯಾಗುತ್ತದೆ. ಇದು ಒಂದೇ ಬಾರಿಗೆ ಯಾವುದೇ ಪರಿಣಾಮ ಬೀರದಿದ್ದರೂ ನಿಧಾನವಾಗಿ ನೋವು ಕಡಿಮೆಗೊಳಿಸುತ್ತದೆ.
2. ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಸಮಸ್ಯೆ ನಿವಾರಣೆ
ಶುಂಠಿಯು ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.
3. ಅಜೀರ್ಣ ಸಮಸ್ಯೆಗೆ ಸಹಕಾರಿ
ಶುಂಠಿ ಸೇವನೆ ಮಾಡುವುದರಿಂದ ಅಜೀರ್ಣ ಮೊದಲಾದ ಸಮಸ್ಯೆಗಳು ನಿವಾರಣೆಯಾಗುತ್ತದೆ.
4. ಶುಂಠಿ ಸೇವನೆಯಿಂದ ಮುಟ್ಟಿನ ಸಮಸ್ಯೆಗಳು ನಿವಾರಣೆಯಾಗುತ್ತದೆ. ಶುಂಠಿ ಪುಡಿಯನ್ನು ಮುಟ್ಟಿನ ಮೊದಲ ಮೂರು ದಿನಗಳ ಕಾಲ ಸೇವನೆ ಮಾಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ.
5. ದೇಹದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಶುಂಠಿ ಸಹಕಾರಿ. ದೇಹದಲ್ಲಿ ಅತಿಯಾದ ಕೊಬ್ಬು ಸಮಸ್ಯೆ ಆರಂಭವಾದರೆ ಶುಂಠಿ ಸೇವನೆ ಮಾಡಬಹುದು.
6. ಕ್ಯಾನ್ಸರ್ ತಡೆಗಟ್ಟುವ ಶಕ್ತಿ ಹೊಂದಿದೆ.
ಶುಂಠಿಗೆ ಕ್ಯಾನ್ಸರ್ ಬಾರದಂತೆ ತಡೆಯುವ ಶಕ್ತಿಯಿದೆ. ಇದು ಹೆಚ್ಚು ರೋಗನಿರೋಧಕ ಶಕ್ತಿ ಹೊಂದಿರುವ ಪದಾರ್ಥವಾಗಿದೆ.
7. ಸೋಂಕಿನ ವಿರುದ್ಧ ಹೋರಾಡುತ್ತದೆ.
ಶುಂಠಿಯ ಸೇವನೆ ಮಾಡುವುದರಿಂದ ಸೋಂಕು ಬಾರದಂತೆ ತಡೆಗಟ್ಟುತ್ತದೆ.
8. ಮೆದುಳನ್ನು ಚುರುಕುಗೊಳಿಸುತ್ತದೆ.
ಶುಂಠಿಗೆ ಮನುಷ್ಯನ ಮೆದುಳನ್ನು ಚುರುಕುಗೊಳಿಸುವ ವಿಶೇಷ ಶಕ್ತಿಯಿದೆ. ಪ್ರತಿದಿನ ಶುಂಠಿಯ ಸೇವನೆ ಮಾಡುವುದರಿಂದ ಮೆದುಳು ಚುರುಕುಗೊಳ್ಳುತ್ತದೆ.
- ರಂಜಿನಿ ಮಿತ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
Kundapura: ಹತ್ತೂರು ಸೇರುವ ಮುಳ್ಳಿಕಟ್ಟೆಗೆ ಬೇಕು ಬಸ್ ನಿಲ್ದಾಣ
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.