ಬಹೂಪಯೋಗಿ ಪೇರಳೆ
Team Udayavani, Aug 13, 2019, 5:02 AM IST
ಪೇರಳೆ ನಮ್ಮ ಹಳ್ಳಿಗಳಲ್ಲಿ ಸಾಧಾರಣವಾಗಿ ಕಾಣ ಸಿಗುವ ಒಂದು ಹಣ್ಣು. ಎಲ್ಲ ಹವಾಮಾನಗಳಲ್ಲಿ ಬೆಳೆಯುವುದರಿಂದ ಇದು ಎಲ್ಲ ಸಮಯಗಳಲ್ಲಿ ಸಿಗುತ್ತದೆ. ಪೇರಳೆ ಹಣ್ಣು ಆರೋಗ್ಯಕ್ಕೆ ಉತ್ತಮ. ಇದರ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ. ಕೇವಲ ಹಣ್ಣು ಮಾತ್ರವಲ್ಲ ಇದರ ಎಲೆಯೂ ಆರೋಗ್ಯಕ್ಕೆ ಉತ್ತಮ.
ಪೇರಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶವು ಧಾರಾಳವಾಗಿದ್ದು ಇದು ದೇಹಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಪೊಟಾಶಿಯಂ ಹಾಗೂ ಫೈಬರ್‌ನ ಅಂಶವೂ ಇದರಲ್ಲಿದೆ.
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಕಾರಿ
ಪೇರಳೆ ಹಣ್ಣಿನ ಎಲೆಯ ಕಷಾಯ ಮಾಡಿ ಕುಡಿಯುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣ ಸಾಧ್ಯವಾಗುತ್ತದೆ. ಹೃದಯದ ಆರೋಗ್ಯವನ್ನು ಹೆಚ್ಚಿಸಲು ಪೇರಳೆ ಹಣ್ಣು ಸಹಕಾರಿ. ಪೇರಳೆ ಹಣ್ಣನ್ನು ದಿನನಿತ್ಯ ಸೇವಿಸುವುದರಿಂದ ಹಾಗೂ ಪೇರಳೆ ಎಲೆಯ ಕಷಾಯವನ್ನು ಸತತವಾಗಿ ಸೇವಿಸುವುದು ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ.
ಪೇರಳೆ ಎಲೆಯ ಚಿಗುರನ್ನು ಪ್ರತಿನಿತ್ಯ ಬೆಳಗ್ಗೆ ಎರಡರಿಂದ ಮೂರು ಸೇವಿಸುವುದರಿಂದ ದೇಹದಲ್ಲಿನ ಪಿತ್ತ ಕಡಿಮೆಯಾಗುತ್ತದೆ. ಉಷ್ಣ ದೇಹ ಪ್ರಕೃತಿಯವರು ಪೇರಳೆ ಹಣ್ಣು ಸೇವಿಸುವುದರಿಂದ ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಬರುತ್ತದೆ.
ಪೇರಳೆ ಹಣ್ಣು ಪಚನಕ್ರಿಯೆಗೆ ಸಹಕಾರಿ. ಜೀರ್ಣಕ್ರಿಯೆಯ ಸಮಸ್ಯೆ ಇರುವವರು ಪೇರಳೆ ಹಣ್ಣನ್ನು ಪ್ರತಿನಿತ್ಯ ಸೇವಿಸುವುದರಿಂದ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಪೇರಳೆ ಹಣ್ಣು ಮತ್ತು ಎಲೆಗಳಲ್ಲಿರುವ ಫೈಬರ್ ಅಂಶವು ದೇಹದಲ್ಲಿ ಡಯಾಬಿಟಿಸ್ ಪ್ರಮಾಣ ಹೆಚ್ಚುವುದನ್ನು ತಡೆಗಟ್ಟುತ್ತದೆ. ಅಥವಾ ಡಯಾಬಿಟಿಸ್ ಬರುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
ಪೇರಳೆ ಎಲೆಯನ್ನು ಸೇವಿಸುವುದರಿಂದ ಅಥವಾ ಎಲೆಯ ಕಷಾಯ ಮಾಡಿ ಕುಡಿಯುವುದರಿಂದ ದೇಹದ ಭಾರವನ್ನು ಕಡಿಮೆ ಮಾಡಬಹುದು.
ಪೇರಳೆ ಹಣ್ಣನ್ನು ಸೇವನೆ ಮಾಡುವುದರಿಂದ ಚರ್ಮಕ್ಕೆ ಹೊಳಪು ಉಂಟಾಗುತ್ತದೆ. ಇದರಲ್ಲಿರುವ ವಿಟಮಿನ್‌ಗಳು ದೇಹದ ಕಾಂತಿ ವೃದ್ಧಿಗೆ ಸಹಕಾರಿ. ಈ ಹಣ್ಣಿ ನಲ್ಲಿ ವಿಟಮಿನ್ ಎ ಕೂಡಾ ಧಾರಾಳವಾಗಿ ಇದೆ. ಇದು ಕಣ್ಣಿನ ದೃಷ್ಟಿ ಹೆಚ್ಚಳಕ್ಕೆ ಸಹಕಾರಿ. ಕಣ್ಣಿನ ದೃಷ್ಟಿ ಕಡಿಮೆಯಾಗುವುದನ್ನು ತಡೆಯುವುದು ಮಾತ್ರವಲ್ಲ ಕಡಿಮೆಯಾದ ದೃಷ್ಟಿ ಸಾಮರ್ಥ್ಯವನ್ನು ಹೆಚ್ಚಳಕ್ಕೆ ಇದು ಸಹಕಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.