ಹಲ್ಲು, ವಸಡಿನ ರಕ್ಷಣೆಗೂ ಬೇಕು ವಿಟಮಿನ್ ಸಿ
Team Udayavani, Dec 25, 2018, 1:46 PM IST
ದೇಹದ ಆರೋಗ್ಯಕ್ಕೆ ವಿಟಮಿನ್‌ಗಳು ಅತೀ ಆವಶ್ಯಕವಾದ ಪೌಷ್ಟಿಕಾಂಶಗಳು. ವಿಟಮಿನ್‌ಗಳಲ್ಲಿ ಎರಡು ವಿಧ. 1. ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ (ನಾನ್ ಎಸೆಂಶಿಯಲ್), 2. ನಮ್ಮ ದೇಹದಲ್ಲಿ ಉತ್ಪತ್ತಿಯಾಗದಿರುವ (ಎಸೆಂಶಿಯಲ್) ವಿಟಮಿನ್. ಎಸೆಂಶಿಯಲ್ ವಿಟಮಿನ್‌ಗಳು ದೇಹದಲ್ಲಿ ಉತ್ಪತ್ತಿಯಾಗದಿರುವ ಕಾರಣ ನಾವು ಆಹಾರದ ಮೂಲಕ ಅವುಗಳನ್ನು ಸೇವಿಸುವುದು ಅಗತ್ಯವಾಗಿರುತ್ತದೆ.
ವಿಟಮಿನ್ ಸಿ ಒಂದು ಎಸೆಂಶಿಯಲ್ ವಿಟಮಿನ್ ಆಗಿದ್ದು, ನಮ್ಮ ದೇಹದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದರ ಕೊರತೆ ಬಾಯಿಯ ಆರೋಗ್ಯದ ಮೇಲೂ ಪ್ರಭಾವ ಬೀರುವುದು. ದೇಹಕ್ಕೆ ವಿಟಮಿನ್- ಸಿ ದಿನಕ್ಕೆ 30- 70 ಮಿ.ಗ್ರಾಂ. ಅಗತ್ಯವಿರುತ್ತದೆ.
ವಿಟಮಿನ್ ಸಿ ಆಹಾರ ಮೂಲಗಳು - ಸಿಟ್ರಸ್ ಹಣ್ಣುಗಳು (ಕಿತ್ತಳೆ, ನಿಂಬೆ, ನೆಲ್ಲಿಕಾಯಿ), ಸೀಬೆ, ಆಲೂಗಡ್ಡೆ, ಕ್ಯಾಬೇಜ್, ಕಾಲಿಫ್ಲವರ್, ಮೀನು, ಮೊಳಕೆ ಕಾಳುಗಳು.
ಪ್ರಯೋಜನ
ವಿಟಮಿನ್ ಸಿ ಕೊಲಾಬೆನ್ ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ. ವಸಡಿನ ಆರೋಗ್ಯವನ್ನು ವೃದ್ಧಿಸುತ್ತದೆ. ದೇಹದ ಬೆಳವಣಿಗೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಹಾಗೂ ದೇಹದ ಜೀವ ರಸಾಯನ ಕ್ರಿಯೆಗಳಿಗೆ ಅಗತ್ಯವಾದ ಅಂಶವಾಗಿದೆ. ಹಲ್ಲು ಮತ್ತು ಮೂಳೆಯ ರಚನೆಯಲ್ಲಿ ಕೂಡ ಇದು ಪ್ರಮುಖ ಪಾತ್ರವಹಿಸುತ್ತದೆ. ದೇಹದ ಗಾಯವನ್ನು ವಾಸಿ ಮಾಡಲು ಸಹಾಯ ಮಾಡುತ್ತದೆ. ಸಸ್ಯಾಹಾರದಲ್ಲಿರುವ ಕಬ್ಬಿಣಾಂಶವು ರಕ್ತಕ್ಕೆ ಸೇರ್ಪಡೆಯಾಗಲು ವಿಟಮಿನ್ ಸಿ ಅತ್ಯಗತ್ಯ. ಇದರ ಕೊರತೆಯಾದಲ್ಲಿ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾಗಿ ರಕ್ತಹೀನತೆ ಉಂಟಾಗಬಹುದು.
ವಿಟಮಿನ್ ಸಿ ಕೊರತೆಯ ಲಕ್ಷಣಗಳು
· ವಸಡಿನ ಊತ, ರಕ್ತಸ್ರಾವ
· ನಾಲಗೆ ಮತ್ತು ವಸಡಿನ ಮೇಲೆ ಹುಣ್ಣುಗಳು
· ಅಲ್ಲಾಡುವ ಹಲ್ಲುಗಳು
· ವಸಡಿನ ಸೋಂಕು
· ಗಾಯ ವಾಸಿಯಾಗದಿ ರು ವುದು
· ಮೂಳೆಯ ಸಾಂಧ್ರತೆ ಕಡಿಮೆಯಾಗುವುದು
· ಬಾಯಿಯ ದುರ್ವಾಸನೆ
ಪರಿಹಾರ ಏನು?
ವಿಟಮಿನ್ ಸಿ ಯ ಲಕ್ಷಣಗಳು ಕಾಣಿಸಿಕೊಂಡಲ್ಲಿ ವೈದ್ಯರ ಸಲಹೆ ಪಡೆದು ವಿಟಮಿನ್ ಸಿ ಯುಕ್ತ ಆಹಾರ ಮತ್ತು ಮಾತ್ರೆಗಳ ಸೇವನೆ ಮಾಡಬೇಕು. ಯಾವುದಾದರೂ ಸೋಂಕು, ರಕ್ತ ಹೀನತೆ ಇದ್ದಲ್ಲಿ ಚಿಕಿತ್ಸೆ ಪಡೆಯಬೇಕು. ಪ್ರತಿಯೊಂದಕ್ಕೂ ಮಾತ್ರೆಯ ಮೊರೆ ಹೋಗಬೇಕಾಗಿಲ್ಲ. ಪ್ರಕೃತಿ ದತ್ತವಾಗಿ ಸಿಗುವ ಆಹಾರದ ಬಳಕೆಯಿಂದಲೂ ಪರಿಹಾರ ಕಂಡು ಕೊಳ್ಳಬಹುದು.
ಡಾ| ರಶ್ಮಿ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.