ಅಂದದ ಉಗುರಿಗೆ ಚೆಂದದ ಪೋಷಣೆ
Team Udayavani, Oct 15, 2019, 5:00 AM IST
ದೇಹದ ಪುನರುತ್ಪತ್ತಿಯ ಭಾಗವಾಗಿದ್ದ ಉಗುರನ್ನು ಆಗಾಗ ಶುದ್ಧ ಗೊಳಿಸುತ್ತಿರಬೇಕು ಇಲ್ಲವಾದರೆ ಆರೋಗ್ಯಹಾನಿಗೊಳ್ಳುವ ಸಾಧ್ಯತೆ ಅಧಿಕವಿದೆ. ಸ್ವಚ್ಛ ಮತ್ತು ಆಕರ್ಷಕ ಉಗುರನ್ನು ಹೊಂದುವುದು ಬಹುತೇಕರಿಗೆ ಇಷ್ಟದ ವಿಚಾರವಾಗಿದ್ದು ಅದು ಹೇಗೆ ಮಾಡಬಹುದೆಂದು ತಿಳಿದಿರಲಾರರು. ಈ ಕಾರಣಕ್ಕಾಗಿ ಇಲ್ಲಿ ಕೆಲವು ಸುಲಭ ಮಾರ್ಗವನ್ನು ನಾವು ಕಾಣಬಹುದು.
ಕ್ಯಾಲ್ಸಿಯಂಯುಕ್ತ ಆಹಾರ
ಬಹುತೇಕ ಜನರಲ್ಲಿ ಉಗುರು ಬೇಗನೆ ತುಂಡಾಗುವುದು, ಟೊಳ್ಳಾಗುವಿಕೆ, ಬಿಳಿ ಕಲೆ ಕಂಡುಬರುವುದು, ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆ ಇರುವುದನ್ನು ಸೂಚಿಸುತ್ತದೆ. ಹಾಲಿನ ಸೇವನೆ ಇದಕ್ಕೆ ಸರಳ ಮಾರ್ಗವೆನ್ನಬಹುದು. ಇದರೊಂದಿಗೆ ಮೊಸರು, ಬಾದಾಮಿ, ಆಲೂಗಡ್ಡೆ, ಇತ್ಯಾದಿ ಪೌಷ್ಟಿಕ ಆಹಾರವನ್ನು ಸೇವಿಸಿ.
ನಿಂಬೆ ರಸದಲ್ಲಿ ಸ್ವಚ್ಛಗೊಳಿಸಿ
ಉಗುರನ್ನು ನಿರ್ದಿಷ್ಟವಾದ ಬಣ್ಣದಿಂದ ಗುರುತಿಸಲಾಗದಿದ್ದರೂ ನಾವು ತಿನ್ನುವ ವಸ್ತುಗಳಿಂದ ಉಗುರು ಕಲೆಯಾಗುತ್ತದೆ. ಉದಾ: ದಾಳಿಂಬೆ ಸಿಪ್ಪೆಯನ್ನು ನಿಮ್ಮ ಉಗುರಿನ ಸಹಾಯ ದಿಂದ ತೆಗೆಯುತ್ತೀರೆಂದರೆ ಸ್ವಲ್ಪ ಸಮಯದಲ್ಲಿ ಕಪ್ಪು ಕಪ್ಪು ಕಲೆಯನ್ನು ಉಗುರಿನಲ್ಲಿ ನೀವು ಕಾಣಬಹುದು. ಹಾಗಿದ್ದರೆ ಏನು ಮಾಡಬೇಕು? ಉಗುರು ಬೆಚ್ಚಗಿನ ನೀರಿಗೆ ನಿಂಬೆ ರಸ ಹಿಂಡಿ ಅದರೊಳಗೆ ಕೈಯಾಡಿಸಿ ಮತ್ತೆ ಕೈ ಒರೆಸಿ ಸ್ವತ್ಛಗೊಳಿಸಬೇಕು.
ಈ ಹವ್ಯಾಸ ಬಿಟ್ಟುಬಿಡಿ
ಉಗುರು ದೇಹದ ಅತೀ ಚಿಕ್ಕ ಅಂಶವೆಂದು ಪರಿಗಣಿಸದಿರಿ. ಏಕೆಂದರೆ ಅದೇ ಉಗುರು ದೇಹದ ನರದೊಂದಿಗೆ ಸಂಬಂಧ ಹೊಂದಿದ್ದು ನೋವಾದಾಗ ಜೀವಹೋಗುವಂತಹ ನರಕ ಯಾತನೆ ಅನುಭವಿಸಬೇಕಾಗುತ್ತದೆ. ಪರೀಕ್ಷೆಯ ಉತ್ತರ ಪತ್ರಿಕೆ ನೀಡಿದಂತಹ ಸಂದರ್ಭದಲ್ಲಿ ನಮಗೆ ಅರಿವಿಲ್ಲದಂತೆ ಉಗುರಿನ ತುದಿಯನ್ನು ಕಚ್ಚಿ ತುಂಡರಿಸುತ್ತೇವೆ. ಬಹಳ ಚಿಂತೆಗೊಳಗಾದಾಗ ಅಥವಾ ಆತಂಕಗೊಂಡ ಸಂದರ್ಭದಲ್ಲಿ ನಮ್ಮ ಉಗುರನ್ನು ನಾವೇ ಕಚ್ಚುವ ಚಾಳಿ ಬೆಳೆಸಿಕೊಂಡಿರುತ್ತೇವೆ. ಈ ಹವ್ಯಾಸ ಆರೋಗ್ಯದ ದೃಷ್ಟಿಯಿಂದ ಬಲು ಕೆಟ್ಟದ್ದಾಗಿದೆ.
– ರಾಧಿಕಾ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.