ಸಕಾರಾತ್ಮಕ ಭಾವನೆ ಜೀವನಕ್ಕೆ ಹೊಸ ದಾರಿ
Team Udayavani, May 28, 2019, 6:00 AM IST
ಸ್ಕಿಜೋಫ್ರೆನಿಯಾ (schizophrenia) ದೀರ್ಘಕಾಲದ ಮತ್ತು ತೀವ್ರವಾದ ಮಾನಸಿಕ ಅಸ್ವಸ್ಥತೆಯಾಗಿದ್ದು, ಅದು ಒಬ್ಬ ವ್ಯಕ್ತಿ ಹೇಗೆ ಭಾವಿಸುತ್ತಾನೆ, ವರ್ತಿಸುತ್ತಾನೆ ಎಂಬುದನ್ನು ಅವಲಂಬಿಸಿರುತ್ತದೆ. ಇವರು ವಾಸ್ತವತೆಯ ಸಂಪರ್ಕವನ್ನು ಕಳೆದುಕೊಂಡಿರುತ್ತಾರೆ. ಈ ಕಾಯಿಲೆ ಇರುವವರಿಗೆ ಸಕಾರಾತ್ಮಕ ಭಾವನೆ ಜೀವನಕ್ಕೆ ಹೊಸ ದಾರಿ ತೋರಿಸುತ್ತದೆ.
ರೋಗ ಸೂಚನೆ, ಲಕ್ಷಣಗಳು
ಸಾಮಾನ್ಯವಾಗಿ ಇದು 16 ರಿಂದ 30 ವರ್ಷ ಒಳಗಿನವರಲ್ಲಿ ಕಂಡು ಬರುವ ಹಾಗೂ ಅಪರೂಪವಾಗಿ ಚಿಕ್ಕ ಮಕ್ಕಳಲ್ಲೂ ಕಾಣಿಸುತ್ತದೆ. ಇವರು ವಾಸ್ತವದ ಅರಿವಿಲ್ಲದೆಯೇ ಭ್ರಮೆಯ ಲೋಕಕ್ಕೆ ಇಳಿದು ಬಿಡುತ್ತಾರೆ. ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಕ್ಷೀಣಿಸಿರುತ್ತವೆ. ಯಾವುದೇ ಭಾವನೆಗಳಿಗೆ ಸ್ಪಂದಿಸುವ ಶಕ್ತಿ ಇರುವುದಿಲ್ಲ. ವಂಶವಾಹಿನಿ ಅಥವಾ ಪರಿಸರದ ಮೂಲಕ ಬರಬಹುದು. ಮನೆಯ ವಾತಾವರಣ ಅಥವಾ ಮನಸ್ತಾಪ ಇವೆಲವೂ ಒಂದಲ್ಲಾ ಒಂದು ರೀತಿಯಲ್ಲಿ ಕಾರಣವಾಗಬಹುದು. ಜನನದ ಮೊದಲು ಮೆದುಳಿನ ಅಭಿವೃದ್ಧಿಯಲ್ಲಿ ಉಂಟಾಗುವ ಸಮಸ್ಯೆ ಇದಕ್ಕೆ ಕಾರಣವಾಗಬಹುದು. ಇವತ್ತಿನವರೆಗೂ ಈ ರೋಗಕ್ಕೆ ಚಿಕಿತ್ಸೆಗಳೂ ಕಂಡಬಂದಿಲ್ಲ.
ಮನಶಾಸ್ತ್ರಜ್ಞರ ಚಿಕಿತ್ಸೆ
ಮನಶಾಸ್ತ್ರಜ್ಞರ ಪ್ರಕಾರ ಈ ರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲವಾದರೂ ಕೆಲವು ಕೌಶಲಗಳನ್ನು ಅಳವಡಿಸಿ ಕೊಳ್ಳುವುದರಿಂದ ಈ ಕಾಯಿಲೆಯನ್ನು ಅಲ್ಪ ಮಟ್ಟಿಗೆ ನಿಯಂತ್ರಿಸ ಬಹುದು. ನೆನಪಿನ ಶಕ್ತಿ ಉಳಿಸಲು ಪರ್ಯಾಯ ವ್ಯವಸ್ಥೆಯನ್ನು ಮಾಡಿಟ್ಟುಕೊಳ್ಳುವುದು, ಇಂತಹ ರೋಗಗಳ ಬಗ್ಗೆ ಆದಷ್ಟು ತಿಳಿದುಕೊಳ್ಳುವುದು ಉತ್ತಮ. ಇದರಿಂದ ರೋಗವನ್ನು ಶಮನಮಾಡಲಾಗ ದಿದ್ದರೂ ಹೆಚ್ಚಾಗದಂತೆ ತಡೆಗಟ್ಟಬಹುದು. ಈ ಸಮಸ್ಯೆಯಿಂದ ಹೊರಬರಲು ಉತ್ತಮ ದಾರಿ ಯೋಗ. ಇದನ್ನು ಸತತ ಅಭ್ಯಾಸ ಮಾಡುವುದರಿಂದ ಸ್ಕಿಜೋಫ್ರೆನಿಯಾದಿಂದ ಹೊರಬರಲು ಸಾಧ್ಯವಿದೆ.
ನಾವು ಹೇಗೆ ಸಹಾಯ ಮಾಡಬಹುದು?
ಈ ರೋಗ ಇರುವವರೊಂದಿಗೆ ನಾವು ಹೇಗೆ ಇರಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಅವರೊಂದಿಗೆ ಪ್ರೀತಿಯಿಂದ ವ್ಯವಹರಿಸಬೇಕು ಅದಲ್ಲದೆ ಅವರು ವಾಸ್ತವಕ್ಕೆ ಬರಲು ನಮ್ಮಿಂದಾಗುವ ಸಹಾಯ ಮಾಡಬೇಕು. ಇದು ಕೇವಲ ಒಂದು ಅಸ್ವಸ್ತತೆ ಅಷ್ಟೇ. ಯಾವುದೇ ತೊಂದರೆಗಳಾಗುವುದಿಲ್ಲ ಎಂಬುದನ್ನು ಮನವರಿಕೆ ಮಾಡುವುದು. ಆಗ ಅವರಲ್ಲಿ ಭಯ ಕೊಂಚ ಕಡಿಮೆಯಾಗುತ್ತದೆ. ಒತ್ತಡದ ಸಂದರ್ಭಗಳಲ್ಲಿ ಅವರಲ್ಲಿ ಸಕಾರಾತ್ಮಕ ಭಾವನೆಯನ್ನು ಮೈಗೂಡಿಸಿಕೊಳ್ಳುವಂತೆ ಮಾಡುವುದು. ಆದಷ್ಟು ನಕಾರಾತ್ಮಕವಾಗಿ ಯೋಚಿಸದಂತೆ ನೋಡಿಕೊಳ್ಳುವುದು.
– ಪ್ರೀತಿ ಭಟ್ ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.