ರುಚಿಯ ಜತೆ ಆರೋಗ್ಯ ಹೆಚ್ಚಿಸುವ ಮಣ್ಣಿನ ಪಾತ್ರೆ
Team Udayavani, Dec 17, 2019, 5:59 AM IST
ಪುರಾತನ ಕಾಲದಿಂದಲೂ ಮಣ್ಣಿನ ಪಾತ್ರೆಯಲ್ಲಿ ಮಾಡುವ ಅಡುಗೆ ತನ್ನದೇ ಆದ ಪ್ರಾಮುಖ್ಯತೆ ಹೊಂದಿತ್ತು. ಮಣ್ಣಿನ ಪಾತ್ರೆಯಿಂದ ಮಾಡುವ ಅಡುಗೆಯಿಂದ ರುಚಿಯ ಜತೆಗೆ ಉತ್ತಮ ಆರೋಗ್ಯವನ್ನೂ ಪಡೆಯಬಹುದು. ದೇಹದ ಆರೋಗ್ಯಕ್ಕೂ ಇದು ಹೇಗೆ ಉಪಯುಕ್ತ ಎನ್ನುವುದನ್ನು ಗಮನಿಸೋಣ:
ಕಡಿಮೆ ಕೊಬ್ಬಿನಾಂಶ
ಸಾಮಾನ್ಯ ಪಾತ್ರೆಗಳಿಗೆ ಹೋಲಿಸಿದರೆ ಮಣ್ಣಿನ ಪಾತ್ರೆಯಲ್ಲಿ ಸಾಂಬಾರು, ಸಾರು ಇನ್ನಿತರ ಅಡುಗೆ ಮಾಡುವಾಗ ಎಣ್ಣೆ ಅಧಿಕ ಉಪಯೋಗಿಸುವ ಅಗತ್ಯವಿರಲಾರದು. ಇದರಿಂದಾಗಿ ಕಡಿಮೆ ಎಣ್ಣೆಯನ್ನು ಬಳಸಿ ಉಚಿಯಾದ ಅಡುಗೆ ಸಿದ್ಧವಾಗುತ್ತದೆ. ಈ ಕಾರಣದಿಂದ ಅನಗತ್ಯ ಕೊಬ್ಬು$ದೇಹಕ್ಕೆ ಹೋಗುವುದನ್ನು ತಡೆಯಲು ಸಾಧ್ಯವಾಗುತ್ತದೆ.
ಬಿಸಿಬಿಸಿ ಆಹಾರ
ಇತ್ತೀಚಿನ ದಿನಗಳಲ್ಲಿ ಸದಾ ಕಾಲ ಆಹಾರವನ್ನು ಬಿಸಿಯಾಗಿರಿಸಲು ಹಾಟ್ ಬಾಕ್ಸ್ ಮೊರೆ ಹೋಗುತ್ತೇವೆ. ಕೆಲವೊಮ್ಮೆ ಆಹಾರ ಬಿಸಿಯಾಗಿದ್ದರೂ ರುಚಿಯಲ್ಲಿ ಏನೋ ವ್ಯತ್ಯಾಸ ಕಂಡುಬಂದಂತೆ ಭಾಸವಾಗುತ್ತದೆ. ಆದರೆ ಮಣ್ಣಿನ ಪಾತ್ರೆಯಲ್ಲಿ ಮಾಡಿದ ಆಹಾರ ಧೀರ್ಘಕಾಲ ಬಿಸಿಯಾಗಿಯೂ ರುಚಿಕರವಾಗಿಯೂ ಇರುತ್ತದೆ.
ಅಧಿಕ ಪೋಷಕಾಂಶ
“ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಮಾತು ನಿಮಗೆ ನೆನಪಿರಬಹುದು ನೈಸರ್ಗಿಕ ಅಂಶಗಳನ್ನು ಹೊಂದಿರುವ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುವುದರಿಂದ ಆಹಾರದ ಪೋಷಕಾಂಶಗಳನ್ನು ನೈಸರ್ಗಿಕವಾಗಿ ಪಡೆಯಲು ಸಾಧ್ಯವಾಗುತ್ತದೆ. ಇಂದು ಬಹುತೇಕ ರೆಸ್ಟೋರೆಂಟ್‌ಗಳು ಆಹಾರವನ್ನು ನೀಡುವಾಗ ಮಣ್ಣಿನ ಮಡಕೆಯನ್ನು ಉಪಯೋಗಿಸುತ್ತವೆ. ಯಾಕೆಂದರೆ ತಿನ್ನಲೂ ಖುಷಿ ನೀಡುವುದರೊಂದಿಗೆ ಆಹಾರದ ಸ್ವಾದ ಕೆಡದಂತೆ ಇದು ಕಾಪಾಡುತ್ತದೆ.
ಸದಾ ತಂಪಾಗಿರುತ್ತದೆ
ಇಂದಿನ ಹೆಚ್ಚಿನ ಮನೆಗಳಲ್ಲಿ ಮಡಕೆಯಲ್ಲಿ ನೀರು ಶೇಖರಿಸಿ ಕುಡಿಯುವುದನ್ನು ಕಂಡಿರಬಹುದು. ಸುಡು ಬಿಸಿಲಿದ್ದರೂ ಮಡಕೆಯಲ್ಲಿಟ್ಟ ನೀರು ಸದಾ ತಣ್ಣಗೆ ಇರುತ್ತದೆ. ಈ ನೀರನ್ನು ಸೇವಿಸುವುದರಿಂದ ಶೀತ, ಅಸ್ತಮಾ ಮುಂತಾದ ಸೂಕ್ಷ್ಮ ರೋಗಗಳಿಂದ ಪಾರಾಗಬಹುದು. ಮಣ್ಣಿನ ಪ್ರಾಕೃತಿಕ ಗುಣಗಳನ್ನಾಧರಿಸಿ ನೀರು ತಣ್ಣಗಾಗುವುದರಿಂದ ಅಧಿಕ ನೀರು ಕುಡಿಯುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಹಾಗಾಗಿ ದೇಹದಲ್ಲಿ ನೀರಿನಾಂಶ ಕಡಿಮೆಯಾಗುವ ಸಮಸ್ಯೆಯಿಂದ ಪಾರಾಗಬಹುದು.
ಜೀರ್ಣಕ್ರಿಯೆ
ದೇಹದ ಜೀರ್ಣ ಕ್ರಿಯೆಯನ್ನು ಸಮರ್ಪಕವಾಗಿಸಲು ಮಣ್ಣಿನ ಪಾತ್ರೆಯ ಆಹಾರ ಸಹಕಾರಿ. ಇದು ಪೋಷಕಾಂಶಗಳನ್ನು ದೇಹಕ್ಕೆ ಒದಗಿಸಲು ಪ್ರಮುಖ ಪಾತ್ರವಹಿಸುತ್ತವೆ. ಇದರಿಂದ ಆಹಾರ ಬೇಗ ಜೀರ್ಣವಾಗುತ್ತದೆ.
- ರಾಧಿಕಾ ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.