ಚರ್ಮದ ಆರೋಗ್ಯಕ್ಕೆ ಅಕ್ಕಿ ಹುಡಿ
Team Udayavani, Jul 30, 2019, 5:00 AM IST
ಎಲ್ಲಒಂದಲ್ಲ ಒಂದು ಬಾರಿ ಕೆಲವೊಂದು ಚರ್ಮದ ಸಮಸ್ಯೆಯನ್ನು ಅನುಭವಿಸಿರುತ್ತೀರಿ. ಆರೋಗ್ಯಕರ ಚರ್ಮವನ್ನು ನಿರ್ವಹಿಸುವುದು ಸುಲಭದ ಕೆಲಸವಲ್ಲ. ಚರ್ಮದ ಕಾಳಜಿ ಅತೀ ಮುಖ್ಯ. ಇದಕ್ಕಾಗಿ ನೈಸರ್ಗಿಕ ವಸ್ತುಗಳನ್ನು ಬಳಸುವುದು ಹೆಚ್ಚು ಸೂಕ್ತ. ಚರ್ಮದ ಆರೋಗ್ಯಕ್ಕೆ ಮನೆಯ ಅಡುಗೆ ಮನೆಯಲ್ಲಿ ಲಭ್ಯವಿರುವ ಅಕ್ಕಿ ಹುಡಿ ಪರಿಣಾಮಕಾರಿಯಾಗಿದೆ.
ಬಳಕೆ ಹೇಗೆ?
· ಮೊಡವೆಗೆ ಒಂದು ಸ್ಪೂನ್ ಅಕ್ಕಿ ಹುಡಿ, ಒಂದು ಸ್ಪೂನ್ ಅಲೋವೆರಾ ಜೆಲ್ ಹಾಗೂ ಒಂದು ಸ್ಪೂನ್ ಜೇನುತುಪ್ಪದ ಮಿಶ್ರಣವನ್ನು ಮುಖಕ್ಕೆ ಹಂಚಿ 20 ನಿಮಿಷಗಳ ಕಾಲ ಹಾಗೆ ಬಿಟ್ಟು ಅನಂತರ ತೊಳೆಯಿರಿ
· ಕಪ್ಪುವರ್ತುಲಕ್ಕೆ ಒಂದು ಸ್ಪೂನ್‌ಅಕ್ಕಿ ಹುಡಿ, ಒಂದು ಸ್ಪೂನ್ ಹಿಚುಕಿದ ಬಾಳೆಹಣ್ಣು, ಹರಳೆಣ್ಣೆ ಮಿಕ್ಸ್ ಮಾಡಿ ಕಣ್ಣಿನ ಕೆಳಗಿನ ಭಾಗಕ್ಕೆ ಹಚ್ಚಿ. ಅದನ್ನು 30 ನಿಮಿಷ ಹಾಗೇ ಬಿಟ್ಟು ಬಳಿಕ ನೀರಿನಿಂದ ಮುಖ ತೊಳೆಯಿರಿ.
· ಸನ್‌ಟ್ಯಾನ್ ಗೆ 2 ಸ್ಪೂನ್ ಅಕ್ಕಿ ಹುಡಿ, ಹಸಿ ಹಾಲನ್ನು ಹಾಕಿ ಪೇಸ್ಟ್ ತಯಾರಿಸಿಕೊಂಡ ಟ್ಯಾನ್ ಆದ ಜಾಗಗಳಿಗೆ ಹಾಕಿ 30 ನಿಮಿಷ ಬಿಟ್ಟುಬಿಡಿ.
ಅಕ್ಕಿ ಹುಡಿಯ ಪ್ರಯೋಜನಗಳು
· ಮೊಡವೆಗಳ ವಿರುದ್ಧ ಹೋರಾಡುತ್ತದೆ.
· ಚರ್ಮವನ್ನು ಮೃದುವಾಗಿಸುತ್ತದೆ.
· ಮುಖಕ್ಕೆ ನೈಸರ್ಗಿಕ ಕಾಂತಿ ನೀಡುತ್ತದೆ
· ಚರ್ಮದ ಟೋನ್ ಅನ್ನು ಕಡಿಮೆಗೊಳಿಸುತ್ತದೆ
· ಕಪ್ಪು ವರ್ತುಲಗಳನ್ನು ಕಾಣದಂತೆ ಮಾಡುತ್ತದೆ.
· ಸೂರ್ಯಕಿರಣಗಳಿಂದ ಉಂಟಾದ ಸನ್‌ಟಾನ್ ಅನ್ನು ಕಡಿಮೆಗೊಳಿಸುತ್ತದೆ.
ಅಕ್ಕಿ ಹುಡಿ ಚರ್ಮವನ್ನು ಮೃದುವಾಗಿಸುತ್ತದೆ. ಚರ್ಮದ ಜಲಸಂಚಯವನ್ನು ಸುಧಾರಿಸುತ್ತದೆ. ಸೂರ್ಯ ಹಾನಿಕಾರಕ ಕಿರಣಗಳಿಂದ ಚರ್ಮ ವನ್ನು ರಕ್ಷಿಸುವ ಫೆರುಲಿಕ್ ಆಮ್ಲವನ್ನು ಅಕ್ಕಿ ಹುಡಿ ಹೊಂದಿದೆ.
- ಆರ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.