ಶಿಲೀಂಧ್ರ ಸೋಂಕು ನಿರ್ಲಕ್ಷಿಸಿದರೆ ಅಪಾಯ ನಿಶ್ಚಿತ
Team Udayavani, Jan 7, 2020, 5:00 AM IST
ಶಿಲೀಂಧ್ರಗಳು ನಮ್ಮ ದೇಹದ ಸಮತೋಲನವನ್ನು ಏರುಪೇರು ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಹಲವು ರೋಗಗಳಿಗೆ ಕಾರಣವಾಗಿದ್ದು, ಬಹಳಷ್ಟು ರೋಗಗಳು ಮಾರಣಾಂತಿಕವಾಗಿವೆ.
ಮನುಷ್ಯನ ದೇಹಕ್ಕೆ ಕಾಯಿಲೆ ಅಂಟಿಕೊಳ್ಳಲು ತಿನ್ನುವ ಆಹಾರ, ಕುಡಿಯುವ ಪಾನೀಯ, ಉಸಿರಾಡುವ ಅಶುದ್ಧ ಗಾಳಿಯೇ ಕಾರಣವಾಗಬೇಕೆಂದಿಲ್ಲ. ಸುತ್ತಮುತ್ತಲಿನ ಪರಿಸರ, ದಿನನಿತ್ಯ ಓಡಾಡುವ ವಾತಾವರಣಗಳೇ ವಿವಿಧ ರೀತಿಯ ಸೋಂಕುಗಳನ್ನು ತಂದೊಡ್ಡಬಹುದು. ಅಂತಹ ರೋಗ ಹರಡುವ ಪ್ರಮುಖ ಕಾರಣಗಳಲ್ಲಿ ಶಿಲೀಂಧ್ರಗಳೂ ಒಂದು.
ಶಿಲೀಂಧ್ರ ಒಂದು ಬಗೆಯ ಸೂಕ್ಷ್ಮಾಣು ಜೀವಿ. ಅತೀ ಸೂಕ್ಷ್ಮವಾಗಿರುವುದರಿಂದ ಬರಿಗಣ್ಣಿಗೆ ಕಾಣದೇ ಇರುವಂತಹ ಶಿಲೀಂಧ್ರಗಳು ಮನುಷ್ಯನ ದೇಹದೊಳಗೆ ಗೊತ್ತಿಲ್ಲದೇ ಪ್ರವೇಶಿಸಿ ಹಾನಿಕಾರಕವಾಗಿ ಪರಿಣಮಿಸುತ್ತವೆ. ಶರೀರದ ರೋಗನಿರೋಧಕ ಶಕ್ತಿ ಕುಂಠಿತಗೊಂಡಾಗ ಈ ಶಿಲೀಂಧ್ರಗಳು ಸೋಂಕುಗಳಿಗೆ ಕಾರಣವಾಗುತ್ತವೆ.
ಗಾಳಿ, ನೀರು, ಮಣ್ಣು ಸೇರಿದಂತೆ ವಿವಿಧ ಮೂಲಗಳಿಂದ ಈ ಶಿಲೀಂಧ್ರಗಳು ಮನುಷ್ಯನ ದೇಹ ಸೇರಿ ಪರಿಣಾಮ ಬೀರುತ್ತವೆ. ಮಧುಮೇಹಿಗಳಲ್ಲಿ ರಕ್ತದ ಸಕ್ಕರೆ ಅಂಶ ಹೆಚ್ಚಿರುವುದರಿಂದ, ದೀರ್ಘಕಾಲಿಕ ಆ್ಯಂಟಿಬಯೋಟಿಕ್ ಅಥವಾ ಸ್ಟಿರಾಯ್ಡ ಬಳಕೆಯೂ ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು. ಶಿಲೀಂಧ್ರಗಳು ಅತ್ಯಂತ ಸೌಮ್ಯ ಸ್ವರೂಪಗಳಿಂದ ಹಿಡಿದು ಅಪಾಯ ಎನಿಸುವ ಸೋಂಕುಗಳಿಗೂ ಕಾರಣವಾಗಬಹುದು. ಅನ್ನನಾಳ, ಮೆದುಳಿನ ಮೇಲ್ಕವಚ, ಪುರುಷರಲ್ಲಿ ಮೂತ್ರದ್ವಾರ, ಮಹಿಳೆಯರಲ್ಲಿ ಯೋನಿಯ ದ್ವಾರ ಸೇರಿದಂತೆ ವಿವಿಧ ಅಂಗಗಳಿಗೆ ಶಿಲೀಂಧ್ರಗಳ ಸೋಂಕು ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಮುಂಜಾಗ್ರತ ಕ್ರಮವಿರಲಿ
ಶಿಲೀಂಧ್ರಗಳ ಬೆಳವಣಿಗೆಗೆ ತೇವಾಂಶವೇ ಕಾರಣವಾಗಿರುತ್ತದೆ. ದೇಹದ ಯಾವುದೇ ಭಾಗ ತೇವಾಂಶದಿಂದ ಕೂಡಿರದಂತೆ ನೋಡಿಕೊಳ್ಳಿ. ಸ್ನಾನ ಮಾಡಿದ ಅನಂತರ ದೇಹವನ್ನು ಬಾತ್ ಟವೆಲ್‌ನಿಂದ ಸರಿಯಾಗಿ ಒರೆಸಿಕೊಳ್ಳಬೇಕು. ಸ್ವತ್ಛ ಕಾಲುಚೀಲ, ಟವೆಲ್, ಬಟ್ಟೆಗಳನ್ನು ಪ್ರತಿನಿತ್ಯ ಬಳಸಬೇಕು. ತೇವಾಂಶರಹಿತ ಒಳ ಉಡುಪು, ಒಳಲಂಗಗಳನ್ನು ಬಳಸಬೇಕು. ಸಾಬೂನು, ಬಾಚಣಿಗೆಯನ್ನು ಇನ್ನೊಬ್ಬರು ಬಳಸದಂತೆ ಜಾಗೃತೆ ವಹಿಸಿ. ವಾರದಲ್ಲಿ ಕನಿಷ್ಠ ಎರಡು ಬಾರಿ ತಲೆ ಸ್ನಾನ ಮಾಡಬೇಕಾದುದು ಅತೀ ಅವಶ್ಯ.
ಹಳ್ಳಿಮದ್ದು
ಇನೆ#ಕ್ಷನ್ ರಿಂಗ್‌ವರ್ಮ್ ಎಂತಲೂ ಕರೆಯಲ್ಪಡುವ ಫಂಗಸ್ ಸೋಂಕುಗಳು ಹೆಚ್ಚಾಗಿ ಬೆರಳ ಸಂಧಿಯಲ್ಲೇ ಕಾಣಿಸಿಕೊಳ್ಳುತ್ತವೆ. ಉಗುರು ಸುತ್ತು ಎಂದೂ ಇದನ್ನು ಹೇಳಲಾಗುತ್ತದೆ. ತೆಂಗಿನೆಣ್ಣೆಯನ್ನು ಬಿಸಿ ಮಾಡಿ ಈ ಜಾಗದಲ್ಲಿ ಒಂದು ವಾರ ನಿರಂತರ ಹಚ್ಚಿದರೆ ಫಂಗಸ್ ಕಡಿಮೆಯಾಗುತ್ತದೆ. ಎರಡು ಟೀ ಸ್ಪೂನ್ ತೆಂಗಿನ ಎಣ್ಣೆಗೆ ಒಂದೆರಡು ಬೆಳ್ಳುಳ್ಳಿ ಜಜ್ಜಿ ಹಾಕಿ ಬಿಸಿ ಮಾಡಿ ಅನಂತರ ಅದೇ ಎಣ್ಣೆಯಲ್ಲಿ ಈ ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡಿ ಶಿಲೀಂಧ್ರ ಸೋಂಕು ಆಗಿರುವ ಜಾಗಕ್ಕೆ ಹಚ್ಚಿದರೆ ಕ್ರಮೇಣ ರೋಗ ವಾಸಿಯಾಗುತ್ತದೆ. ಅರ್ಧ ಟೇಬಲ್ ಸ್ಪೂನ್ ಬೇಕಿಂಗ್ ಸೋಡಾವನ್ನು ಒಂದೆರಡು ಸ್ಪೂನ್ ಬಿಸಿ ನೀರಿನೊಂದಿಗೆ ಮಿಶ್ರಣ ಮಾಡಿ ಆ ಜಾಗಕ್ಕೆ ಹಚ್ಚಿಕೊಂಡರೆ ಪರಿಣಾಮಕಾರಿಯಾಗುತ್ತದೆ.
ಶಿಲೀಂಧ್ರ ಸೋಂಕಿನ ಲಕ್ಷಣಗಳು
ಕುತ್ತಿಗೆ, ಭುಜ, ಬೆನ್ನಿನ ಮೇಲೆ ದುಂಡಗಿನ ಅಥವಾ ಬಿಳಿ, ಕೆಂಪು, ಕಪ್ಪು, ಕಂದು ಬಣ್ಣದ ಆಕಾರರಹಿತ ಮಚ್ಚೆಗಳು, ಈ ಮಚ್ಚೆಗಳಲ್ಲಾಗುವ ತುರಿಕೆ, ತೊಡೆ ಸಂಧಿ, ಕಂಕಳು, ಕೈ, ಕಾಲು ಬೆರಳಿನ ಸಂಧಿ, ಸ್ತನಗಳ ಕೆಳಭಾಗದಲ್ಲಿ, ಸೊಂಟದ ಭಾಗದಲ್ಲಿ ಚರ್ಮದ ಬಣ್ಣ ಬದಲಾಗುವುದು, ಉರಿ, ತುರಿಕೆ ಉಂಟಾಗುವುದು ಮುಂತಾದವು ಫಂಗಸ್ ಸೋಂಕಿನ ಲಕ್ಷಣವಾಗಿವೆೆ. ಇಂತಹ ಲಕ್ಷಣಗಳು ಕಂಡು ಬಂದರೆ ತಡ ಮಾಡದೇ, ವೈದ್ಯರಲ್ಲಿಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಸೋಂಕನ್ನು ನಿರ್ಲಕ್ಷé ಮಾಡಿದರೆ ಮುಂದೆ ಜೀವಕ್ಕೂ ಅಪಾಯವಾಗುವ ಸನ್ನಿವೇಶಗಳು ಎದುರಾಗುತ್ತವೆ.
ಸ್ವತ್ಛತೆ ಅಗತ್ಯ
ತೇವಾಂಶ ಅಧಿಕವಾಗಿರುವ ಪ್ರದೇಶಗಳಲ್ಲಿ ಶಿಲೀಂಧ್ರ ಸೋಂಕು ಅಂಟಿಕೊಳ್ಳುವ ಸಾಧ್ಯತೆ ಹೆಚ್ಚು. ಶ್ವಾಸಕೋಶ, ಮೆದುಳಿಗೆ ಈ ಸೋಂಕು ತಗುಲಿದರೆ ಅಪಾಯಕಾರಿ. ಅತಿಯಾಗಿ ಶಿಲೀಂಧ್ರ ಸೋಂಕುಗಳು ಕಾಣಿಸಿಕೊಳ್ಳುವುದು ಚರ್ಮದ ಕಾಯಿಲೆಗಳ ಮುಖಾಂತ. ಆ್ಯಂಟಿಬಯೋಟಿಕ್ ತೆಗೆದುಕೊಳ್ಳುವವರು, ಮಧುಮೇಹಿಗಳು ಜಾಗ್ರತೆ ವಹಿಸಬೇಕು. ಸ್ವತ್ಛತೆಯೆಡೆಗೆ ಜಾಸ್ತಿ ಗಮನ ಕೊಡಬೇಕು. ಸಣ್ಣ ಲಕ್ಷಣ ಕಂಡು ಬಂದರೂ ವೈದ್ಯರನ್ನು ಸಂಪರ್ಕಿಸಬೇಕು.
– ಡಾ| ನವೀನ್‌ಚಂದ್ರ,ವೈದ್ಯರು
-ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.