ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ
Team Udayavani, Mar 17, 2020, 5:40 AM IST
ಆಧುನಿಕ ಜೀವನಶೈಲಿ ಕೆಲಸಗಳನ್ನು ಕಡಿಮೆ ಮಾಡಿದೆ. ಆದರೆ, ರೋಗಗಳನ್ನು ಜಾಸ್ತಿ ಮಾಡಿದೆ. ಹೌದು. ಕಂಪ್ಯೂಟರ್ ಯುಗಾರಂಭವಾದ ಮೇಲೆ ಮನುಷ್ಯನ ಕೆಲಸಗಳು ಶೇ. 50ರಷ್ಟು ಕಡಿಮೆಯಾಗಿದೆ. ಆದರೆ, ಅದೇ ಕಂಪ್ಯೂಟರ್ ಶೇ. 50ರಷ್ಟು ರೋಗವನ್ನು ಮನುಷ್ಯನ ಮೇಲೆ ಹುಟ್ಟುಹಾಕಿದೆ ಎಂದರೆ ನಂಬಲೇಬೇಕು.
ಕಂಪ್ಯೂಟರ್ ಕಾರಣದಿಂದ ಬರುವ ಬಹುಮುಖ್ಯ ರೋಗಗಳ ಪೈಕಿ ಕತ್ತು ನೋವೂ ಒಂದು. ಪ್ರಸ್ತುತ ದಿನಗಳಲ್ಲಿ ಕುತ್ತಿಗೆ ನೋವಿನ ಕಾರಣ ಸಾಮಾನ್ಯವಾಗಿಬಿಟ್ಟಿದೆ. ಕುತ್ತಿಗೆ ನೋವಿನ ಕಾರಣ ಕುತ್ತಿಗೆಗೆ ಪಟ್ಟಿ ಧರಿಸಿಕೊಂಡು ಓಡಾಡುವವರ ಸಂಖ್ಯೆಯೂ ಜಾಸ್ತಿಯಾಗಿದೆ.
ಕುಳಿತುಕೊಳ್ಳುವ ಭಂಗಿ ಕಾರಣ
ಬೆನ್ನೆಲುಬಿನಲ್ಲಿರುವ ಬೆನ್ನು ಹುರಿಯ ಜೋಡಣೆಯಲ್ಲಿ ನಮಗೇ ಗೊತ್ತಿಲ್ಲದಂತೆ ಸ್ವಲ್ಪ ವ್ಯತ್ಯಾಸವಾದಾಗ ಕತ್ತು ನೋವು ಬರುತ್ತದೆ. ಕುತ್ತಿಗೆಯಲ್ಲಿ ಶುರುವಾಗುವ ನೋವು ಬೆನ್ನು, ಭುಜ, ಕೈ ಬೆರಳಿಗೂ ಹರಡುವುದು ಸಾಮಾನ್ಯವಾಗುತ್ತಿದೆ. ಕುಳಿತುಕೊಳ್ಳುವ ಭಂಗಿಯೂ ಕತ್ತು ನೋವಿಗೆ ಕಾರಣವಾಗುತ್ತದೆ. ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವ ಹಲವರಿಗೆ ಕತ್ತು ನೋವು ಬರುವುದು ಇದೇ ಕಾರಣಕ್ಕಾಗಿ ಕಂಪ್ಯೂಟರ್‌ನ ಪರದೆ ಕಣ್ಣಿಗೆ ಸಮಾನಾರ್ಥವಾಗಿ ಇರಬೇಕು. ಸ್ವಲ್ಪ ಎತ್ತರ ತಗ್ಗು ಇದ್ದರೂ ಕತ್ತು ನೋವು ಬರುವ ಸಾಧ್ಯತೆ ಇರುತ್ತದೆ.
ಮಲಗುವುವ ರೀತಿಯಿಂದಲೂ ಕತ್ತು ನೋವು
ಮಲಗುವುವ ರೀತಿಯಿಂದಲೂ ಕತ್ತು ನೋವು ಬರುತ್ತದೆ. ಶಿಸ್ತುಬದ್ಧವಾಗಿ ಮಲಗದೆ, ಒಟ್ಟಾರೆಯಾಗಿ ಮಲಗಿದರೆ ಕತ್ತು ನೋವು ಕಾಡಬಹುದು. ಕವಚಿ ಮಲಗುವ ಅಭ್ಯಾಸ ಇದ್ದವರು ಉಸಿರಾಡಲು ತಲೆಯನ್ನು ಎಡ ಅಥವಾ ಬಲಕ್ಕೆ ಇಡುತ್ತಾರೆ. ಇದರಿಂದ ನರಗಳಿಗೆ ಒತ್ತಡ ಲಭಿಸಿ ಕತ್ತು ನೋವು ಬರುವ ಸಾಧ್ಯತೆ ಇರುತ್ತದೆ.
ಮಲಗುವಾಗ ಬಳಸುವ ದಿಂಬು ಕೂಡ ಕತ್ತು ನೋವಿಗೆ ಕಾರಣವಾಗುತ್ತದೆ. ಕತ್ತು ನೋವಿದ್ದಾಗ ಗಟ್ಟಿಯಾದ, ದಪ್ಪನೆಯ ತಲೆದಿಂಬುಗಳನ್ನು ಉಪಯೋಗಿಸುವುದು ತಪ್ಪು. ತೆಳುವಾದ ತಲೆದಿಂಬು ಇಟ್ಟು ಮಲಗುವುದು ಆರಾಮದಾಯಕ ನಿದ್ದೆ ತರಿಸಬಲ್ಲದು. ಕಂಪ್ಯೂಟರ್ ಎದುರು ಕುಳಿತುಕೊಳ್ಳುವಾಗ ಚಯರ್‌ನ್ನೂ ಸರಿಯಾಗಿ ಸೆಟ್ ಮಾಡಿಕೊಳ್ಳಬೇಕು. ಮಾನಸಿಕ ಒತ್ತಡ, ಕೆಲಸದ ಒತ್ತಡದಿಂದ ಕತ್ತು ನೋವು ಬರುವ ಅಪರೂಪದ ಸಾಧ್ಯತೆಗಳೂ ಇಲ್ಲದಿಲ್ಲ.
ಪ್ರಥಮ ಚಿಕಿತ್ಸೆ
ಕತ್ತು ನೋವು ಅಥವಾ ಕುತ್ತಿಗೆ ನೋವು ಪ್ರಸ್ತುತ ಸರ್ವ ಸಾಮಾನ್ಯವಾಗಿ ಕಾಡುವ ರೋಗವಾಗಿದೆ. ಹೆಚ್ಚು ಸಮಯ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದರಿಂದ ಕತ್ತು ನೋವು ಸಹಜವಾಗಿಯೇ ಕಾಡುತ್ತದೆ. ನೋವು ಕಾಣಿಸಿಕೊಂಡ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತ ಬರುವುದಕ್ಕೆ ಮುಂಚೆಯೇ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಸಣ್ಣ ಮಟ್ಟಿನಲ್ಲಿ ನೋವು ಕಾಣಿಸಿಕೊಂಡರೆ ಕುತ್ತಿಗೆಯನ್ನು ನಿಧಾನಕ್ಕೆ ಸುತ್ತಲೂ ತಿರುಗಿಸುತ್ತಿರಬೇಕು. ಗಡಿಯಾರದಂತೆ ಎಡ-ಬಲ, ಮೇಲೆ-ಕೆಳಗೆ ಕುತ್ತಿಗೆಯನ್ನು ವಾಲಿಸುತ್ತಿರುವುದರಿಂದ ಕುತ್ತಿಗೆ ನೋವು ಕಡಿಮೆ ಮಾಡಬಹುದು. ಕುರ್ಚಿ ಮೇಲೆ ನೇರವಾಗಿ ಕುಳಿತು ಎದೆಯ ಮಟ್ಟಕ್ಕೆ ಗದ್ದವನ್ನು ಭಾಗಿಸಿದರೆ ಸ್ವಲ್ಪ ಶಮನಕಾರಿಯಾಗುತ್ತದೆ. ಎಡಕಿವಿಯನ್ನು ಎಡಭುಜಕ್ಕೆ, ಬಲಕಿವಿಯನ್ನು ಬಲಭುಜಕ್ಕೆ ತಾಕುವುದರಿಂದ ಮತ್ತು 20 ಸೆಕೆಂಡ್ ಕಾಲ ಹಾಗೆಯೇ ಇರುವುದರಿಂದ ಸಣ್ಣ ಮಟ್ಟಿನ ಕುತ್ತಿಗೆ ನೋವು ನಿವಾರಣೆಯಾಗುತ್ತದೆ.
ವ್ಯಾಯಾಮವೇ ಮದ್ದು
ಯಾವುದೇ ನೋವು ಕಾಣಿಸಿಕೊಂಡರೂ ಆರಂಭಿಕ ಹಂತದಿಂದ ಬೆಳೆಯಲು ಬಿಡದೆ, ತತ್‌ಕ್ಷಣ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಬೇಕು. ಸೂಕ್ತ ವ್ಯಾಯಾಮಶೈಲಿಯನ್ನು ದಿನನಿತ್ಯದ ಭಾಗವಾಗಿಸಿದರೆ ಕತ್ತು ನೋವಿನಿಂದ ಮುಕ್ತಿ ಪಡೆಯಬಹುದು.
ಕತ್ತುನೋವಿಗೆ ಹಲವು ಕಾರಣ
ಕಂಪ್ಯೂಟರ್ ಕೆಲಸ ಮಾಡುವವರಲ್ಲಿ ಕತ್ತು ನೋವು ಸಾಮಾನ್ಯ. ವಯಸ್ಸಾದಂತೆ ಎಲುಬಿನ ಸವೆತ ಉಂಟಾಗಿ ಕತ್ತು ನೋವು ಬರುತ್ತದೆ. ತಲೆ ಮೇಲೆ ಭಾರ ಹೊರುವವರು, ಅರ್ಹವಲ್ಲದ ಭಂಗಿಯಲ್ಲಿ ಕುಳಿತು ಮೊಬೈಲ್, ಲ್ಯಾಪ್‌ಟಾಪ್ ಬಳಕೆ ಮಾಡುವುದು, ಕುತ್ತಿಗೆ ಬಗ್ಗಿಸಿ ಮೊಬೈಲ್ ನೋಡುತ್ತಾ ಕೂರುವುದು, ನಿರಂತರ ತಲೆ ಅಲುಗಾಡಿಸದೆ, ಒಂದೇ ಭಂಗಿಯಲ್ಲಿ ಕುಳಿತು ನಿರಂತರ ಕೆಲಸ ಮಾಡುವುದು ಮುಂತಾದವು ಬೆನ್ನು ನೋವಿಗೆ ಕಾರಣ.
- ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.