ಉಪ್ಪು ನೀರು ಆರೋಗ್ಯಕ್ಕೆ ಪೂರಕ
Team Udayavani, Feb 18, 2020, 5:14 AM IST
ಉಪ್ಪು ಆಹಾರ ತಯಾರಿಕೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆಹಾರ ಎಷ್ಟೇ ಚೆನ್ನಾಗಿದ್ದರೂ ಉಪ್ಪಿನಂಶಇಲ್ಲದಿದ್ದರೆ ಅದರ ರುಚಿ ಕೆಟ್ಟು ಹೋಗುತ್ತದೆ. ಉಪ್ಪು ರುಚಿಯ ಜತೆಗೆ ದೇಹಕ್ಕೂ ಹಲವಾರು ಪ್ರಯೋಜನಗಳಿವೆ. ದೇಹದ ಮೂಳೆಗಳು ಗಟ್ಟಿಯಾಗಲು ಉಪ್ಪು ಅಗತ್ಯವಾಗಿರುತ್ತದೆ. ಕೇವಲ ಉಪ್ಪು ಮಾತ್ರವಲ್ಲ, ಉಪ್ಪಿನ ನೀರಿನಿಂದ ಕೂಡ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ದೇಹದ ಸರಿಯಾದ ಬೆಳವಣಿಗೆಗೆ ಉಪ್ಪು ನೀರಿನ ಅಗತ್ಯವಿರುತ್ತದೆ.
ಉಪ್ಪು ನೀರಿನ ಸೇವನೆ
ಉಪ್ಪು ನೀರಿನಲ್ಲಿ ಸೋಡಿಯಂ ಕ್ಲೋರೈಡ್‌ನ ಪ್ರಮಾಣ ಅಧಿಕವಾಗಿರುತ್ತದೆ. ಇದನ್ನು ಸೇವಿಸುವುದರಿಂದ ರಕ್ತ ಪರಿಚಲನೆಗೆ ಹೆಚ್ಚು ಸಹಾಯವಾಗುತ್ತದೆ. ಹಾಗೂ ರಕ್ತದೊತ್ತಡವನ್ನು ಸರಿಯಾಗಿರುವಂತೆ ಈ ಲವಣಯುಕ್ತ ನೀರು ಸಹಕರಿಸುತ್ತದೆ. ಎಲುಬು ಸವೆತದ ಸಮಸ್ಯೆ ಇರುವವರು ಮುಖ್ಯವಾಗಿ ಉಪ್ಪು ನೀರು ಕುಡಿಯಬೇಕಾಗುತ್ತದೆ.
ಗಂಟಲು ನೋವಿಗೆ ರಾಮಬಾಣ
ಕೆಮ್ಮ ಅಥವಾ ಗಂಟಲು ನೋವಿನ ಸಮಸ್ಯೆ ಇರುವವರು ಉಪ್ಪು ನೀರಿನಿಂದ ಗಾರ್ಗಲ್ ಮಾಡುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ. ಪ್ರತಿ ನಿತ್ಯ ರಾತ್ರಿ ಒಂದು ಗ್ಲಾಸ್ ನೀರಿಗೆ ಅರ್ಥ ಹಿಡಿ ಉಪ್ಪು ಬೆರೆಸಿ ಗಾರ್ಗಲ್ ಮಾಡುವುದರಿಂದ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಇದು ಕೇವಲ ಗಂಟಲು ಮಾತ್ರವಲ್ಲ ಬಾಯಿಯಲ್ಲಿರುವ ಎಲ್ಲ ಬ್ಯಾಕ್ಟೀರಿಯಾಗಳನ್ನು ನಾಶ ಪಡಿಸಲು ಸಹಕಾರಿ.
ಉಪ್ಪು ನೀರಿನ ಸ್ನಾನ
ತೀರ್ಥ ಸ್ನಾನ ಪವಿತ್ರ ಎಂದು ಕರೆಯಲ್ಪಪಡುತ್ತಿದ್ದ ಕಾಲವೊಂದಿತ್ತು. ತೀರ್ಥ ಸ್ನಾನವೆಂದರೆ ಸಮುದ್ರ ಸ್ನಾನ. ಉಪ್ಪು ನೀರಿನಲ್ಲಿ ಸ್ನಾನ ಮಾಡುವುದರಿಂದ ದೇಹದಲ್ಲಿ ಪಾಸಿಟಿವ್ ಎನರ್ಜಿಗಳು ಸಂಚರಿಸುತ್ತವೆ. ಬಾತ್ ಟಬ್‌ನ ನೀರಿಗೆ ಉಪ್ಪು ಬೆರೆಸಿ ಅದರಲ್ಲಿ ಮಲಗುವುದರಿಂದ ದೇಹದ ಆಯಾಸ ಕಡಿಮೆಯಗುತ್ತದೆ. ಚರ್ಮ ಹೊಳೆಯಲು ಆರಂಭಿಸುತ್ತದೆ.
ಹೊಳೆಯುವ ಚರ್ಮ
ಮುಖದ ಅಂದವನ್ನು ಹೆಚ್ಚಿಸಲು ಉಪ್ಪು ನೀರಿನ ಅಗತ್ಯ ಇದೆ. ಮುಖ ತೊಳೆಯುವ ನೀರಿಗೆ ಸ್ವಲ್ಪ ಉಪ್ಪು ಬೆರೆಸಿದರೆ ಮುಖದ ಡೆಡ್ ಸ್ಕಿನ್‌ಗಳು ಸರಿಯಾಗುತ್ತವೆ.
ಪೆಡಿಕ್ಯೂರ್
ಕಾಲಿನ ಆರೋಗ್ಯ ಹೆಚ್ಚಿಸುವಲ್ಲಿಯೂ ಉಪ್ಪು ಸಹಕಾರಿ. ಕಾಲು ಒಡೆದಿದ್ದರೆ ಬಿಸಿ ನೀರಿಗೆ ಒಂದು ಹಿಡಿ ಉಪ್ಪು ಬೆರೆಸಿ ಕಾಲನ್ನು ಅದರಲ್ಲಿ ಹಾಕಿ ಅರ್ಧ ಗಂಟೆ ಕುಳಿತರೆ ಅದು ಕಡಿಮೆಯಾಗುತ್ತದೆ. ಕಾಲಿನ ಆರೋಗ್ಯಕ್ಕೂ ಉಪ್ಪು ನಿರು ಸಹಕಾರಿ. ದೇಹದ ಆರೋಗ್ಯ ಹೆಚ್ಚಿಸುವಲ್ಲಿ ಉಪ್ಪಿನ ಪ್ರಮಾಣ ಹೆಚ್ಚು.
- ಸುಶ್ಮಿತಾ ಶೆಟ್ಟಿ ಸಿರಿಬಾಗಿಲು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.