ಜಂಕ್ ಫುಡ್‌ಗೆ ಗುಡ್ ಬೈ ಹೇಳಿ
Team Udayavani, Mar 10, 2020, 5:46 AM IST
ಚಿಕ್ಕ ಮಕ್ಕಳು ಸಹಿತ ಯುವಕ, ಯುವತಿಯರೂ ಜಂಕ್ ಫುಡ್‌ಗೆ ಮಾರುಹೋಗಿದ್ದಾರೆ. ಮೊದಲಿಗೆ ಬಾಯಿ ರುಚಿಗೆ ಸವಿಯುವ ಈ ಆಹಾರ ಅನಂತರ ಅದೊಂದು ಚಟವಾಗಿ ಪರಿಣಮಿಸುತ್ತದೆ. ಅಲ್ಲದೇ ಅದರಿಂದ ಹೊರಗೆ ಬರಲಾರದಷ್ಟು ವ್ಯಸನಿಗಳಾಗುತ್ತೇವೆ ಎಂದರೆ ತಪ್ಪಾಗಲಿಕ್ಕಿಲ್ಲ. ಜಂಕ್ ಫುಡ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರ ದುಷ್ಪರಿಣಾಮ ತಿನ್ನುವ ಗಳಿಗೆಗೆ ಏನೂ ಅನಿಸದಿದ್ದರು ಅನಂತರ ಗಂಭೀರ ಪರಿಣಾಮ ಉಂಟು ಮಾಡುವುದರ ಬಗ್ಗೆ ನೀವು ಎಚ್ಚರಿಕೆ ವಹಿಸಬೇಕಾದದ್ದು ಅಗತ್ಯ.
ಜಂಕ್ ಫುಡ್ ಏಕೆ ಬೇಡ?
ಜಂಕ್ ಫುಡ್‌ನಲ್ಲಿ ಪೌಷ್ಟಿಕಾಂಶ, ಪ್ರೊಟೀನ್, ವಿಟಮಿನ್ ಅಂಶಗಳು ತೀರ ಕಡಿಮೆ ಪ್ರಮಾಣದಲ್ಲಿರುತ್ತವೆ. ಅಲ್ಲದೇ ರುಚಿಯನ್ನು ಹೆಚ್ಚಿಸಲು ಈ ಆಹಾರಗಳಲ್ಲಿ ಬೆರೆಸುವ ವಿವಿಧ ಪದಾರ್ಥಗಳು, ಹೆಚ್ಚಿನ ಸಕ್ಕರೆ ಮತ್ತು ಕೊಬ್ಬಿನಾಂಶದಿಂದ ದೇಹದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟು ಮಾಡುತ್ತವೆ.
ಆರೋಗ್ಯದ ಮೇಲೆ ದುಷ್ಪರಿಣಾಮ
ಮಖ್ಯವಾಗಿ ಜಂಕ್ ಫುಡ್ ಸೇವನೆಗೆ ಇವು ರುಚಿಯಾಗಿ ಮತ್ತು ಬಾಯಿ ಚಪಲ ಹೆಚ್ಚುವಂತೆ ಮಾಡುವುದೇ ಕಾರಣವಾಗಿದೆ. ಇದರಲ್ಲಿರುವ ಹೆಚ್ಚಿನ ಕೊಬ್ಬಿನಾಂಶವು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗುವ ಸಂಭವ ಹೆಚ್ಚು. ಸೋಡಿಯಂನ ಅಂಶ ಅಧಿಕವಾಗಿ ರುವದರಿಂದ ಇದು ಅಧಿಕ ರಕ್ತದೊತ್ತಡದ ಕಾಯಿಲೆಗೂ ಎಡೆಮಾಡಿಕೊಡುತ್ತದೆ. ಮಕ್ಕಳಲ್ಲಿ ವಯಸ್ಸಿಗೆ ಮತ್ತು ದೇಹಕ್ಕೆ ಸಂಬಂಧವೇ ಇಲ್ಲದಂತೆ ತೂಕ ಹೆಚ್ಚಾಗುವುದು, ಮತ್ತಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಮೆದುಳಿಗೂ ಒಳ್ಳೆಯದಲ್ಲ
ಜಂಕ್ ಫುಡ್ ಸೇವನೆ ಕೇವಲ ದೈಹಿಕ ಮಾತ್ರವಲ್ಲದೇ ಮೆದುಳಿನ ಮೇಲು ದುಷ್ಪರಿಣಾಮ ಉಂಟುಮಾಡುತ್ತದೆ. ಅಧಿಕವಾದ ಬೊಜ್ಜು ಉಂಟಾಗುವುದರಿಂದ ಮೆದುಳಿಗೆ ರಕ್ತ ಸಂಚಾರವನ್ನು ಕಡಿಮೆ ಮಾಡುತ್ತದೆ. ಇದರಿಂದ ದೇಹಕ್ಕೆ ಅಗತ್ಯ ಪ್ರಮಾಣದ ಪೌಷ್ಟಿಕಾಂಶ ದೊರೆಯದೇ ದೈಹಿಕವಾಗಿ ಶಕ್ತಿ ಕುಂದಿದ ಅನುಭವ ಆಗುತ್ತದೆ.
- ಶಿವಾನಂದ ಎಚ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ
ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ
Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.