ಸ್ವಯಂ ಔಷಧ: ಎಚ್ಚರಿಕೆ ಅಗತ್ಯ
Team Udayavani, Jan 7, 2020, 5:35 AM IST
ಇತ್ತೀಚಿನ ದಿನಗಳಲ್ಲಿ ಜನರು ಸ್ವಯಂ ವೈದ್ಯರಾ ಗುತ್ತಿದ್ದಾರೆ. ವೈದ್ಯರ ಸಲಹೆ ಪಡೆಯದೇ ಔಷಧಿಗಳನ್ನು ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಚಿಕ್ಕಪುಟ್ಟ ನೋವು, ಜ್ವರ, ಶೀತ ಕಾಣಿಸಿಕೊಂಡಾಗಲೂ ಯಾವುದಾದರೂ ಮಾತ್ರೆ ಸೇವಿಸಿ ಸುಮ್ಮನಾಗಿ ಬಿಡುತ್ತೇವೆ. ಕಾಯಿಲೆ ಉಲ್ಬಣಿಸಿ ಇನ್ನೇನು ಮಾಡಲು ಸಾಧ್ಯವಿಲ್ಲ ಎಂದಾಗ ಮಾತ್ರ ವೈದ್ಯರ ನೆನಪಾಗಿ ಆಸ್ಪತ್ರೆಯತ್ತ ತೆರಳುತ್ತೇವೆ.
ಜ್ವರ, ತಲೆನೋವು, ಮೈಕೈ ನೋವು… ಹೀಗೆ ಹತ್ತು ಹಲವು ಆರೋಗ್ಯ ಸಮಸ್ಯೆಗಳು ಬಂದಾಗ ಬಹುತೇಕರು ಮೆಡಿಕಲ್ ಶಾಪ್‌ಗ್ಳಿಂದ ಯಾವುದೇ ವೈದ್ಯರ ಸಲಹೆ ಪಡೆಯದೆ, ಔಷಧದ ಬಗ್ಗೆ ಹೆಚ್ಚು ತಿಳಿದುಕೊಳ್ಳದೆ ಸೇವಿಸುವುದು ಸಾಮಾನ್ಯ. ಹೆಚ್ಚಿನವರು ಸಣ್ಣಪುಟ್ಟ ಕಾಯಿಲೆ ಎಂದುಕೊಂಡು ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ಮುಂದಾಗುತ್ತಾರೆ.
ಔಷಧಗಳ ಬಗ್ಗೆ ಸರಿಯಾದ ಅರಿವಿಲ್ಲದೆ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾ ಗಬುಹುದು. ದೀರ್ಘ ಕಾಲದ ಬಳಕೆಯಿಂದ ಅಡ್ಡ ಪರಿಣಾಮಗಳು ಉಂಟಾಗಬಹುದು. ಬೇರೆಬೇರೆ ಔಷಧಗಳು ಬೇರೆಬೇರೆ ರೀತಿಯ ಪರಿಣಾಮವನ್ನು ಬೀರುತ್ತವೆ. ಇದರಿಂದಾಗಿ ವೈದ್ಯರ ಸಲಹೆ ಪಡೆದೇ ಔಷಧ ಸೇವಿಸುವುದು ಅಗತ್ಯ. ಅಧಿಕ ಔಷಧಗಳ ಸೇವನೆ ಯಿಂದ ಆತಂಕ, ಖನ್ನತೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು.
ಔಷಧವನ್ನು ಸರಿಯಾದ ಪ್ರಮಾಣ ಮತ್ತು ಸೂಚನೆಗಳು ಇಲ್ಲದೆ ಸೇವಿಸುವುದರಿಂದ ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳು ಪ್ರತಿರೋಧಿಸಬಹುದು. ಇದನ್ನು ಮೈಕ್ರೋಬಿಯಲ್ ರೆಸಿಸ್ಟೆನ್ಸ್ ಎನ್ನಲಾಗುತ್ತದೆ.ಸ್ವಯಂ ಔಷಧ ಸೇವನೆ ನಮ್ಮ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.
ಆ್ಯಂಟಿ ಬಯೋಟಿಕ್ ಎಂದುಕೊಂಡು ತತ್‌ಕ್ಷಣಕ್ಕೆ ಹತೋಟಿಗೆ ಬರುವ ಔಷಧಗಳನ್ನು ಸೇವಿಸುವುದು ಕೂಡ ಒಳಿತಲ್ಲ. ಕಾಯಿಲೆಯ ತೀವ್ರತೆ, ಎಷ್ಟು ದಿನಗಳು, ಪುನರಾ ವರ್ತನೆಯ ಆಧಾರದ ಮೇಲೆ ರೋಗ ಲಕ್ಷಣಗಳನ್ನು ಪರೀಕ್ಷಿಸಿದ ಬಳಿಕ ವೈದ್ಯರ ಸಲಹೆ ಅನುಸರಿಸಬೇಕು. ಈ ಬಗ್ಗೆ ಸರಿಯಾದ ಜಾಗೃತಿ, ಮಾಹಿತಿಯ ಅಗತ್ಯ ಪ್ರತಿಯೊಬ್ಬರಲ್ಲಿಯೂ ಇರಬೇಕು.
- ಸುಶ್ಮಿತಾ ಜೈನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.