ನಯವಾದ ತುಟಿ ಹೊಂದಲು ಸರಳ ಮಾರ್ಗ
Team Udayavani, Dec 17, 2019, 5:55 AM IST
ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಹೆಚ್ಚಿನವರಲ್ಲಿ ಕಾಡುವ ಸಮಸ್ಯೆಯೆಂದರೆ ಪಾದ, ತುಟಿ ಒಡೆಯುವುದು ಮತ್ತು ಚರ್ಮ ಸುಕ್ಕುಗಟ್ಟಿದಂತೆ ತಡೆಯುವುದು ಹೇಗೆ ಎನ್ನುವುದು. ಹೇಳಿ ಕೇಳಿ ಹುಡುಗಿಯರಿಗೆ ಚರ್ಮ, ತುಟಿಗಳ ಮೇಲೆ ಅತಿಯಾದ ಕಾಳಜಿ ಇರುವುದರಿಂದ ಅವುಗಳ ಸಂರಕ್ಷಣೆ ತಲೆ ನೋವಾಗಿ ಬಿಡುತ್ತದೆ. ಅದು ಕೂಡ ಚಳಿಗಾಲದಲ್ಲಿ ಕೊಂಚ ಹೆಚ್ಚಾಗಿಯೇ ತುಟಿಗಳು ಒಡೆಯುವ ಕಾರಣದಿಂದ ಅದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಹಾಗಾಗಿ ಮನೆ ಮದ್ದಿನಿಂದ ತುಟಿಗಳನ್ನು ಹೇಗೆ ಸಂರಕ್ಷಿಸುವುದು ಮತ್ತು ಚಳಿಗಾಲದಲ್ಲಿಯೂ ಹೇಗೆ ಅಧರಗಳ ಅಂದವನ್ನು ಹೆಚ್ಚಿಸುವುದು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
1 ತುಪ್ಪದಲ್ಲಿ ಅಡಗಿದೆ
ಅಧರಗಳ ಪೋಷಣೆ
ನಯವಾದ ತುಟಿಗಳನ್ನು ಪಡೆಯಬೇಕೆಂಬ ಆಸೆ ನಿಮಗಿದ್ದರೆ ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ತುಪ್ಪವನ್ನು ತುಟಿಗಳಿಗೆ ಹಚ್ಚಿಕೊಂಡು ಐದರಿಂದ ಹತ್ತು ನಿಮಿಷ ಬಿಡಬೇಕು. ಇದರಲ್ಲಿ ಇರುವಂತಹ ಮೊಶ್ಚರೈಸರ್ ಗುಣಗಳು ಗಡಸು ಮತ್ತು ಒಡೆದ ತುಟಿಗಳ ಸಮಸ್ಯೆಯನ್ನು ನಿವಾರಣೆ ಮಾಡುತ್ತವೆ.
2 ಹರಳು ಸಕ್ಕರೆಯಿಂದ
ಒಣಗಿದ ತುಟಿಗಳಿಗೆ ಸತ್ವ
ಹರಳು ಸಕ್ಕರೆಗೆ ತುಟಿಗಳನ್ನು ಮೃದುವಾಗಿಸುವ ಶಕ್ತಿ ಇದ್ದು, ಒಣಗಿದಂತೆ ಕಾಣುವ ತುಟಿಗಳಿಗೆ ಸತ್ವವನ್ನು ತುಂಬುತ್ತದೆ. ಹಾಗಾಗಿ ಅರ್ಧ ಟೀ ಚಮಚದಷ್ಟು ಹರಳು ಸಕ್ಕರೆಗೆ ಒಂದು ಚಮಚದಷ್ಟು ರೋಸ್ ವಾಟರ್ ಹಾಕಿ ಈ ಮಿಶ್ರಣವನ್ನು ತುಟಿಗಳಿಗೆ ಹಚ್ಚಿಕೊಂಡು ಕೆಲವು ನಿಮಿಷ ಬಳಿಕ ನೀರಿನಿಂದ ತೊಳೆಯಿರಿ. ದಿನದಲ್ಲಿ 3-4 ಸಲ ಹೀಗೆ ಮಾಡುವುದರಿಂದ ತುಟಿಗಳು ಮೃದುವಾಗುತ್ತವೆ.
3 ದಾಳಿಂಬೆ ರಸ
ದಾಳಿಂಬೆ ತುಂಬಾ ಆರೋಗ್ಯಕಾರಿ ಎಂದು ಎಲ್ಲರಿಗೂ ತಿಳಿದಿದೆ. ಇದರ ರಸವನ್ನು ಹಚ್ಚಿಕೊಳ್ಳುವುದರಿಂದ ತುಟಿಗಳ ಆರೋಗ್ಯ ಉತ್ತಮವಾಗುವುದರೊಂದಿಗೆ ಅದರಲ್ಲಿರುವ ಮೊಶ್ಚರೈಸರ್ ಗುಣ ನೈಸರ್ಗಿಕವಾಗಿ ತುಟಿಯನ್ನು ಮೃದುವಾಗಿಡುತ್ತದೆ. ಜತೆಗೆ ತುಟಿ ಗುಲಾಬಿ ಬಣ್ಣ ಪಡೆಯುತ್ತದೆ. ಹಾಗಾಗಿ ದಾಳಿಂಬೆ ರಸವನ್ನು ಹತ್ತಿ ಉಂಡೆಯನ್ನು ಅದ್ದಿಕೊಂಡು ಅದನ್ನು ತುಟಿಗಳಿಗೆ ಹಚ್ಚಿ. ಅರ್ಧ ಗಂಟೆ ಕಾಲ ಅದನ್ನು ಹಾಗೇ ಬಿಟ್ಟು ಬಳಿಕ ತಣ್ಣನೆ ನೀರಿನಿಂದ ತೊಳೆಯಿರಿ. ದಿನದಲ್ಲಿ ಒಂದು ಸಲ ಹೀಗೆ ಮಾಡಿದರೆ ಸುಂದರ ತುಟಿಗಳು ನಿಮ್ಮದಾಗುವುವು.
3 ತಣ್ಣಗಿನ ಹಾಲಿನಿಂದ ತುಟಿಗಳಿಗೆ ಪೋಷಕಾಂಶ
ತಣ್ಣಗಿನ ಹಾಲನ್ನು ತುಟಿಗಳಿಗೆ ಲೇಪಿಸಿ 15 ನಿಮಿಷ ಕಾಲ ಬಿಟ್ಟು ತಣ್ಣನೆಯ ನೀರಿನಿಂದ ತೊಳೆಯಬೇಕು. ಹೀಗೆ ಮಾಡುವುದರಿಂದ ಗಡುಸಾಗಿರುವ ತುಟಿಗಳು ಮೃದುವಾಗುತ್ತವೆ. ಜತೆಗೆ ಹಾಲಿನಲ್ಲಿ ಇರುವಂತಹ ಪೋಷಕಾಂಶಗಳು ತುಟಿಯನ್ನು ಸುಂದರವಾಗಿಡುತ್ತವೆ. ಹಾಗಾಗಿ ತುಟಿಗಳು ಗಡುಸಾಗದಂತೆ ತಡೆಯಲು ನೀವು ಪ್ರತಿದಿನ ಈ ಮಾರ್ಗವನ್ನು ಪಾಲಿಸಬಹುದು.
4 ಬೀಟ್ರೂಟ್
ತುಟಿಗಳ ಆರೈಕೆ ಮಾಡುವಂತಹ ನೈಸರ್ಗಿಕ ವಸ್ತುಗಳಲ್ಲಿ ಬೀಟ್‌ರೂಟ್ ತುಂಬಾ ಪರಿಣಾಮಕಾರಿ. ಗಡಸು ತುಟಿಗಳಿಗೆ ಇದು ತುಂಬಾ ಉಪಯುಕ್ತ. ಒಂದು ತುಂಡು ಬೀಟ್ರೂಟ್ ಕತ್ತರಿಸಿ ಅದನ್ನು ತುಟಿಗಳಿಗೆ ಹಚ್ಚಿಕೊಳ್ಳಿ. 5ರಿಂದ 10 ನಿಮಿಷ ಕಾಲ ಬಿಟ್ಟು ಬಳಿಕ ತಣ್ಣನೆಯ ನೀರಿನಿಂದ ತೊಳೆಯಿರಿ. ನಯವಾದ ತುಟಿಗಳನ್ನು ಪಡೆಯಬೇಕು ಎಂದಿದ್ದರೆ ದಿನದಲ್ಲಿ 2-3 ಸಲ ಹೀಗೆ ಮಾಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.