ಪುರುಷರ ತ್ವಚೆ ರಕ್ಷಣೆ ಕ್ರಮ
Team Udayavani, Dec 10, 2019, 4:37 AM IST
ಇತರೆ ದಿನಗಳಿಗಿಂತ ಚಳಿಗಾಲದಲ್ಲಿ ತ್ವಚೆಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಮಹಿಳೆಯರು ವಿವಿಧ ಟಿಪ್ಸ್ ಬಳಸಿಕೊಂಡು ತಮ್ಮ ತ್ವಚೆಯನ್ನು ಕಾಪಾಡಿಕೊಳ್ಳುತ್ತಾರೆ. ಆದರೆ ಪುರುಷರಲ್ಲಿ ತ್ವಚೆಯ ಬಗ್ಗೆ ಕಾಳಜಿ ವಹಿಸುವವರ ಪ್ರಮಾಣ ತೀರಾ ವಿರಳ. ಮಹಿಳೆಯರಿಗೆ ಮಾತ್ರವಲ್ಲದೇ ಪುರುಷರು ಸಹ ತಮ್ಮ ತ್ವಚೆಯ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಇದಕ್ಕೆ ಕೇವಲ ಮುಖ ತೊಳೆದರೆ ಸಾಕಾಗದು. ಶುಷ್ಕ, ಕಳೆಹೀನ ಮತ್ತು ಗಡುಸಾದ ಚರ್ಮದಿಂದ ಮುಕ್ತಿ ಹೊಂದಲು ಕೆಲವೊಂದು ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಕೆಲವು ಉಪಯುಕ್ತ ಸಲಹೆಗಳು ಇಲ್ಲಿವೆ.
· ಸಿಟಿಎಂ ಎಸೆನ್ಸಿಯಲ್: ಮಹಿಳೆಯರಂತೆ ಪುರುಷರ ತ್ವಚೆಗೂ ಚಳಿಗಾಲದಲ್ಲಿ ಆರೈಕೆ ಅತಿ ಮುಖ್ಯ. ಪುರುಷರು ಮಾಲಿನ್ಯ, ಧೂಳು, ಸಿಗರೇಟ್ ಹೊಗೆ ಹಾಗೂ ಇತರ ಮಾಲಿನ್ಯ ಕಾರಕಗಳಿಗೆ ಪ್ರತಿದಿನ ಜಾಸ್ತಿ ಪ್ರಮಾಣದಲ್ಲಿ ಒಡ್ಡಿಕೊಳ್ಳುವು ದರಿಂದ ಚರ್ಮ ಶುಷ್ಕಗೊಳ್ಳುತ್ತದೆ. ಮಹಿಳೆಯರಿಗಿಂತ ಪುರುಷರ ತ್ವಚೆ ಹೆಚ್ಚು ಎಣ್ಣೆಯುಕ್ತ ಮತ್ತು ಗಡುಸಾಗಿರುತ್ತದೆ. ಆದುದರಿಂದ ಶುಷ್ಕತೆಯಿಂದ ಚರ್ಮವನ್ನು ಕಾಪಾಡಲು ತೈಲಮುಕ್ತ ಉತ್ಪನ್ನಗಳನ್ನು ಬಳಸುವುದು ಉತ್ತಮ.
· ದಿನಕ್ಕೆ ಎರಡು ಮೂರುಬಾರಿ ಮುಖ ತೊಳೆಯುವುದನ್ನು ರೂಢಿಸಿಕೊಳ್ಳಿ. ಮಲಗುವ ಮುಂಚಿತವಾಗಿ ಮುಖ ತೊಳೆದರೆ ಇನ್ನೂ ಉತ್ತಮ. ರೋಸ್ ವಾಟರ್ ಬಳಸುವುದರಿಂದ ಚರ್ಮದ ಆರೈಕೆ ಇನ್ನಷ್ಟು ಉತ್ತಮವಾಗಿರುತ್ತದೆ.
· ಸನ್‌ಸ್ಕ್ರೀನ್ ಬಳಸುವುದು ಉತ್ತಮ: ದಿನನಿತ್ಯ ಸೂರ್ಯನ ಕಿರಣಗಳಿಗೆ ನಿಮ್ಮ ಚರ್ಮವನ್ನು ಒಡ್ಡುವುದರಿಂದ ಚರ್ಮದ ಮೇಲ್ಪದರಕ್ಕೆ ಹಾನಿ ಉಂಟಾಗುತ್ತದೆ.ಉತ್ತಮ ಗುಣಮಟ್ಟದ ಸನ್ ಸ್ಕ್ರೀನ್ ಬಳಸುವುದರಿಂದ ಹಾನಿಯನ್ನು ಶಮನಗೊಳಿಸಬಹುದು.
· ನಿಮ್ಮ ತ್ವಚೆಯಾನುಸಾರ ಫೇಸ್‌ವಾಶ್ ಬಳಕೆ: ಉತ್ತಮ ಸೋಪ್ ಮತ್ತು ಫೇಸ್‌ವಾಶ್ ಬಳಸುವುದರಿಂದ ಕೂಡ ತ್ವಚೆಯ ರಕ್ಷಣೆ ಮಾಡಬಹುದು. ನೈಸರ್ಗಿಕ ತೈಲಗಳನ್ನು ಹೆಚ್ಚಾಗಿ ಬಳಸಿ. ವಾರಕ್ಕೊಮ್ಮೆಯಾದರು ಫೇಸ್‌ಪ್ಯಾಕ್ ಬಳಸಿದರೆ ಇನ್ನಷ್ಟು ಉತ್ತಮ.
· ಗಡ್ಡ ಬಿಟ್ಟರೆ ಉತ್ತಮ: ಗಡ್ಡ ಬಿಡು ವುದರಿಂದ ಚಳಿಗಾಲದಲ್ಲಿ ಮುಖದ ತ್ವಚೆಯನ್ನು ಆರೈಕೆ ಮಾಡಬಹುದು. ಗಡ್ಡ ಬಿಡುವ ಹವ್ಯಾಸವಿಲ್ಲವಾದರೆ ಚಳಿಗಾಲದಲ್ಲಿ ಶೇವಿಂಗ್ ಮಾಡುವಾಗ ತುಂಬಾ ಕಾಳಜಿ ವಹಿಸಬೇಕು. ಶೇವಿಂಗ್‌ಗೆ ಬಿಸಿ ನೀರನ್ನು ಬಳಸುವುದರಿಂದ ಅಲರ್ಜಿ ಯಾಗುವುದನ್ನು ತಪ್ಪಿಸಬಹುದು.
· ಲೋಷನ್ ಬಳಸಿ: ಹೆಚ್ಚು ಬಿಸಿಲಿಗೆ ತುತ್ತಾಗುದು ಕೈಗಳು. ಹಾಗಾಗಿ ಅವುಗಳ ಆರೈಕೆ ತುಂಬಾ ಮುಖ್ಯ. ಕೈಗಳ ರಕ್ಷಣೆಗೆ ಉತ್ತಮ ಬ್ರ್ಯಾಂಡ್‌ನ ಲೋಷನ್ ಬಳಸುವುದು ಅಗತ್ಯ.
- ಶಿವಾನಂದ್ ಎಚ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.