ವ್ಯಾಯಾಮದ ಮೊದಲು ಸ್ಟ್ರೆಚಿಂಗ್
Team Udayavani, Jul 2, 2019, 5:00 AM IST
ವ್ಯಾಯಾಮದಲ್ಲಿ ಹಲವಾರು ವಿಧಗಳಿವೆ. ಇದರಲ್ಲಿ ಸ್ಟ್ರೆಚಿಂಗ್ ಕೂಡ ಒಂದು. ದೇಹದ ಕೆಲವು ಸ್ನಾಯುಗಳ ಚಲನೆಯ ನಿಯಂತ್ರಿಸುವ ಮೂಲಕ ಸ್ಟ್ರೆಚಿಂಗ್ ವ್ಯಾಯಾಮ ಮಾಡಲಾಗುತ್ತದೆ. ಇದನ್ನು ಕಠಿಣ ವ್ಯಾಯಾಮ, ಏರೋಬಿಕ್ಸ್ ಮತ್ತು ಬಲಶಾಲಿ ತರಬೇತಿಗೆ ಮೊದಲು ಮಾಡಲಾಗುತ್ತದೆ. ವ್ಯಾಯಾಮದ ಬಳಿಕ ಸ್ನಾಯುಗಳಿಗೆ ಆರಾಮ ನೀಡಲು ಕೂಡ ಸ್ಟ್ರೆಚಿಂಗ್ ಮಾಡಲಾಗುವುದು.
ಸಜ್ಜುಗೊಳಿಸಲು ನೆರವು
ಯಾವುದೇ ವ್ಯಾಯಾಮದ ಮೊದಲು ಸ್ಟ್ರೆಚಿಂಗ್ ಮಾಡಲು ಸೂಚಿಸಲಾಗುತ್ತದೆ. ಇದು ಸ್ನಾಯುಗಳನ್ನು ಸಡಿಲಗೊಳಿಸುವುದು ಮಾತ್ರವಲ್ಲದೆ ವ್ಯಾಯಾಮಕ್ಕೆ ಸಜ್ಜುಗೊಳಿಸುವುದು. ಇದರಿಂದ ವ್ಯಾಯಾಮದ ವೇಳೆ ಸ್ನಾಯುಗಳ ಮೇಲೆ ಬಲ ಬೀಳುವ ಅಪಾಯ ಕಡಿಮೆಯಾಗುವುದು. ನೀವು ಭಾರ ಎತ್ತಲು ತಯಾರಾಗಿದ್ದೀರಿ ಎಂದಾದರೆ ಆಗ ಸ್ವಲ್ಪ ನಡೆದಾಡಿ, ಸೈಕಲ್ ಓಡಿಸಿ, ಅಥವಾ ಸ್ವಲ್ಪ ಸ್ಟ್ರೆಚಿಂಗ್ ವ್ಯಾಯಾಮ ಮಾಡಿದರೆ ಅದರಿಂದ ಭಾರ ಎತ್ತುವಾಗ ಗಾಯಾಳುವಾಗದಂತೆ ದೇಹಕ್ಕೆ ಸ್ಥಿತಿಸ್ಥಾಪಕತ್ವವು ಸುಧಾರಣೆಯಾಗುವುದು.
ಸ್ಟ್ರೆಚಿಂಗ್ ಹಲವಾರು ರೀತಿಯ ಚಲನೆಗಳನ್ನು ಒಳಗೊಂಡಿದೆಯಾದರೂ ಇದು ಕ್ಯಾಲರಿ ದಹಿಸುವುದು ತುಂಬಾ ಕಡಿಮೆ. ತೂಕ ಕಳೆದುಕೊಳ್ಳಲು ಸ್ಟ್ರೆಚಿಂಗ್ ನೆರವಾಗುವುದಿಲ್ಲ. ಆದರೆ ದೇಹವನ್ನು ವ್ಯಾಯಾಮಕ್ಕೆ ಸಜ್ಜುಗೊಳಿಸಲು ಇದು ನೆರವಾಗುವುದು.
ನೀವು ಸುಮ್ಮನೆ ಕುಳಿತುಕೊಂಡಿರುವಾಗ ದೇಹವು ಕ್ಯಾಲರಿ ದಹಿಸುವುದಿಲ್ಲ. ಅದೇ ದೈಹಿಕ ಅಭ್ಯಾಸದಲ್ಲಿ ತೊಡಗಿದಾಗ ಕ್ಯಾಲರಿ ದಹಿಸಲ್ಪಡುವುದು. ಹಾಗಾಗಿ ತೂಕ ಇಳಿಕೆಗೆ ಸ್ಟ್ರೆಚಿಂಗ್ ಸಹಕಾರಿಯಾಗದು.
ಲಾಭಗಳು
·ಗಂಟುಗಳ ಚಲನೆ ಉತ್ತಮ ವಾಗುವುದು.
·ಸ್ನಾಯುಗಳಿಗೆ ಒತ್ತಡ ಬೀಳದಂತೆ ತಡೆಯುವುದು
·ರಕ್ತ ಪರಿಚಲನೆ ಉತ್ತಮವಾಗುವುದು.
·ವ್ಯಾಯಾಮಕ್ಕೆ ದೇಹವನ್ನು ಸಜ್ಜುಗೊಳಿಸುವುದು
·ವ್ಯಾಯಾಮದ ಬಳಿಕ ದೇಹ ಶಾಂತಗೊಳಿಸುವುದು
·ಸ್ನಾಯುಗಳಿಗೆ ಗಾಯವಾದರೆ ಅದಕ್ಕೆ ಶಮನ ನೀಡುವುದು.
·ದೇಹಕ್ಕೆ ಸ್ಥಿತಿಸ್ಥಾಪಕತ್ವ ಬರುವುದು.
·ವ್ಯಾಯಾಮ ವೇಳೆ ಉಂಟಾಗುವ ಅಪಾಯವನ್ನು ತಗ್ಗಿಸುವುದು.
ದಹಿಸುವ ಕ್ಯಾಲರಿ
ನೀವು ಸುಮ್ಮನೆ ಕುಳಿತುಕೊಂಡಿರುವಾಗ ದೇಹವು ಕ್ಯಾಲರಿ ದಹಿಸುವುದಿಲ್ಲ. ಅದೇ ದೈಹಿಕ ಅಭ್ಯಾಸದಲ್ಲಿ ತೊಡಗಿದಾಗ ಕ್ಯಾಲರಿ ದಹಿಸಲ್ಪಡುವುದು. ಹಾಗಾಗಿ ತೂಕ ಇಳಿಕೆಗೆ ಸ್ಟ್ರೆಚಿಂಗ್ ಸಹಕಾರಿಯಾಗದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.