ಆರೋಗ್ಯಯುತ ದೇಹಕ್ಕಾಗಿ ದಿನಚರಿ ಪಾಲಿಸಿ
Team Udayavani, Apr 9, 2019, 6:00 AM IST
ದೈಹಿಕ ನಿಷ್ಕ್ರಿಯತೆ ಅನಾರೋಗ್ಯಕ್ಕೆ ಪ್ರಮುಖ ಕಾರಣ. ಏನೂ ಮಾಡದೇ ಇರುವುದಕ್ಕಿಂತ ಏನಾದರೊಂದು ಚಟುವಟಿಕೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ವಾರದಲ್ಲಿ ಕನಿಷ್ಠ 150 ನಿಮಿಷವಾದರೂ ವ್ಯಾಯಾಮ ಮಾಡಲೇಬೇಕು ಎಂಬುದನ್ನು ಸಂಶೋಧನೆಯೊಂದು ಹೇಳಿದೆ. ಅಷ್ಟೇ ಅಲ್ಲದೇ ಧೂಮಪಾನ, ಮಧುಮೇಹ ಮತ್ತು ಹೃದಯ ಕಾಯಿಲೆಗಳಿಗಿಂತ ಜಡ ಜೀವನಶೈಲಿ ಬಹಳ ಅಪಾಯಕಾರಿ ಎಂಬುದನ್ನೂ ಅಧ್ಯಯನವೊಂದು ಹೇಳಿದೆ.
ವ್ಯಾಯಾಮದ ಕೊರತೆ ನಮ್ಮ ದೇಹವನ್ನು ಜಡಗೊಳಿಸುತ್ತದೆ. ಆಧುನಿಕ ಮತ್ತು ಮುಂದುವರಿದ ತಂತ್ರಜ್ಞಾನ ನಮ್ಮ ಕೆಲಸ ಕಾರ್ಯಗಳನ್ನು ಸುಲಭ ಮಾಡಿಸಿದೆ. ಆದರೆ, ಯಾವುದೇ ತಂತ್ರಜ್ಞಾನ ನಮ್ಮ ಜೀವನವನ್ನು ಮಾತ್ರ ಉತ್ತಮಗೊಳಿಸಿಲ್ಲ. ಯಾಕೆಂದರೆ ಇದರಿಂದ ನಮ್ಮ ದೈಹಿಕ ಚಟುವಟಿಕೆ ಕಡಿಮೆಯಾಗಿದ್ದು, ತೂಕ ಹೆಚ್ಚಳ, ಮಂಡಿ ನೋವು, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಹೆಚ್ಚಾಗಿದ್ದಾರೆ.
ದೀರ್ಘಕಾಲದವರೆಗೆ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದು, ಸ್ಮಾರ್ಟ್ ಫೋನ್ ಬಳಕೆ, ಟಿವಿ ನೋಡುವುದು ನಮ್ಮ ದೇಹದಲ್ಲಿ ಜಡ ವರ್ತನೆಯನ್ನು ಹೆಚ್ಚಿಸುತ್ತವೆ ಎನ್ನುತ್ತಾರೆ ತಜ್ಞ ವೈದ್ಯರು.
ವ್ಯಾಯಾಮವು ದೈಹಿಕ ಚಟುವಟಿಕೆಗೆ ಸಮಾನಾರ್ಥಕವಲ್ಲ. ವ್ಯಾಯಾಮಕ್ಕೆ ಯೋಜನೆ ಇರುತ್ತದೆ. ಹತ್ತಿರದಲ್ಲೇ ಎಲ್ಲಿಗಾದರೂ ತೆರಳಬೇಕೆಂದಿದ್ದಾರೆ ನಡೆದುಕೊಂಡು ಹೋಗುವ ಅಭ್ಯಾಸ ಬೆಳೆಸಿಕೊಳ್ಳುವುದು. ಮಾರುಕಟ್ಟೆಯಿಂದ ದಿನಸಿ ಸಾಮಗ್ರಿಗಳನ್ನು ಸ್ವತಃ ಹೊತ್ತು ತರುವುದು, ನಮ್ಮ ಕೆಲಸವನ್ನು ನಾವೇ ಮಾಡುವುದು ಆರೋಗ್ಯಯುತ ದೇಹಕ್ಕೆ
ಉತ್ತಮ.
ದಿನಚರಿಯಲ್ಲಿ ಪಾಲಿಸಿ
· ಕಚೇರಿ, ಮನೆಗೆ ಹೋಗುವ ವೇಳೆ ಮೆಟ್ಟಿಲು ಹತ್ತಲು/ಇಳಿಯಲು ಇದ್ದರೆ ಲಿಫ್ಟ್ ಬಳಸಬೇಡಿ.
· ಒಂದೇ ಕಡೆ ಕೂತ ಮಾಡುವ ಕೆಲಸವಾದರೆ ಗಂಟೆಗೊಮ್ಮೆ ಒಂದೆರಡು ನಿಮಿಷ ಓಡಾಡಿ ಬನ್ನಿ.
· ಸಮೀಪದಲ್ಲೇ ಇರುವ ಅಂಗಡಿ/ ಮಾರುಕಟ್ಟೆಗೆ ನಡೆದುಕೊಂಡು ಹೋಗುವ ಅಭ್ಯಾಸ ಬೆಳೆಸಿಕೊಳ್ಳಿ.
· ಮಧ್ಯಾಹ್ನ, ರಾತ್ರಿ ಭೋಜನದ ಅನಂತರ ಸ್ವಲ್ಪ ಓಡಾಡುವ ಅಭ್ಯಾಸ ಮೈಗೂಡಿಸಿಕೊಳ್ಳಿ.
· ದಿನಕ್ಕೆ ಕನಿಷ್ಠ 30 ನಿಮಿಷವಾದರೂ ವ್ಯಾಯಾಮ ಮಾಡಿ.
· ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು.
· ಈ ದಿನಚರಿಯಲ್ಲಿ ನಿತ್ಯ ಪಾಲಿಸಿದರೆ ಆರೋಗ್ಯಯುತ ದೇಹ ನಮ್ಮದಾಗುತ್ತದೆ
- ಕಾರ್ತಿಕ್ ಚಿತ್ರಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.