ಬೆಳ್ಳುಳ್ಳಿಯ ಔಷಧೀಯ ಗುಣ
Team Udayavani, Feb 11, 2020, 5:39 AM IST
ಪುರಾತನ ಕಾಲದಿಂದಲೂ ಬೆಳ್ಳುಳ್ಳಿಯನ್ನು ಭಾರತೀಯರು ತಮ್ಮ ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡುತ್ತಾ ಬಂದಿದ್ದಾರೆ. ಆಯುರ್ವೇದದಲ್ಲಿ ಇದರ ಔಷಧೀಯ ಗುಣಗಳನ್ನು ತಿಳಿಸಲಾಗಿದೆ. ಬೆಳ್ಳುಳ್ಳಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆರೋಗ್ಯ ಅಂಶಗಳಿವೆ.
1 ಬೆಳ್ಳುಳ್ಳಿ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆ ಜತೆಗೆ ಹಸಿವನ್ನು ಹೆಚ್ಚಿಸುತ್ತದೆ.
2 ಒಂದು ಅಧ್ಯಯನದ ಪ್ರಕಾರ ಕ್ಯಾನ್ಸರ್ ಕಾಯಿಲೆಯನ್ನು ದೂರಮಾಡುವ ಶಕ್ತಿ ಬೆಳ್ಳುಳ್ಳಿಗೆ ಇದೆ.
3 ಬೆಳ್ಳುಳ್ಳಿಯಲ್ಲಿರುವ ಆಲೈಸಿನ್ ಪೋಷಕಾಂಶವೂ ರಕ್ತದಲ್ಲಿರುವ ಟ್ರೈಗ್ಲಿಸರೈಡ್ ಅಂಶವನ್ನು ಕಡಿಮೆ ಮಾಡುತ್ತದೆ.
4 ಪ್ರತಿ ದಿನ ಬೆಳ್ಳುಳ್ಳಿ ಸೇವೆನಯಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.
5 ಬೆಳ್ಳುಳ್ಳಿಯು ರಕ್ತ ಶುದ್ಧಿ ಮಾಡುವುದರ ಜತೆಗೆ ಜಠರಕ್ಕೆ ಸೋಂಕು, ಗಾಯವನ್ನು ಆಗದಂತೆ ನೋಡಿಕೊಳ್ಳುತ್ತದೆ.
6 ರಕ್ತಹೀನತೆ ಇರುವವರು ಬೆಳ್ಳುಳ್ಳಿ ಎಸಳನ್ನು ಬಾಯಲ್ಲಿ ಇಟ್ಟುಕೊಳ್ಳಬೇಕು.ಇದರಿಂದ ರಕ್ತಹೀನತೆ ಕಡಿಮೆಯಾಗುತ್ತದೆ.
7 ಶೀತ, ಕೆಮ್ಮು ನಿವಾರಕವಾಗಿಯೂ ಇದು ಕಾರ್ಯನಿರ್ವಹಿಸುತ್ತದೆ.
8 ಹೃದಯ ಮತ್ತು ಮಾನಸಿಕ ಒತ್ತಡ ನಿವಾರಿಸುವ ಸಾಮರ್ಥ್ಯ ಇದೆ.
9 ಬಾಯಿ ಹುಣ್ಣು ಸಹಿತ ಬಾಯಿಯ ಇತರೆ ತೊಂದರೆಗಳಿಂದಲೂ ಪರಿಹಾರ ನೀಡುತ್ತದೆ.
10 ಬೆಳ್ಳುಳ್ಳಿಯಲ್ಲಿ ಮ್ಯಾಂಗನೀಸ್, ವಿಟಮಿನ್ ಸಿ, ಪೊಟ್ಯಾಶಿಯಂ, ಕಬ್ಬಿಣ, ಕ್ಯಾಲ್ಸಿಯಂ ಅಂಶಗಳಿವೆ.
11 ನಿಯಮಿತ ಬೆಳ್ಳುಳ್ಳಿ ಸೇವನೆಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
12 ನಿಯಮಿತ ಬೆಳ್ಳುಳ್ಳಿಯ ಬಳಕೆಯಿಂದ ಕೊಬ್ಬು ಕಡಿಮೆಯಾಗಿ ತೂಕ ಕಡಿಮೆಯಾಗುತ್ತದೆ.
- ಧನ್ಯಶ್ರೀ ಬೋಳಿಯಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.