ಅಕ್ಕಿ ಹಿಟ್ಟಿನಲ್ಲಿ ಅಡಗಿದೆ ಸೌಂದರ್ಯದ ರಹಸ್ಯ
Team Udayavani, Jan 21, 2020, 4:32 AM IST
ಅಕ್ಕಿ ಪೌಷ್ಟಿಕಾಂಶಗಳ ಕಣಜ ನಿಜ. ಅಕ್ಕಿ ದೈನಂದಿನ ಜೀವನದಲ್ಲಿ ತುಂಬಾ ಪ್ರಾಮುಖ್ಯತೆ ಪಡೆದಿದೆಯೋ ಅಷ್ಟೇ ಸೌಂದರ್ಯದ ಗುಟ್ಟು ಅಡಗಿದೆ. ನಿಮ್ಮ ಮನೆಯ ಅಡುಗೆ ಕೋಣೆಯಲ್ಲಿ ಅಕ್ಕಿ ಇದ್ದೇ ಇರುತ್ತದೆ. ಈ ಅಕ್ಕಿಯನ್ನು ಬಳಸಿಕೊಂಡು ಇದರಲ್ಲಿ ನಿಮ್ಮ ಸೌಂದರ್ಯದ ದಿನಚರಿಯನ್ನು ಆರಂಭಿಸಿಕೊಳ್ಳಬಹುದು.
ಯುವಿ ಪ್ರೊಟೆಕ್ಷನ್
ಅಕ್ಕಿಯಲ್ಲಿ ಫೆರುಲಿಕ್ ಆ್ಯಸಿಡ್ ಮತ್ತು ಅಲಾಂಟೊಯಿನ್‌ನಂತಹ ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಿಸುವ ಕೆಲವು ಅಂಶಗಳಿವೆ. ಇದು ಉತ್ತಮ ನೈಸರ್ಗಿಕ ಸನ್‌ಸ್ಕ್ರೀನ್ ಆಗಿ ಪರಿವರ್ತಿಸುತ್ತದೆ. ಅಕ್ಕಿ ಪುಡಿ ಬಿಸಿಲಿನ ಬೇಗೆಯನ್ನು ಶಮನಗೊಳಿಸುತ್ತದೆ ಮತ್ತು ಚರ್ಮವನ್ನು ಬಿಸಿಲಿನಿಂದ ತಡೆಯುತ್ತದೆ. ಹಾಲಿನೊಂದಿಗೆ ಸ್ವಲ್ಪ ಅಕ್ಕಿ ಪುಡಿ ಬೆರೆಸಿ ಪೇಸ್ಟ್ ತಯಾರಿಸಿಕೊಂಡು ಮುಖಕ್ಕೆ ಹಚ್ಚಿ. ಇದನ್ನು 15 ನಿಮಿಷ ಒಣಗಲು ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ. ವಾರಕ್ಕೊಮ್ಮೆ ಹೀಗೆ ಮಾಡಿಕೊಂಡು ಬಂದರೆ ಒಂದೆರಡು ತಿಂಗಳಲ್ಲಿ ನಿಮ್ಮ ಚರ್ಮವು ಕಾಂತಿಯುತವಾಗುತ್ತದೆ.
ಚರ್ಮ ಕಾಂತಿಯುತ ಅಕ್ಕಿ ಪುಡಿಯನ್ನು ಜೇನುತುಪ್ಪ ಮೊಸರಿನೊಂದಿಗೆ ಬೆರೆಸಿ. ನಿಮ್ಮ ಮುಖ, ಕುತ್ತಿಗೆಗೆ ಹಚ್ಚಿಕೊಂಡು ಸಂಪೂರ್ಣವಾಗಿ ಒಣಗಲು ಬಿಡಿ. ಅನಂತರ ನೀರಿನಿಂದ ತೊಳೆಯಿರಿ. ಒಂದು ಟೀ ಚಮಚ ಅಕ್ಕಿ ಹಿಟ್ಟನ್ನು ಸ್ವಲ್ಪ ಸೌತೆಕಾಯಿ ರಸ ಮತ್ತು ನಿಂಬೆ ರಸದೊಂದಿಗೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಸುಕ್ಕು ನಿವಾರಣೆಯಾಗುತ್ತದೆ.
ಕಣ್ಣಿನ ಕಪ್ಪು ಕಲೆ ನಿವಾರಣೆ
ಕಣ್ಣಿನ ಸುತ್ತ ಇರುವ ಕಪ್ಪು ಕಲೆ ನಿವಾರಣೆಗೆ ಅಕ್ಕಿ ಹಿಟ್ಟು ಉತ್ತಮ ಮತ್ತು ನೈಸರ್ಗಿಕ ಪರಿಹಾರವಾಗಿದೆ ಬಾಳೆಹಣ್ಣು, ಕ್ಯಾಸ್ಟರ್ ಆಯಿಲ್ ಮತ್ತು ಅಕ್ಕಿ ಹಿಟ್ಟನ್ನು ಬಳಸಿ ದಪ್ಪ ಪೇಸ್ಟ್ ತಯಾರಿಸಿ ಕಣ್ಣಿನ ಡಾರ್ಕ್ ಸರ್ಕಲ್‌ಗೆ ಹಚ್ಚಿ, ಹೀಗೆ ಮಾಡುವುದರಿಂದ ನಿಮ್ಮ ಕಣ್ಣಿನ ಕಪ್ಪು ಕಲೆ ನಿವಾರಣೆಯಾಗುತ್ತದೆ.
– ಪೂರ್ಣಿಮಾ ಪೆರ್ಣಂಕಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.