ಆರೋಗ್ಯದಲ್ಲಿ ಬಿಲ್ವಪತ್ರೆಯ ಪಾತ್ರ
Team Udayavani, Mar 17, 2020, 4:33 AM IST
ಬಿಲ್ವಪತ್ರೆ ಶಿವನಿಗೆ ಅಚ್ಚುಮೆಚ್ಚು ಎಂಬುದು ತಿಳಿದೇ ಇರುವ ವಿಚಾರ. ಅಷ್ಟು ಮಾತ್ರವಲ್ಲದೇ ಬಿಲ್ವ ವೃಕ್ಷ ದ ಪ್ರತಿಯೊಂದು ಭಾಗವು ಔಷಧೀಯ ಗುಣಗಳಿಂದ ಕೂಡಿದೆ. ಬಿಲ್ವಪತ್ರೆ ಮೂರು ಉಪಪತ್ರೆಗಳಿಂದ ಕೂಡಿ ರೂಪಗೊಂಡಿದೆ. ಇದರ ಮೂರು ದಳಗಳು ತ್ರಿಗುಣಗಳ ತ್ರಿಮೂರ್ತಿಗಳ, ತ್ರಿಶಕ್ತಿಗಳ ಮತ್ತು ಓಂಕಾರ ಮೂಲ ಉತ್ಪತ್ತಿ ಅಕ್ಷರಗಳ ಸಂಕೇತ ಎಂಬುದು ನಂಬಿಕೆ.
ಬಿಲ್ವದ ಹಣ್ಣಿನಲ್ಲಿ ಏನೇನಿದೆ?
ಬಿಲ್ವ ಫಲದಲ್ಲಿ ಹೇರಳವಾದ ಪೋಷಕಾಂಶಗಳು ಇರುವುದರಿಂದ ಆಹಾರವಾಗಿಯೂ ಉಪಯುಕ್ತವಾಗಿದೆ. 100 ಗ್ರಾಂ ಹಣ್ಣಿನ ತಿರುಳಿನಲ್ಲಿ ತೇವಾಂಶ 62.2 ಗ್ರಾಂ, ಸಸಾರಜನಕ 1.8 ಗ್ರಾಂ, ಮೇದಸ್ಸು 0.39ಗ್ರಾಂ ಖನಿಜಪದಾರ್ಥ 1.7 ಗ್ರಾಂ, ನಾರು 2.2 ಗ್ರಾಂ, ಶರ್ಕರ ಪಿಷ್ಟ 31.8 ಗ್ರಾಂ, ಸುಣ್ಣ 0.09 ಗ್ರಾಂ, ರಂಜಕ 0.05 ಗ್ರಾಂ, ಕಬ್ಬಿಣ 0.3 ಗ್ರಾಂ, “ಎ’ ಜೀವಸತ್ವ 186 ಐ.ಯು, ರೈಬೋಪ್ಲವಿನ್ 1.19ಮಿ.ಗ್ರಾಂ,ಥಯಾಮಿನ್ 0.13 ಮಿ.ಗ್ರಾಂ, ನಿಯಾಸಿನ್ 1.10 ಮಿ.ಗ್ರಾಂ, ನಿಕೋಟಿನ್ ಆಮ್ಲ 0.09 ಮಿ.ಗ್ರಾಂ, ಸಿ ಜೀವಸತ್ವ 15 ಮಿ.ಗ್ರಾಂ ಪೋಷಕಾಂಶಗಳಿರುತ್ತವೆ. 100 ಗ್ರಾಂ ಹಣ್ಣಿನ ತಿರುಳನ್ನು ತಿನ್ನುವುದರಿಂದ 129 ಕ್ಯಾಲೋರಿಗಳು ದೇಹಕ್ಕೆ ಸಿಗುತ್ತದೆ. ಅತಿಸಾರ, ರಕ್ತಾತಿಸಾರ ಮತ್ತು ಆಮಶಂಕೆ ಭೇದಿಯಲ್ಲಿ ಬಿಲ್ವದ ಅಪಕ್ವ ಫಲವು ಹೆಚ್ಚು ಪರಿಣಾಮಕಾರಿಯಾಗಿದೆ.
ಹಣ್ಣಿನ ಉಪಯೋಗ
ತಿರುಳನ್ನು ನೀರಿನಲ್ಲಿ ಕದಡಿ ಹಾಲು ಮತ್ತು ಸಕ್ಕರೆ ಸೇರಿಸಿ ಕುಡಿಯುವುದರಿಂದ ಮೂತ್ರ ಸರಾಗವಾಗಿ ಹೋಗುತ್ತದೆ. ಹಣ್ಣಿನ ತಿರುಳಿಗೆ ಹಾಲಿನ ಕೆನೆ ಸೇರಿಸಿ ತಿನ್ನುವುದರಿಂದ ಮೆದುಳು ಮತ್ತು ಹೃದಯ ಬಲಗೊಳ್ಳುತ್ತವೆ. ರಕ್ತ ಹಿನತೆ ಕಡಿಮೆಯಾಗುವುದು. ಪಕ್ವ ಹಣ್ಣಿನ ತಿರುಳನ್ನು ತಲೆಗೆ ಹಚ್ಚಿ ಸ್ವಲ್ವ ಹೊತ್ತು ಬಿಟ್ಟು ಸ್ನಾನ ಮಾಡುವುದರಿಂದ ತಲೆ ಹೊಟ್ಟು ನಿವಾರಣೆಯಾವುದು ಮಾತ್ರವಲ್ಲದೇ ಕೂದಲು ಹೊಳಪನ್ನು ಪಡೆಯುತ್ತದೆ.
ನೋವು ಶಮನ
ಬೇರು ಮತ್ತು ತೊಗಟೆಯ ಕಷಾಯವನ್ನು ತಯಾರಿಸಿಕೊಂಡು ಕುಡಿಯುವುದರಿಂದ ಉದ್ವೇಗ ಕಡಿಮೆಯಾಗುವುದಲ್ಲದೆ ಹೃದಯಕ್ಕೂ ಒಳ್ಳೆಯದು. ಎಲೆಯನ್ನು ಅರೆದು ನೋವಿರುವ ಜಾಗಕ್ಕೆ ಕಟ್ಟಿದರೆ ನೋವು ಶಮನವಾಗುವುದು. ಬಿಲ್ವ ಪತ್ರೆಯ ರಸವನ್ನು ಖಾಲಿ ಹೊಟ್ಟೆಗೆ ದಿನಕ್ಕೆರಡು ಬಾರಿ ಸೇವಿಸುವುದರಿಂದ ಬೊಜ್ಜು ಕಡಿಮೆಯಾಗುವುದು.
ವಿಜಿತಾ ಅಮೀನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.