ಸರಳ ವ್ಯಾಯಾಮಕ್ಕೆ ಥೆರಾ ಬ್ಯಾಂಡ್
Team Udayavani, Aug 6, 2019, 7:33 AM IST
ಮನೆಯಲ್ಲೇ ಕುಳಿತು ಯಾರ ಸಹಾಯವೂ ಇಲ್ಲದೇ ನಮ್ಮಷ್ಟಕ್ಕೆ ನಾವೇ ಸರಳವಾದ ವ್ಯಾಯಾಮಗಳನ್ನು ಮಾಡಿ ಸದಾ ಫಿಟ್ ಆಗಿರಬಹುದು ಕೆಲ ವ್ಯಾಯಾಮಗಳ ಪೈಕಿ ರೆಸಿಸ್ಟೆಸ್Õ ಬ್ಯಾಂಡ್ (ಥೆರಾ ಬ್ಯಾಂಡ್) ಒಂದು. ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಇದು ಲಭ್ಯವಿದ್ದು ಕಡಿಮೆ ಸಮಯದಲ್ಲಿ ಸರಳ ವ್ಯಾಯಾಮವನ್ನು ಮಾಡಬಹುದಾಗಿದೆ.
ರೆಸಿಸ್ಟೆಸ್Õ ಬ್ಯಾಂಡ್
ರೆಸಿಸ್ಟೆಸ್Õ ಬ್ಯಾಂಡ್ ಒಂದು ರಬ್ಬರ್ ಬ್ಯಾಂಡ್ (ಪಟ್ಟಿ). ಇದರ ಎರಡು ಬದಿಯ ತುದಿಗೆ ಮುಷ್ಟಿಯಲ್ಲಿ ಹಿಡಿದುಕೊಳ್ಳಲು ಅನುಕೂಲವಾಗುವಂತೆ ಗಟ್ಟಿಯಾದ ಪ್ಲಾಸ್ಟಿಕ್ ಹಿಡಿಕೆಗಳು ಇರುತ್ತವೆ. ಇದರ ರಬ್ಬರ್ ಟ್ಯೂಬ್ ನೀವು ಎಳೆಯುವ ಒತ್ತಡವನ್ನು ತಡೆದುಕೊಳ್ಳುವಂತಿರುತ್ತದೆ. ತುಂಬ ಹಗುರವಾಗಿರುವುದರಿಂದ ಬ್ಯಾಗ್‌ನಲ್ಲಿ ತೆಗೆದುಕೊಂಡು ಹೋಗಬಹುದು.
ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಂಡ್ ವಿಧಗಳು
ಹಲವು ವಿಧದ ಬ್ಯಾಂಡ್‌ಗಳು ಲಭ್ಯ ವಿದ್ದು ಒಂದು ಎಳೆ, ಎರಡು, ಮೂರು
ಹೀಗೆ ಅವರವರ ದೈಹಿಕ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಂಡ್‌ಗಳನ್ನು ಉಪಯೋಗಿಸಬಹುದು. ರನ್ನಿಂಗ್ ಮಾಡುವವರಿಗೆ ದಪ್ಪವಾದ ಬ್ಯಾಂಡ್ ಹಾಗೂ ಜಿಮ್‌ನಲ್ಲಿ ದೇಹವನ್ನು ಹುರಿಗೊಳಿಸುವ ಹೆಚ್ಚು ಬಿಗಿಯಾಗಿರುವ ಬ್ಯಾಂಡ್‌ಗಳನ್ನು ಉಪಯೋಗಿಸುತ್ತಾರೆ.
ಉಪಯೋಗ
ಜಿಮ್‌ಗೆ ಹೋಗಿ ಡಂಬಲ್‌ಗಳನ್ನು ಮುಷ್ಟಿಯಲ್ಲಿ ಎತ್ತಿ ತೋಳು ಹಾಗೂ ಮುಂಗೈಗಳನ್ನು ಬಲಗೊಳಿಸುವಂತೆ ಅಷ್ಟೇ ಪರಿಣಾಮಕಾರಿಯಾಗಿ ತೋಳುಗಳ ಸ್ನಾಯುಗಳನ್ನು ಬಲಗೊಳಿಸುವಲ್ಲಿ ಈ ಬ್ಯಾಂಡ್‌ಗಳು ಸಹಕಾರಿ. ಈ ಬ್ಯಾಂಡ್ ಅನ್ನು ನೆಲದ ಮೇಲೆ ನೇರವಾಗಿ ಹಾಸಿ ಮಧ್ಯಭಾಗದಲ್ಲಿ ಅದರ ಮೇಲೆ ನಿಂತು ಹಿಡಿಕೆಗಳನ್ನು ಮುಷ್ಟಿಯಲ್ಲಿ ಹಿಡಿದು ಡಂಬಲ್ಸ್ ಎತ್ತುವ ರೀತಿಯಲ್ಲಿಯೇ ಒಂದೊಂದೇ ಮುಷ್ಟಿಗಳನ್ನು ಭುಜದವರೆಗೆ ತಂದು ಹತ್ತು ಸೆಕೆಂಡುಗಳ ಕಾಲ ಒತ್ತಡವನ್ನು ತಡೆದುಕೊಂಡು ಅದೇ ಸ್ಥಿತಿಯಲ್ಲಿರಬೇಕು. ಅನಂತರ ನಿಧಾನವಾಗಿ ಕೆಳಗಿಳಿಸಬೇಕು.
ಇದನ್ನು ಕಂಬಕ್ಕೆ ಸುತ್ತಿ ಇಲ್ಲವೇ ನಿಮ್ಮ ಮನೆಯ ಕಿಟಿಕಿಯ ಸರಳುಗಳಿಗೆ ಸಿಕ್ಕಿಸಿ ಭುಜ, ಎದೆ, ಕಾಲು, ತೊಡೆ ಭಾಗದ ಸ್ನಾಯುಗಳಿಗೆ ವ್ಯಾಯಾಮ ನೀಡಿ ಬಲಗೊಳಿಸಬಹುದು.
- ಕಾರ್ತಿಕ್ ಚಿತ್ರಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.