ವೃದ್ಧಾಪ್ಯದ ಸಮಸ್ಯೆ ಹಲವಾರು
Team Udayavani, May 7, 2019, 7:25 AM IST
ಕಾಯಿಲೆಗಳು ಬರುವುದು ಸಾಮಾನ್ಯ. ಆದರೆ ವೃದ್ಧಾಪ್ಯದಲ್ಲಿ ಅದರಲ್ಲೂ 50 ವರ್ಷ ದಾಟಿದ ಹಿರಿಜೀವಗಳನ್ನು ಹಿಂಡಿ ಹಿಪ್ಪೆ ಮಾಡುವ ಕಾಯಿಲೆಗಳು ಹಲವಾರು. ಕೆಲವು ಕಾಯಿಲೆಗಳು ಔಷಧದಿಂದ ಕಡಿಮೆಯಾದರೆ, ಇನ್ನು ಕೆಲವು ಸೈಡ್ ಎಫೆಕ್ಟ್ ಉಂಟು ಮಾಡಿ ರೋಗಿಯನ್ನು ಇನ್ನಷ್ಟು ಹೈರಾಣಾಗಿಸುತ್ತದೆ. ಅವುಗಳಲ್ಲಿ ಮುಖ್ಯವಾಗಿ..
ಸ್ನಾಯು ಸೆಳೆತ
ಸ್ನಾಯು ಸೆಳೆತ, ಮಂಡಿ ನೋವು ಹಿರಿಯ ರ ಚಲನೆಯನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತದೆ. ಇತರರ ಸಹಾಯವಿಲ್ಲದೆ ಅಥವಾ ಇತರರನ್ನು ಅವಲಂಬಿಸದೆ ಎಲ್ಲಿಗೂ ಹೋಗಲಾಗದಂತಹ ಪರಿಸ್ಥಿತಿ ಉಂಟು ಮಾಡುತ್ತದೆ.
ಹೃದಯರೋಗಗಳು
ಹೃದಯ ಸಮಸ್ಯೆ ಇಳಿವಯಸ್ಸಿನವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆಹಾರ ಸೇವನೆ ಹಾಗೂ ವ್ಯಾಯಾಮದ ಕೊರತೆಯಿಂದ ಹೃದಯ ರೋಗಗಳು ಕಾಣಿಸಿಕೊಳ್ಳುತ್ತವೆ.
ಮನೆಯಲ್ಲೇ ಪರಿಹಾರ
ಇಳಿ ವಯಸ್ಸಿನಲ್ಲಿ ಕಾಡುವ ಹೆಚ್ಚಿನ ರೋಗಗಳಿಗೆ ವೈದ್ಯರು ಹೇಳುವ ಚಿಕಿತ್ಸೆ ಪಡೆದುಕೊಳ್ಳಬೇಕು. ಅದಕ್ಕೆ ಪೂರಕ ವಾತಾವರಣ ಮನೆಯಲ್ಲಿ ಸೃಷ್ಟಿಸಬೇಕು. ಆಹಾರ ಕ್ರಮದಲ್ಲಿ ಶಿಸ್ತು, ದೇಹಕ್ಕೆ ಪೂರಕವಾದ ವ್ಯಾಯಾಮ, ನಡಿಗೆ ಮಾಡುವ ಮೂಲಕ ಕಾಯಿಲೆಗಳನ್ನು ನಿಯಂತ್ರಣದಲ್ಲಿಡಬಹುದು.
ಡಯಾಬಿಟಿಸ್ ಅಥವಾ ಸಕ್ಕರೆ ಕಾಯಿಲೆ ಹಿರಿಯರಿಗೆ ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತದೆ. ಆದರೂ ಹಿರಿಯರಲ್ಲಿ ಇದು ಅಧಿಕ. ಸಿಹಿ ಪದಾರ್ಥಗಳ ಸೇವನೆ ಹಾಗೂ ಹೆಚ್ಚಿನ ಆಹಾರಗಳ ಸೇವನೆಯನ್ನು ನಿಯಂತ್ರಿಸುವ ಮೂಲಕ ಈ ರೋಗ ವಯೋವೃದ್ಧರ ಮಾನಸಿಕ ಶಕ್ತಿಯನ್ನು ಕುಂದಿಸುತ್ತದೆ.
-ಸುಶ್ಮಿತಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.