ಸಕಾರಾತ್ಮಕವಾಗಿ ಚಿಂತಿಸಿ ಆರೋಗ್ಯ ಕಾಪಾಡಿಕೊಳ್ಳಿ
Team Udayavani, Sep 10, 2019, 5:07 AM IST
ನಮ್ಮ ಜೀವನವು ನಮ್ಮ ಕೈಯಲ್ಲಿದೆ. ನಾವು ಎಲ್ಲಿದ್ದರೂ, ಹೇಗಿದ್ದರೂ ನಮ್ಮ ಜೀವನದಲ್ಲಿ ನಾವು ಪ್ರಜ್ಞಾಪೂರ್ವಕವಾಗಿ ಆಲೋಚನೆಗಳನ್ನು ಸಕಾರಾತ್ಮಕವಾಗಿ ಆಯ್ಕೆ ಮಾಡಲು ಪ್ರಾರಂಭಿಸಿದರೆ, ನಾವು ಬದಲಾಗಬಹುದು. ಪ್ರತಿಯೊಂದು ಸಂದರ್ಭಗಳಲ್ಲಿ ಸಕಾರಾತ್ಮಕವಾಗಿ ಚಿಂತಿಸುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ನಾವು ಸಂಪೂರ್ಣವಾಗಿ ಹೊಸ ಪ್ರಪಂಚವನ್ನು ಅನುಭವಿಸಬಹುದು. ಸಕಾರಾತ್ಮಕ ಯೋಜನೆಗಳು ನಮ್ಮ ಆರೋಗ್ಯಕರ ಜೀವನಕ್ಕೂ ಸಹಕಾರಿಯಾಗಿವೆ.
ಮನುಷ್ಯನೆಂದ ಮೇಲೆ ಸುಖ, ದು:ಖ, ಧೈರ್ಯ, ಭಯ, ಕೋಪ, ಪ್ರೀತಿ, ದ್ವೇಷ, ತೃಪ್ತಿ -ಅತೃಪ್ತಿ , ಕೀಳರಿಮೆ ಅಹಂಕಾರ ಇದ್ದೇ ಇರುತ್ತದೆ. ಕಷ್ಟ -ನೋವು ಮತ್ತು ಲಾಭ- ನಷ್ಟದ ಜತೆಗೆ ಸೋಲು- ಗೆಲುವು ಮತ್ತು ಯಶಸ್ಸು ನಿರಾಶೆಗಳೂ ಇದೆ. ಈ ನಕಾರಾತ್ಮಕ ಭಾವನೆಗಳನ್ನು ಸರಿಯಾಗಿ ನಿಭಾಯಿಸದಿದ್ದರೆ ದೈಹಿಕ ಮತ್ತು ಮಾನಸಿಕ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇವುಗಳಿಂದ ಹೊರಬರಲು ಸಕಾರಾತ್ಮಕ ಚಿಂತನೆಯೇ ದಾರಿ. ಸಣ್ಣಪುಟ್ಟ ಸಂಗತಿಗಳಿಗೆ. ಅನುಕೂಲತೆಗಳಿಗೆ ಸಂತೋಷಪಡಿ. ನಕಾರಾತ್ಮಕ ಆಲೋಚನೆಗಳನ್ನು ಹಾಗೂ ಅನುಭವಗಳನ್ನು ಬದಲಿಸಿ ಸಕಾರಾತ್ಮಕವಾಗಿ ಆಶಾವಾದಿಯಾಗಿ ಯೋಚಿಸಿ ಮತ್ತು ಕಾರ್ಯಪ್ರವೃತ್ತರಾಗಿ ವಾಸ್ತವಿಕತೆಯನ್ನು , ಸತ್ಯವನ್ನು ಒಪ್ಪಿಕೊಳ್ಳಿ ಮತ್ತು ಅದಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸಿ. ಎಲ್ಲರಿಗೆ ಪ್ರೀತಿ , ವಾತ್ಸಲ್ಯ, ಸ್ನೇಹವನ್ನು ಕೊಡಿ. ನಾನು ಏನೂ ಅಲ್ಲ ನಾನೇ ಎಲ್ಲಾ ಎಂಬುವುದನ್ನು ಬಿಟ್ಟು ನನ್ನಿಂದಲೂ ಸಾಧ್ಯವಿದೆ ಎಂದು ಮುಂದುವರಿಯುವುದೇ ಸಕಾರಾತ್ಮಕ ಚಿಂತನೆ. ಈ ಸಕಾರಾತ್ಮಕ ಮನೋಭಾವನೆ ಕುರಿತು ಮಕ್ಕಳಲ್ಲೂ ಅರಿವು ಮೂಡಿಸಬೇಕು.
ಸಕಾರಾತ್ಮಕ ಚಿಂತನೆಯ ಪ್ರಭಾವಗಳು
· ಆತ್ಮವಿಶ್ವಾಸ ಹೆಚ್ಚಿಸುವುದು
· ಮಾನಸಿಕ ಒತ್ತಡ ಕಡಿಮೆಯಾಗುವುದು
· ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಲು
· ಸಂಶೋಧನೆಗಳ ಪ್ರಕಾರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
· ಸುದೀರ್ಘ ಮತ್ತು ಸಂತೋಷದ ಜೀವನವನ್ನು ಅನುಭವಿಸಬಹುದು.
· ಶಾಂತ ಚಿತ್ತ ಮನಸ್ಸು ಮತ್ತು ನಿದ್ರೆ
· ನಾವು ಸಕಾರಾತ್ಮಕವಾಗಿ ಯೋಚಿಸಿದಾಗ ನಮ್ಮ ಮಿದುಳಿನಿಂದ ಎಂಡಾರ್ಫಿನ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಅದು ನಮ್ಮ ದೇಹದ ಉತ್ತಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
- ಡಾ| ರೇಷ್ಮಾ ಭಟ್, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ
BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು
Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ
2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ
50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.