ಸಕ್ಕರೆ ಪ್ರಮಾಣ ನಿಯಂತ್ರಿಸುವ ತರಕಾರಿಗಳು
Team Udayavani, Jul 16, 2019, 5:08 AM IST
ಕಣ್ಣ ಮುಂದೆ ಜಾಹಂಗೀರು, ಜಿಲೇಬಿ ಕೈಬೀಸಿ ಕರೆಯುತ್ತಿದ್ದರೂ ನಾಲಗೆ ಚಪಲ ಬಿಡುತ್ತಿಲ್ಲ. ತಿನ್ನದಿದ್ದರೆ ನಾಲಿಗೆಗೆ ಮೋಸ ತಿಂದರೆ ದೇಹವೇ ಕೈಲಾಸ ಎಂದು ಮುದಿವಯಸ್ಸಿನ ಸಾಕಮ್ಮ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದಾರೆ. ಮಧುಮೇಹ ಬಂದು ಬದುಕೇ ಕಹಿ ಅನಿಸಿದ ಅದೆಷ್ಟೋ ಮಂದಿ ಇದ್ದಾರೆ. 2015ರ ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ಭಾರತದಲ್ಲಿ ಶೇ.69.2 ಮಿಲಿಯನ್ ನಷ್ಟು ಮಂದಿ ಮಧುಮೇಹಿಗಳಿದ್ದಾರೆ. ದೇಹದ ಸಕ್ಕರೆ ಕಾಯಿಲೆಗೆ ಔಷಧಗಳು ಮಾತ್ರವೇ ಪರಿಹಾರವಾಗಿರದೇ ದಿನನಿತ್ಯದ ಆಹಾರ ಸೇವನೆಯಲ್ಲಿ ವಹಿಸುವ ಕಾಳಜಿಯು ಮುಖ್ಯ. ತರಕಾರಿಗಳ ಸೇವನೆ ಮಧುಮೇಹಿಗಳಿಗೆ ರಾಮಬಾಣವಿದ್ದಂತೆ.
ಮುಳ್ಳು ಸೌತೆ
ಅತಿ ಹೆಚ್ಚು ನೀರಿನ ಅಂಶ ಹೊಂದಿರುವ ಮುಳ್ಳು ಸೌತೆಕಾಯಿ ರಕ್ತದಲ್ಲಿ ಇನ್ಸುಲಿನ್ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ. ರಕ್ತಪರಿಚಲನೆಗೆ ನೆರವಾಗುವ ಸೌತೆಕಾಯನ್ನು ಸಲಾಡ್ ಅಥವಾ ಮೊಸರಿನೊಂದಿಗೆ ಸೇವಿಸಿದರೆ ಸಕ್ಕರೆ ಕಾಯಿಲೆ ನಿಯಂತ್ರಣವಾಗುತ್ತದೆ.
ಬೆಂಡೆಕಾಯಿ
ಇದು ರಕ್ತದ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡಿ ದೇಹ ಸಮಸ್ಥಿತಿಯಲ್ಲಿಡುತ್ತದೆ. ಇದನ್ನು ಬೇಯಿಸಿ ಪಲ್ಯ ಮಾಡಬಹುದು ಅಥವಾ ಸ್ವಲ್ಪ ಹುರಿದು ಹಾಗೆ ಕೂಡಾ ಸೇವಿಸಬಹುದು.
ಹಾಗಲಕಾಯಿ
ಸಕ್ಕರೆ ಕಾಯಿಲೆಗೆ ರಾಮಬಾಣವೆಂದು ಹಾಗಲಕಾಯಿಯನ್ನು ಕರೆಯುತ್ತಾರೆ. ಹೆಚ್ಚಿದ ಹಾಗಲಕಾಯಿಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿ ರುಬ್ಬಿ ಇಂಗಿಸಿದ ಭಾಗದ ಸೇವನೆ ಪ್ರತಿದಿನ ಮಾಡಿದರೆ ತಿಂಗಳೊಳಗೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.
ಕುಂಬಳಕಾಯಿ
ರೋಗ ನಿರೋಧಕ ಶಕ್ತಿಯ ಅಂಶವು ಕುಂಬಳಕಾಯಿಯಲ್ಲಿದೆ. ಇದು ಇನ್ಸುಲಿನ್ ಮಟ್ಟವನ್ನು ನಿಯಂತ್ರಣಕ್ಕೆ ತಂದು ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ತರಲು ಸಹಕಾರಿ. ಇದರ ಸಾರು ಅಥವಾ ಉಪ್ಪಿನೊಂದಿಗೆ ಬೇಯಿಸಿದ ಆಹಾರವನ್ನು ಸೇವಿಸಬಹುದಾಗಿದೆ.
ಮೂಲಂಗಿ
ರುಚಿ ಮತ್ತು ವಾಸನೆಯಲ್ಲಿ ಮೂಲಂಗಿ ಜನಸಾಮಾನ್ಯರಿಂದ ದೂರ ಉಳಿದಿದೆ. ದಿನಕ್ಕೆ ಒಂದು ಬಾರಿ ಪಲ್ಯ, ಸಾಂಬಾರು, ಚಟ್ನಿ, ಉಪ್ಪಿನಕಾಯಿ ಅಥವಾ ಹಸಿಯಾಗಿಯೂ ಸೇವಿಸಿ ಸಕ್ಕರೆ ಅಂಶವನ್ನು ನಿಯಂತಿಸಬಹುದು.
ಕೆಲವೊಂದು ಆಹಾರ ಸೇವನಯಲ್ಲಿ ಮಧುಮೇಹಿಗಳು ದೂರ ಇರುವುದೇ ಒಳ್ಳೆಯದು.ಆಲೂಗಡ್ಡೆ, ಒಣದ್ರಾಕ್ಷಿ, ವೈಟ್ ರೈಸ್ ಮುಂತಾದ ಆಹಾರ ಡಯಾಬೀಟಿಸ್ ಪೀಡಿತರಿಗೆ ಮಾರಕವಾಗಿದ್ದು ನುಗ್ಗೆಕಾಯಿ, ನವಿಲು ಕೊಸು, ತೊಂಡೆಕಾಯಿ, ಬೀನ್ಸ್, ಬೊÅಕೊಲಿ, ಕೊಸು ಗಡ್ಡೆ ಸೇವನೆ ಸಕ್ಕರೆ ಕಾಯಿಲೆಗೆ ಉತ್ತಮ ಪರಿಹಾರವಾಗಿದೆ.
ಟೊಮೇಟೊ
ಇಂದಿನ ಬಹುತೇಕ ಅಡುಗೆ ಮನೆಗಳಲ್ಲಿ ಟೊಮೆಟೊ ಇ¨ªೆ ಇರುತ್ತದೆ. ಇದರಲ್ಲಿ ಕಡಿಮೆ ಕಾಬೊìಹೈಡ್ರೇಟ್ ಮತ್ತು ಕಡಿಮೆ ಕ್ಯಾಲೋರಿಗಳಿರುವ ಕಾರಣ ಸಕ್ಕರೆಯ ಪ್ರಮಾಣ ಕಡಿಮೆ ಮಾಡುತ್ತದೆ.
ಸೊಪ್ಪುಗಳು
ಹಸಿರು ಎಲೆ ತರಕಾರಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮೆಂತ್ಯೆ, ಪಾಲಕ್ , ನುಗ್ಗೆ ಸೊಪ್ಪುಗಳಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಗಳು ಲಭ್ಯವಾಗಲಿದೆ. ಸೊಪ್ಪಿನ ಬೇಯಿಸಿದ ನೀರು ಸೇವನೆ ಸಕ್ಕರೆ ಕಾಯಿಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತದೆ.
ಕ್ಯಾರೆಟ್
ಕ್ಯಾರೆಟ್‌ನಲ್ಲಿ ವಿಟಮಿನ್ ಎ ಮತ್ತು ನಾರಿನಾಂಶ ವಿದ್ದು ಸಲಾಡ್, ಸೂಪ್ (ಹಸಿ ಅಥವಾ ಬೇಯಿಸಿ) ಸೇವಿಸಬಹುದು. ಇದರಲ್ಲಿ ಸಕ್ಕರೆ ಪ್ರಮಾಣ ತೀರಾ ಕಡಿಮೆ ಇರುವುದರಿಂದ ಮಧು ಮೇಹಿಗಳ ಸಕ್ಕರೆ ಅಂಶದ ನಿಯಂತ್ರಣ ಸಾಧ್ಯ.
- ರಾಧಿಕಾ ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.