“ನಮ್ಮನ್ನೂ ಕಡಬ ತಾಲೂಕಿಗೆ ಸೇರಿಸಿಕೊಳ್ಳಿ’


Team Udayavani, Apr 4, 2019, 2:10 PM IST

0304kdb2

ಕಡಬ : ಕೊನೆಗೂ ಕಡಬ ತಾಲೂಕು ಉದ್ಘಾಟನೆಯಾಗಿದೆ. ಆದರೆ ನೂತನ ಕಡಬ ತಾಲೂಕಿಗೆ ತುಂಬಾ ಹತ್ತಿರ ಇರುವ ಬೆಳ್ತಂಗಡಿ ತಾಲೂಕಿನ 5 ಗ್ರಾಮಗಳು ಹಾಗೂ ಸುಳ್ಯ ತಾಲೂಕಿನ 4 ಗ್ರಾಮಗಳನ್ನು ಕಡಬ ತಾಲೂಕಿಗೆ ಸೇರ್ಪಡೆಗೊಳಿಸಬೇಕೆಂಬ ಬೇಡಿಕೆಗೆ ಮಾತ್ರ ಮನ್ನಣೆ ಸಿಕ್ಕಿಲ್ಲ. ನೂತನ ತಾಲೂಕಿಗಾಗಿ ಸಲ್ಲಿಸಲಾಗಿದ್ದ ಪ್ರಸ್ತಾವನೆಯಲ್ಲಿ ನಮ್ಮ ಗ್ರಾಮಗಳ ಹೆಸರಿದ್ದರೂ ತಾಲೂಕು ರಚನೆಯ ವೇಳೆ ಹೆಸರುಗಳನ್ನು ಕೈಬಿಡಲಾಗಿದೆ ಎನ್ನುವ ಮುನಿಸು ಆ ಗ್ರಾಮಗಳ ಜನರದ್ದು.

ಕೈಬಿಟ್ಟ ಗ್ರಾಮಗಳು
ಕಡಬ ತಾಲೂಕಿಗಾಗಿ ಹಲವು ದಶಕಗಳಿಂದಲೇ ಹೋರಾಟಗಳು ನಡೆದಿತ್ತು. ಕಡಬದ ತಾಲೂಕಿನ ಪ್ರಸ್ತಾವನೆಯಲ್ಲಿ ಬೆಳ್ತಂಗಡಿ ತಾಲೂಕಿನ ಶಿಶಿಲ, ಕೊಕ್ಕಡ, ಶಿಬಾಜೆ, ರೆಖ್ಯಾ, ಹತ್ಯಡ್ಕ ಗ್ರಾಮಗಳು ಹಾಗೂ ಸುಳ್ಯ ತಾಲೂಕಿನ ಏನೆಕಲ್‌, ಸುಬ್ರಹ್ಮಣ್ಯ, ಐನೆಕಿದು, ಬಳ್ಪ, ಕೇನ್ಯ, ಎಣ್ಮೂರು, ಎಡಮಂಗಲ, ಐವತ್ತೂಕ್ಲು(ಪಂಜ), ಕೂತ್ಕುಂಜ, ಪಂಬೆತ್ತಾಡಿ ಮತ್ತು ಮುರುಳ್ಯ ಗ್ರಾಮಗಳನ್ನು ಸೇರ್ಪಡೆಗೊಳಿಸಲಾಗಿತ್ತು. ತಾಲೂಕು ರಚನ ಸಮಿತಿಗಳೂ ಈ ಗ್ರಾಮಗಳನ್ನು ಸೇರ್ಪಡೆಗೊಳಿಸಿಯೇ ಸರಕಾರಕ್ಕೆ ವರದಿ ನೀಡಿದ್ದವು.

ಆದರೆ ಹೊಸ ತಾಲೂಕುಗಳ ಘೋಷಣೆ ಯಾದಾಗ ಬೆಳ್ತಂಗಡಿ ತಾಲೂಕಿನ ಗ್ರಾಮ ಗಳನ್ನು ಕೈಬಿಟ್ಟು, ಸುಳ್ಯ ತಾಲೂಕಿನ 7 ಗ್ರಾಮಗಳನ್ನು ಮಾತ್ರ ಸೇರಿಸಿಕೊಳ್ಳಲಾಗಿತ್ತು. ಸುಳ್ಯ ತಾಲೂಕಿನ ಐವತ್ತೂಕ್ಲು (ಪಂಜ), ಕೂತ್ಕುಂಜ, ಪಂಬೆತ್ತಾಡಿ ಮತ್ತು ಮುರುಳ್ಯ ಗ್ರಾಮಗಳನ್ನು ಕಡಬ ತಾಲೂಕಿನ ವ್ಯಾಪ್ತಿಯಿಂದ ಕೈಬಿಡಲಾಗಿತ್ತು.

ಜನರಿಗೆ ಅನುಕೂಲವಾಗಲಿದೆ ನೂತನ ತಾಲೂಕಿನ ವ್ಯಾಪ್ತಿಯಿಂದ ಕೈಬಿಡಲಾಗಿರುವ ಬೆಳ್ತಂಗಡಿ ಮತ್ತು ಸುಳ್ಯ ತಾಲೂಕಿನ ಈ ಗ್ರಾಮಗಳು ಕಡಬ ತಾಲೂಕು ಕೇಂದ್ರಕ್ಕೆ ಭೌಗೋಳಿಕವಾಗಿ ಬಹಳ ಹತ್ತಿರವಾಗಿದ್ದು, ಅಲ್ಲಿಯ ಜನರ ಅನುಕೂಲಕ್ಕಾಗಿ ಆ ಗ್ರಾಮಗಳನ್ನು ಕಡಬ ತಾಲೂಕಿಗೆ ಸೇರ್ಪಡೆಗೊಳಿಸಬೇಕು ಎನ್ನುವ ಬೇಡಿಕೆ ಸರಕಾರದ ಮಟ್ಟಕ್ಕೆ ತಲುಪಿದೆ. ಬೆಳ್ತಂಗಡಿ ತಾಲೂಕಿನ ಶಿಶಿಲ, ಕೊಕ್ಕಡ, ಶಿಬಾಜೆ, ರೆಖ್ಯಾ, ಹತ್ಯಡ್ಕ ಗ್ರಾಮಗಳು ಕಡಬ ತಾಲೂಕಿಗೆ ಸೇರ್ಪಡೆಯಾಗಬೇಕು ಎಂದು ಆಯಾ ಗ್ರಾ.ಪಂ.ಗಳು ನಿರ್ಣಯ ಕೈಗೊಂಡಿವೆ. ಸುಳ್ಯ ತಾಲೂಕಿನ ಐವತ್ತೂಕ್ಲು (ಪಂಜ), ಕೂತ್ಕುಂಜ, ಪಂಬೆತ್ತಾಡಿ ಮತ್ತು ಮುರುಳ್ಯ ಗ್ರಾಮಗಳಿಗೂ ಕಡಬ ತಾ| ಕೇಂದ್ರ ವಾದರೆ ಅನುಕೂಲವಾಗಲಿದೆ ಎಂದು ಅಲ್ಲಿನ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಜಿಲ್ಲಾಧಿಕಾರಿಗೆ ಸೂಚನೆ
ಮುಖ್ಯಮಂತ್ರಿ, ಕಂದಾಯ ಸಚಿವರು, ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಫಲವಾಗಿ ರಾಜ್ಯದ ಅಧೀನ ಕಾರ್ಯದರ್ಶಿಯವರು ಸೂಕ್ತ ಕ್ರಮ ಕೈಗೊಳ್ಳುವಂತೆ, ಅಗತ್ಯವಿದ್ದಲ್ಲಿ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ ಎಂದು ಕಡಬ ತಾ| ಹೋರಾಟ ಸಮಿತಿಯ ಕಾರ್ಯದರ್ಶಿ ಸಯ್ಯದ್‌ ಮೀರಾ ಸಾಹೇಬ್‌ ತಿಳಿಸಿದ್ದಾರೆ.

ಸೇರಿಸಿದರೆ ಉತ್ತಮ
ಪ್ರಸ್ತುತ ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಯಲ್ಲಿರುವ ಶಿಶಿಲ, ಕೊಕ್ಕಡ, ಶಿಬಾಜೆ, ರೆಖ್ಯಾ ಹಾಗೂ ಹತ್ಯಡ್ಕ ಗ್ರಾಮಗಳನ್ನು ಕಡಬ ತಾಲೂಕಿಗೆ ಸೇರಿಸಿದರೆ ಅಲ್ಲಿನ ಜನರಿಗೆ ಅನುಕೂವಾಗಲಿದೆ. ನಾವು ಕಂದಾಯ ಕಚೇರಿಯ ಕೆಲಸಗಳಿಗೆ ಮಾತ್ರ ಬೆಳ್ತಂಗಡಿಗೆ ಹೋಗಬೇಕಿದೆ. ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲ. ರಸ್ತೆಗಳ ಪರಿಸ್ಥಿತಿಯಂತೂ ಹೇಳುವುದೇ ಬೇಡ. ಉತ್ತಮ ರಸ್ತೆ ಮತ್ತು ಸೇತುವೆಗಳಿರುವ ಕಾರಣ ನಮಗೆ ಕಡಬವನ್ನು ತಲುಪುವುದು ಸುಲಭ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಗ್ರಾಮಗಳನ್ನು ಕಡಬ ತಾಲೂಕಿಗೆ ಸೇರ್ಪಡೆಗೊಳಿಸಿ ಎನ್ನುವುದು ನಮ್ಮ ಆಗ್ರಹ.
 ಎ.ಸಿ. ಮ್ಯಾಥ್ಯೂ, ಮಾಜಿ ಅಧ್ಯಕ್ಷರು, ಶಿಬಾಜೆ ಗ್ರಾ.ಪಂ.

ನಾಗರಾಜ್‌ ಎನ್‌.ಕೆ.

ಟಾಪ್ ನ್ಯೂಸ್

1-nikil

Channapatna; ಜನಾದೇಶಕ್ಕೆ ತಲೆಬಾಗುತ್ತೇನೆ, ಪ‌ಲಾಯನ ಮಾಡಲ್ಲ: ನಿಖಿಲ್‌

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

renukaacharya

BJP; ಹರಕುಬಾಯಿ ನಾಯಕರಿಂದಲೇ ಸೋಲು: ರೇಣುಕಾಚಾರ್ಯ ಆಕ್ರೋಶ

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

Exam 2

SSLC ಪರೀಕ್ಷೆ ನೋಂದಣಿ: ನ.30ರವರೆಗೆ ಅವಧಿ ವಿಸ್ತರಣೆ

R Ashok (2)

R. Ashok; ಪಾಪ, ನಿಖಿಲ್‌ ಅದೃಷ್ಟವೇ ಸರಿಯಿಲ್ಲ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

1-nikil

Channapatna; ಜನಾದೇಶಕ್ಕೆ ತಲೆಬಾಗುತ್ತೇನೆ, ಪ‌ಲಾಯನ ಮಾಡಲ್ಲ: ನಿಖಿಲ್‌

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

World Super Kabaddi League: ವಿಶ್ವ ಕಬಡ್ಡಿ ಲೀಗ್‌ಗೆ ಅನುಮತಿ

World Super Kabaddi League: ವಿಶ್ವ ಕಬಡ್ಡಿ ಲೀಗ್‌ಗೆ ಅನುಮತಿ

renukaacharya

BJP; ಹರಕುಬಾಯಿ ನಾಯಕರಿಂದಲೇ ಸೋಲು: ರೇಣುಕಾಚಾರ್ಯ ಆಕ್ರೋಶ

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.