ಫ‌ುಟ್‌ಪಾತ್‌ ಇರುವುದು ಪಾದಚಾರಿಗಳಿಗಲ್ಲವೇ?


Team Udayavani, Dec 8, 2019, 4:00 AM IST

sd-29

ಸಾಂದರ್ಭಿಕ ಚಿತ್ರ

ವಾಹನವಿರಲಿ, ಇಲ್ಲದಿರಲಿ ಬಹುತೇಕ ಎಲ್ಲರೂ ಕೂಡ ನಗರದಲ್ಲಿ ಒಂದಿಲ್ಲೊಂದು ಸಂದರ್ಭದಲ್ಲಿ ಫ‌ುಟ್‌ಪಾತ್‌ನ್ನು ಬಳಸಲೇಬೇಕಾಗುತ್ತದೆ. ಫ‌ುಟ್‌ಪಾತ್‌ ಇಲ್ಲದಿರುವ ಕಡೆಗಳಲ್ಲಿ ಫ‌ುಟ್‌ಪಾತ್‌ ಇಲ್ಲ ಎಂಬುದು ಒಂದು ಗೋಳು. ಆದರೆ ಫ‌ುಟ್‌ಪಾತ್‌ ಇದ್ದರೂ ಅದು ಪಾದಚಾರಿಗಳ ಪ್ರಯೋಜನಕ್ಕೆ ಸಿಗದಿರುವುದು ದೊಡ್ಡ ದುರಂತವೇ ಸರಿ.

ಫ‌ುಟ್‌ಪಾತ್‌ಗಳ ಮೇಲೆ ವಾಹನಗಳ ಅಥವಾ ವ್ಯಾಪಾರಿಗಳ ಆಕ್ರಮಣ. ಪಾರ್ಕಿಂಗ್‌ ಕೊರತೆಯನ್ನು ಬಹುವಾಗಿ ಎದುರಿಸುತ್ತಿರುವ ಮಂಗಳೂರಿನಲ್ಲಿ ಸಿಕ್ಕ ಸಿಕ್ಕಲ್ಲಿ ಪಾರ್ಕಿಂಗ್‌. ಈಗ ವಾಹನಗಳ ಕಣ್ಣು ಬಿದ್ದಿರುವುದು ಫ‌ುಟ್‌ಪಾತ್‌ ಮೇಲೆ. ಹಾಗಾಗಿ ಫ‌ುಟ್‌ಪಾತ್‌ ಏರಿ ಪಾರ್ಕಿಂಗ್‌ ಮಾಡಲಾಗುತ್ತದೆ ಇವು ಸಾಮಾನ್ಯ ಕಾರಣಗಳಾಗಿವೆ.

ನಗರದ ಹಲವೆಡೆ ರಸ್ತೆಗೆ ಸಮತಟ್ಟಾಗಿ ಫ‌ುಟ್‌ಪಾತ್‌ ಇರುವುದರಿಂದ ಫ‌ುಟ್‌ಪಾತ್‌ನ್ನು ರಸ್ತೆಯಂತೆಯೇ ವಾಹನಗಳು ಬಳಕೆ ಮಾಡುತ್ತಿವೆ. ವಾಹನಗಳ ಸಂಚಾರವೂ ಕೆಲವೊಮ್ಮೆ ಫ‌ುಟ್‌ಪಾತ್‌ ಮೇಲೆಯೇ ಇರುತ್ತದೆ. ಇದು ಪಾದಚಾರಿಗಳಿಗೆ ಭಾರೀ ಅಪಾಯ ವನ್ನು ತಂದೊಡ್ಡಿವೆ. ಇತ್ತೀಚೆಗೆ ಲಾಲ್‌ಭಾಗ್‌ ಸಮೀಪ ಕೆಎಸ್ಸಾರ್ಟಿಸಿ ಕಡೆಗೆ ಹೋಗುವ ಬಲ ಭಾಗದ ರಸ್ತೆ ಬದಿ ಕೂಡ ಇದೇ ರೀತಿ ಫ‌ುಟ್‌ಪಾತ್‌ ನಿರ್ಮಿಸಲಾಗಿದೆ. ಇದು ರಸ್ತೆಯಷ್ಟೇ ಎತ್ತರದಲ್ಲಿದೆ. ಈ ಹಿಂದೆ ನಿರ್ಮಾಣವಾದ ಪಿವಿಎಸ್‌ನಿಂದ ಲಾಲ್‌ಭಾಗ್‌ವರೆಗಿನ ರಸ್ತೆಯ ಫ‌ುಟ್‌ಪಾತ್‌ನಲ್ಲಿಯೂ ಹಲವಡೆ ಇದೇ ರೀತಿ ವಾಹನಗಳು ನುಗ್ಗಿ ಅಪಾಯ ತಂದೊಡ್ಡುತ್ತಿವೆ. ಲಾಲ್‌ಭಾಗ್‌ನಿಂದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ಕಡೆಗೆ ಹೋಗುವ ರಸ್ತೆಯಲ್ಲಿ ಸ್ವಲ್ಪ ದೂರದವರೆಗೆ ಮಾತ್ರವೇ ಫ‌ುಟ್‌ಪಾತ್‌ ಇದೆ. ಮುಂದೆ ರಸ್ತೆಯೇ ಫ‌ುಟ್‌ಪಾತ್‌ ಆಗಿದೆ. ಕ್ಲಾಕ್‌ಟವರ್‌ನಿಂದ ಎ.ಬಿ.ಶೆಟ್ಟಿ ಸರ್ಕಲ್‌ವರೆಗೆ ಸಾಗುವ ರಸ್ತೆಯ ಎರಡೂ ಬದಿ ಫ‌ುಟ್‌ಪಾತ್‌ ನಿರ್ಮಾಣ ನಡೆಯುತ್ತಿದೆ. ಆದರೆ ಆರ್‌ಟಿಒ ಕಚೇರಿ ಇರುವ ಬದಿಯಲ್ಲಿ ಫ‌ುಟ್‌ಪಾತ್‌ ಮೇಲೆ ಮ್ಯಾನ್‌ಹೋಲ್‌ಗ‌ಳನ್ನು ಮುಚ್ಚಲು ಇಡಲಾದ ಸ್ಲಾಬ್‌ಗಳು ಹಾಗೆಯೇ ಇವೆ. ಇದು ಪಾದಚಾರಿಗಳ ಸಂಚಾರಕ್ಕೆ ತೊಡಕಾಗಿದೆ. ಇಲ್ಲಿ ಕಾಮಗಾರಿಯನ್ನು ವೇಗವಾಗಿ ನಡೆಸಿ ಪೂರ್ಣಗೊಳಿಸಬೇಕಾಗಿದೆ.

ಟಾಪ್ ನ್ಯೂಸ್

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.