ಸೇತುವೆ, ಫ್ಲೈಓವರ್ ಗಳು ಆಕರ್ಷಕವಾಗಿರಲಿ
Team Udayavani, Jan 27, 2019, 7:28 AM IST
ಸ್ಮಾರ್ಟ್ ನಗರಿಯಾಗುತ್ತಿರುವ ಮಂಗಳೂರಿನ ರಸ್ತೆಗಳು, ಸೇತುವೆ, ಫ್ಲೈ ಓವರ್, ವೃತ್ತಗಳು ಅಭಿವೃದ್ಧಿಯ ಹಂತದಲ್ಲಿವೆ. ನಗರ ಆಕರ್ಷಕವಾಗಿರಬೇಕಾದರೆ ಇಲ್ಲಿ ನಾವು ಕಲಾ ಪ್ರೌಢಿಮೆಯನ್ನು ತೋರಿಸಲೇ ಬೇಕು. ಈ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯಲು ಸಾಧ್ಯವಿದೆ. ಮುಖ್ಯವಾಗಿ ಸೇತುವೆ, ಫ್ಲೈಓವರ್ ನಿರ್ಮಾಣದ ವೇಳೆ ಆರ್ಕಿ ಟೆಕ್ಟ್, ಚಿತ್ರಕಲಾವಿದರನ್ನು ಸೇರಿಸಿಕೊಂಡು ಆಕರ್ಷಕವಾದ ಯೋಜನೆಯನ್ನು ರೂಪಿಸಿದರೆ ಇವು ಗಳು ಮುಂದೊಂದು ದಿನ ಪ್ರವಾಸಿ ತಾಣವಾಗಿ ಮಾರ್ಪಾಡಾಗಲು ಸಾಧ್ಯವಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ವಿಯೆಟ್ನಾಂನಲ್ಲಿರುವ ಗೋಲ್ಡನ್ ಬ್ರಿಡ್ಜ್.
ಈ ಸೇತುವೆ ಎರಡು ಕೈಗಳು ಹಿಡಿದುಕೊಂಡ ರೀತಿಯಲ್ಲಿದೆ. 150 ಮೀಟರ್ ಉದ್ದವಿರುವ ಈ ಸೇತುವೆ ಸಮುದ್ರ ಮಟ್ಟಕ್ಕಿಂತ 3,280 ಫೀಟ್ ಎತ್ತರದಲ್ಲಿದೆ. ಕಲ್ಲಿನಿಂದ ಎರಡೂ ಕೈಗಳನ್ನು ನಿರ್ಮಿಸಲಾಗಿದೆ. ಉಕ್ಕಿನ ಜಾಲರಿ ಹೊಂದಿರುವ ಈ ಸೇತುವೆಗೆ ಫೈಬರ್ ಗ್ಲಾಸ್‌ನ ಫಿನಿಶಿಂಗ್ ಟಚ್ ನೀಡ ಲಾ ಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಇದು ತನ್ನತ್ತ ಸೆಳೆಯುತ್ತಿದೆ.
ವಿಯೆ ಟ್ನಾಂನ ದ ನಾಗ್‌ನಲ್ಲಿರುವ ಡ್ರ್ಯಾಗನ್ ಬ್ರಿಡ್ಜ್ ಕೂಡ ಅತ್ಯಾಕರ್ಷಕ ಸೇತುವೆಗಳಲ್ಲಿ ಒಂದಾಗಿದೆ. ಆರು ಪಥವನ್ನು ಹೊಂದಿರುವ ಈ ಬ್ರಿಡ್ಜ್ ಅನ್ನು ಕಬ್ಬಿಣದಿಂದ ನಿರ್ಮಿಸಲಾಗಿದೆ. 40 ಸಾವಿರ ಟನ್ ಭಾರವಿರುವ ಈ ಸೇತುವೆ ಅರ್ಧ ಮೈಲು ದೂರವನ್ನು ಹೊಂದಿದೆ. ಬೆಂಕಿ, ನೀರು, ತಂಪಾದ ಗಾಳಿಯನ್ನು ಬ್ರಿಡ್ಜ್ ನಲ್ಲಿರುವ ಡ್ರ್ಯಾಗನ್ ಉಗುಳುವ ವ್ಯವಸ್ಥೆ ಇಲ್ಲಿದೆ. 2,500 ಎಲ್ ಇಡಿ ಬಲ್ಬ್ ಗಳಿಂದ ಡ್ರ್ಯಾಗನ್ ಬ್ರಿಡ್ಜ್ ಅನ್ನು ಅಲಂಕರಿಸಲಾಗಿದೆ. ಮಂಗಳೂರು ವ್ಯಾಪ್ತಿಯಲ್ಲಿ ಸಮುದ್ರ ತೀರ, ನದಿಗಳು ಸಾಕಷ್ಟಿವೆ.
ಇಲ್ಲಿ ಇಂಥ ಆಕರ್ಷಕ ಸೇತುವೆಗಳನ್ನು ನಿರ್ಮಿಸಬಹುದು. ಈ ಸೇತುವೆಗಳು ಜನರ ವಾಕಿಂಗ್ ಪಾಥ್ ಅನ್ನಾಗಿಯೂ ಮಾಡಬಹುದು. ಇಲ್ಲವೇ ಪ್ರವಾಸಿ ತಾಣವನ್ನಾಗಿಯೂ ನಿರ್ಮಿಸಬಹುದು. ಸುಂದರ, ಆಕರ್ಷ ಪರಿಸರ ಇರುವಲ್ಲಿ ಇಂಥ ಸೇತುವೆಗಳು ನಿರ್ಮಾಣವಾದರೆ ಸಾಕಷ್ಟು ಪ್ರವಾಸಿಗರು ಇದನ್ನು ವೀಕ್ಷಿಸಲು ಖಂಡಿತಾ ಬರುತ್ತಾರೆ.
ವಿದ್ಯಾ ಕೆ. ಇರ್ವತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.