ಕಟ್ಟಡ ತ್ಯಾಜ್ಯ ನಿರ್ವಹಣೆಗೆ ಚೀನ ಎಕ್ಸ್ ಪ್ರೆಸ್ ವೇ ಮಾದರಿ
Team Udayavani, Dec 9, 2018, 1:29 PM IST
ದೇಶದಲ್ಲಿ ಕಟ್ಟಡ ತ್ಯಾಜ್ಯ ನಿರ್ವಹಣೆ ಇಂದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಹೊಸ ಕಟ್ಟಡ ನಿರ್ಮಾಣ ಮಾಡುವಾಗ ಹಳೆ ಕಟ್ಟಡದ ಕಬ್ಬಿಣದಂಥ ಲೋಹಗಳನ್ನು ಗುಜರಿಗೆ ಹಾಕಿದರೆ, ಇನ್ನು ಸಿಮೆಂಟ್ ಗೋಡೆಗಳ ತ್ಯಾಜ್ಯವನ್ನು ಪರಿಸರದ ಎಲ್ಲೆಂದರಲ್ಲಿ ಸುರಿಯಲಾಗುತ್ತಿದೆ. ಇದರ ವಿಲೇವಾರಿ ಬಗ್ಗೆ ಕಠಿನ ಆದೇಶವಿದ್ದರೂ ಕೂಡ ಉಲ್ಲಂಘಿ ಸಿ, ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿದೆ. ಇದು ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿದೆ.
ಕಟ್ಟಡ ತ್ಯಾಜ್ಯ ನಿರ್ವಹಣೆ ತಲೆನೋವಾಗಿ ಪರಿಣಮಿಸಿರುವುದರಿಂದ ಆಡಳಿತ ವ್ಯವಸ್ಥೆ ಅಗತ್ಯವಾದ ಯೋಚನೆ ಮಾಡಬೇಕಿದೆ. ಅಂತಹ ಯೋಚನೆಗಳಲ್ಲಿ ನಮಗೆ ಚೀನ ದೇಶವು ಕಟ್ಟಡ ತ್ಯಾಜ್ಯವನ್ನೇ ಬಳಸಿಕೊಂಡೇ ರಸ್ತೆ ಹೆದ್ದಾರಿಯನ್ನೇ ನಿರ್ಮಿಸಿರುವುದು ನಮಗೆ ಮಾದರಿಯಾಗಬೇಕಿದೆ.
ಚೀನದ ಮಾದರಿ ಎಕ್ಸ್‌ಪ್ರೆಸ್ ವೇ
ಹೊಸತನಕ್ಕೆ ಮಾದರಿಯಾಗಿರುವ ಚೀನ ದೇಶದಲ್ಲಿ ಒಂದು ಕಾಲದಲ್ಲಿ ತ್ಯಾಜ್ಯ ನಿರ್ವಹಣೆ ಕಷ್ಟಕರವಾಗಿತ್ತು. ಅಂಥ ಸಂದರ್ಭದಲ್ಲಿ ಅವರಿಗೆ ಉಪಾಯಕ್ಕೆ ಬಂದಿದ್ದು, ಈ ತ್ಯಾಜ್ಯವನ್ನು ಮರುಪೂರಣ ಮಾಡಬೇಕು ಎಂಬ ಆಲೋಚನೆ. ಇದಕ್ಕೆ ಚೀನ ದೇಶವೂ ಸುಮಾರು 200 ಹೆಕ್ಟೇರ್ ಪ್ರದೇಶದಲ್ಲಿ ಸಂಗ್ರಹಿಸಬಹುದಾಗಿದ್ದ ಕಟ್ಟಡ ತ್ಯಾಜ್ಯವನ್ನೇ ಬಳಸಿಕೊಂಡು ದೇಶದಲ್ಲಿ 122 ಕಿ.ಮೀ. ನಷ್ಟು ಉದ್ದದ ಎಕ್ಸ್‌ಪ್ರೆಸ್ ವೇಯನ್ನು ಆಗ್ನೇಯ ಚೀನದ ಶಾನ್ಸ್‌ಕೀ ಪ್ರ್ಯಾಂತದ ಲಿನ್‌ಟಾಂಗ್ ಎಂಬ ಜಿಲ್ಲೆಯಲ್ಲಿ ನಿರ್ಮಿಸಲಾಯಿತು. ಈ ರಸ್ತೆ ನಿರ್ಮಾಣಕ್ಕೆ ಸುಮಾರು 57 ಲಕ್ಷ ಟನ್ ಕಟ್ಟಡ ತ್ಯಾಜ್ಯವನ್ನು ಬಳಸಲಾಗಿದೆ. ಇದರಿಂದಾಗಿ 34 ಲಕ್ಷ ಕ್ಯುಬಿಕ್ ಮೀಟರ್ ಮರಳು ಹಾಗೂ 32,000 ಟನ್ ಕಲ್ಲಿದ್ದಲು ಉಳಿಸಲಾಗಿದ್ದು, ಕಡಿಮೆ ಖರ್ಚಿನಲ್ಲಿ ನಿರ್ಮಿಸಲಾಗಿರುವ ಈ ಎಕ್ಸ್‌ಪ್ರೆಸ್ ವೇಯೂ ಸಂಚಾರಕ್ಕೆ ಯೋಗ್ಯವಾಗಿರುವುದಲ್ಲದೇ ದೇಶದ ತ್ಯಾಜ್ಯ ಮರುಪೂರಣ ಮಾಡಿದ್ದಕ್ಕಾಗಿ ಚೀನ ಇಂದು ಜಗತ್ತಿಗೆ ಮಾದರಿಯಾಗುತ್ತದೆ. ಈ ಮಾದರಿ ನಡೆಯಿಂದಾಗಿ ಪರಿಸರ ಸಂರಕ್ಷಣೆಯೆ ಜತೆ ಜತೆಗೆ ವಿನೂತನ ಪ್ರಯೋಗದ ಪಾಠವನ್ನು ನಾವು ಕಲಿಯಬಹುದಾಗಿದೆ.
ಭಾರತ ದೇಶವೂ ಕೂಡ ಇಂದು ನಗರೀಕರಣಕ್ಕೆ ತೆರೆದುಕೊಂಡಿದೆ. ಗಗನಚುಂಬಿ ಹಾಗೂ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಈ ಮಧ್ಯೆ ಹಳೆಯ ಕಟ್ಟಡಗಳನ್ನೇ ಬೀಳಿಸಿ, ಹೊಸ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಹಳೆಯ ಕಟ್ಟಡದ ತ್ಯಾಜ್ಯದ ನಿರ್ವಹಣೆಗೆ ಮಾಡಲಾಗದೇ ಪರಿಸರದಲ್ಲಿ ತ್ಯಾಜ್ಯವಾಗುತ್ತಿರುವುದು ನಾವು ನೋಡಬಹುದು.
ಇನ್ನು ಸ್ಮಾರ್ಟ್‌ಸಿಟಿ ಪಟ್ಟಿಯಲ್ಲಿರುವ ಮಂಗಳೂರು ಮಹಾನಗರದ ಕಥೆಯೂ ಕೂಡ ಬೇರೆಯೇನಿಲ್ಲ. ಕಟ್ಟಡ ತ್ಯಾಜ್ಯ ನಿರ್ವಹಣೆ ಅದೇನೂ ದೊಡ್ಡ ಸವಾಲೇನೂ ಅಲ್ಲ, ಅದನ್ನು ನಿರ್ವಹಣೆ ಮಾಡಲು ಆಡಳಿತ ವ್ಯವಸ್ಥೆ ಮನಸ್ಸು ಮಾಡಿ, ಎಕ್ಸ್‌ಪ್ರೆಸ್ ವೇಯನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಿಬಹುದು. ಈ ಮೂಲಕ ಸ್ಮಾರ್ಟ್ ನಗರಿಯಲ್ಲೊಂದು ಸ್ಮಾರ್ಟ್ ಚಿಂತನೆ ಬೆಳೆಯಬಲ್ಲದು.
ಶಿವ ಸ್ಥಾವರಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.