ವೃತ್ತಗಳು ಅಭಿವೃದ್ಧಿಯಾಗಲಿ
Team Udayavani, Jan 6, 2019, 7:40 AM IST
ಕೆಲವೊಂದು ವೃತ್ತ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವುದು ಬಹಳ ಸಂತಸದ ವಿಷಯ. ಬಹುಶಃ ನಾಲ್ಕು ರಸ್ತೆಗಳು ಸೇರಿ ಅತ್ಯುತ್ತಮ ವೃತ್ತ ಪ್ರದೇಶವಾಗಿರುವ ಲೇಡಿಹಿಲ್ ವೃತ್ತಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿದ್ದು, ಕೆಲಸ ಸಂಪೂರ್ಣವಾಯಿತೋ ಅಥವಾ ಸಂಪೂರ್ಣವಾಗಬೇಕೋ ಎಂದು ತಿಳಿದು ಬರುವುದಿಲ್ಲ. ಅಂತೂ, ವೃತ್ತ ಪ್ರದೇಶವು ಸುಂದರವಾಗುತ್ತದೆ. ಈಗ ಪಿ.ವಿ.ಎಸ್. ವೃತ್ತದ ಸರದಿ. ಅತೀ ಚಟುವಟಿಕೆಯಿಂದಿರುವ ಈ ವೃತ್ತದ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕಾಗಿದೆ.
ಉಡುಪಿ ಕಡೆಯಿಂದ ನಗರದ ಮುಖ್ಯ ಪ್ರದೇಶಕ್ಕೆ ಬರುವ ವಾಹನಗಳಿಗೆ ಪ್ರಮುಖ ಕೊಂಡಿಯಾಗಿರುವ ಈ ವೃತ್ತದಲ್ಲಿ ವಾಹನಗಳು ಹಾದು ಹೋಗುತ್ತಿದ್ದು, ಟ್ರಾಫಿಕ್ ಕಿರಿಕಿರಿಯಾಗುತ್ತದೆ. ನವಭಾರತ ವೃತ್ತದತ್ತ ಹೋಗುವ ವಾಹನದವರು ಸಿಗ್ನಲ್ ತಡೆಯಿದ್ದಾಗ ದ್ವಿಪಥವನ್ನು ಆವರಿಸಿಕೊಂಡಿರುವುದರಿಂದ ಬಂಟ್ಸ್‌ಹಾಸ್ಟೆಲ್ ಕಡೆಗೆ ಹೋಗುವ ವಾಹನದವರಿಗೆ ಸಿಗ್ನಲ್ ಫ್ರೀ ಇದ್ದರೂ ಮುಂದುವರೆಯಲಿಕ್ಕಾಗದೆ, ಆ ಪ್ರದೇಶದಲ್ಲಿ ಟ್ರಾಫಿಕ್ ಕಿರಿಕಿರಿಯಾಗುತ್ತದೆ. ಒಂದು ವೇಳೆ ಅಲ್ಲಿ ಶಾಶ್ವತವಾದ ಅಭಿವೃದ್ಧಿ ಕೆಲಸ ಅಸಾಧ್ಯವಾದರೆ ತ್ಕಾಲಿಕವಾಗಿಯಾದರೂ ಅಭಿವೃದ್ಧಿ ಕೆಲಸ ಮಾಡುವುದರೊಂದಿಗೆ ಕೆನರಾ ಕಾಲೇಜು ಕಡೆಯಿಂದ ಬಂಟ್ಸ್‌ಹಾಸ್ಟೆಲ್ ಕಡೆಗೆ ಹೋಗುವಂತಹ ವಾಹನಗಳಿಗೆ ಅನುಕೂಲ ಮಾಡಿಕೊಟ್ಟರೆ ಉತ್ತಮ.
ಮುಖ್ಯವಾಗಿ ಕೆನರಾ ಕಾಲೇಜಿನಿಂದ ಬಂಟ್ಸ್ ಹಾಸ್ಟೆಲಿನತ್ತ ಹೋಗುವ ವಾಹನಗಳಿಗೆ
ತುಂಬಾ ತಡೆಯಾಗುತ್ತಿದೆ. ವೃತ್ತ ಪ್ರದೇಶದ ಎಡಗಡೆ (ಕೆನರಾ ಕಾಲೇಜು – ಬಂಟ್ಸ್‌ಹಾಸ್ಟೆಲ್)
ದ್ವಿಪಥದ ರಸ್ತೆಯಿದ್ದು, ಉಳಿದ ಪ್ರದೇಶ ಮಣ್ಣಿನಿಂದ ಕೂಡಿದ್ದು, ಉಬ್ಬುತಗ್ಗಿನಿಂದ ಆವೃತ್ತವಾಗಿದೆ.
ವಿಶ್ವನಾಥ್ ಕೋಟೆಕಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.