ಸ್ಮಾರ್ಟ್ ಸ್ಲಮ್ ನಿರ್ಮಾಣ ನಗರದ ಆದ್ಯತೆಯಾಗಲಿ
Team Udayavani, Oct 28, 2018, 2:36 PM IST
ನಗರೀಕರಣ ದೇಶದ ಅಭಿವೃದ್ಧಿಯ ಮಾನ ದಂಡವೆಂದರೂ ತಪ್ಪಲ್ಲ. ಜಗತ್ತಿನಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರವಾಗಿ ರುವ ನಮ್ಮ ದೇಶ ನಗರೀಕರಣದಿಂದಾಗಿ ಇಂದು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಉದ್ಯೋಗ ಹಾಗೂ ಬದುಕಿಗೆ ಹೆಚ್ಚು ಜನ ನಗರವನ್ನೇ ಆಶ್ರಯಿಸುತ್ತಿರುವುದರಿಂದ ವಸತಿ ಸಮಸ್ಯೆ ಬಹು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಹೀಗಾಗಿ ಸ್ಲಮ್ ಗಳು ಹುಟ್ಟಿಕೊಳ್ಳುತ್ತಿವೆ.
ಸ್ಲಮ್‌ಗಳಿಲ್ಲದ ಯಾವುದೇ ದೇಶದ ಪ್ರಮುಖ ಮಹಾನಗರಗಳಿಲ್ಲ. ನಮ್ಮ ದೇಶದ ಬಹುತೇಕ ಮಹಾನಗರಗಳಲ್ಲಿನಿರ್ವಸತಿಕರಿಗೆ ಸ್ಲಮ್‌ಗಳೇ ಆಶ್ರಯ ತಾಣಗಳಾಗಿವೆ. ಆದರೆ ಇಲ್ಲಿನ ಸ್ಥಿತಿಗತಿ ಚಿಂತಾಜನಕವಾಗಿದೆ. ಅಸಮರ್ಪಕ ಚರಂಡಿ, ಅವೈಜ್ಞಾನಿಕ ವಸತಿ, ಮೂಲ ಸೌಲಭ್ಯ ಕೊರತೆ ಹಾಗೂ ನೈರ್ಮಲ್ಯದ ಕೊರತೆಯಿಂದಾಗಿ ಸಾಂಕ್ರಾಮಿಕ ರೋಗಗಳ ಉತ್ಪತ್ತಿ ತಾಣಗಳಾಗಿ ಬೆಳೆಯುತ್ತಿವೆ.
ಆಡಳಿತ ವ್ಯವಸ್ಥೆಯಲ್ಲಿ ಸ್ಲಮ್‌ಗಳ ನಿರ್ವಹಣೆ ಹಾಗೂ ಅಭಿವೃದ್ಧಿಗಾಗಿ ಪ್ರತ್ಯೇಕವಾದ ಕ್ರಮ ಕೈಗೊಂಡರೆ ಸ್ಮಾರ್ಟ್ ಸ್ಲಮ್ ರೂಪಿಸಲು ಸಾಧ್ಯವಿದೆ ಎಂಬುದನ್ನು ಈಗಾಗಲೇ ಜಗತ್ತಿನ ಕೆಲವೊಂದು ರಾಷ್ಟ್ರಗಳನ್ನು ಮಾಡಿ ತೋರಿಸಿವೆ. ಸ್ಲಮ್‌ನ ಅಭಿವೃದ್ಧಿ ಪ್ರಮುಖ ಮಾನದಂಡವಾಗಿಟ್ಟುಕೊಂಡು ಸ್ಮಾರ್ಟ್ ಸ್ಲಮ್ ಯೋಜನೆ ರೂಪಿಸಿದರೆ ನಮ್ಮ ನಗರದಲ್ಲೊಂದು ಸ್ಮಾರ್ಟ್ ಸ್ಲಮ್ ಅನ್ನು ರೂಪಿಸಬಹುದು.
ಮಾದರಿ ಸ್ಮಾರ್ಟ್ ಸ್ಲಮ್
ಸ್ಲಮ್‌ಗಳಲ್ಲಿ ಮೂಲ ಸೌಲಭ್ಯದ ಜತೆಗೆ ಆಧುನಿಕ ಹಾಗೂ ತಂತ್ರಜ್ಞಾನದ ಮೂಲಕ ಅಭಿವೃದ್ಧಿಗೊಳಿಸಿರುವ ಸ್ಲಮ್‌ಗಳನ್ನು ಸ್ಮಾರ್ಟ್ ಸ್ಲಮ್ ಎನ್ನಲಾ ಗು ತ್ತದೆ. ಜಪಾನ್, ಸೌತ್ ಅಫ್ರಿಕಾ, ಬ್ರೆಜಿಲ್, ಕೀನ್ಯಾ ಸಹಿತ ಅನೇಕ ದೇಶಗಳೂ ಕೂಡ ಸ್ಮಾರ್ಟ್ ಸ್ಲಮ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿವೆ.
ಹೇಗಿರುತ್ತವೆ?
ಸ್ಲಮ್‌ಗಳೆಂದರೆ ಹರಿಯುವ ಕೊಚ್ಚೆ ನೀರು, ಅಸಮರ್ಪಕ ಚರಂಡಿ ವ್ಯವಸ್ಥೆ, ವಸತಿ ಸಮಸ್ಯೆ, ಸ್ವತ್ಛತೆ ಇಲ್ಲದೇ ಇರುವುದು ಹೀಗೆ ಹತ್ತು ಹಲವು ಜೀವ ಹಿಂಡುವ ಸಮಸ್ಯೆಗಳೇ ಕಣ್ಣ ಮುಂದೆ ಬರುತ್ತವೆ. ಆದರೆ ಸ್ಮಾರ್ಟ್ ಸ್ಲಮ್ ಗಳು ಇದಕ್ಕೆ ತದ್ವಿರುದ್ಧ. ಸ್ಮಾರ್ಟ್ ಸ್ಲಮ್ ಗೆ ಮಾದರಿ ಬ್ರೆಜಿಲ್‌ನ ಸ್ಲಮ್. ಇಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ವಸತಿ ಸಮಸ್ಯೆಯನ್ನು ನಿವಾರಿಸಿ, ಜನಜೀವನಮಟ್ಟವನ್ನು ಸುಧಾರಿಸಲು ಕ್ರಮಕೈಗೊಳ್ಳಲಾಗಿದೆ. ಇಲ್ಲಿ ವಿದ್ಯುತ್ ವ್ಯವಸ್ಥೆಗಾಗಿ ಸೋಲಾರ್ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಫುಟ್‌ಬಾಲ್ ಕ್ರೀಡಾಂಗಣವನ್ನು ನಿರ್ಮಿಸಲಾಗಿದ್ದು, ಈ ಕ್ರೀಡಾಂಗಣಕ್ಕೆ ರಾತ್ರಿಯಿಡೀ ಸೋಲಾರ್ ಬೆಳಕು ನೀಡಲಾಗುತ್ತದೆ. ಅಲ್ಲದೇ ಬಹುತೇಕ ಸ್ಲಮ್‌ಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ರೀಸೈಕ್ಲಿಂಗ್ (ಮರುಪೂರಣ) ಮಾಡಲಾಗುತ್ತದೆ. ಆಧುನಿಕ ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಲಾಗಿದ್ದು, ಕುಡಿಯಲು ಶುದ್ಧನೀರನ್ನು ಒದಗಿಸಲಾಗುತ್ತದೆ.
ಇನ್ನು ಸೌತ್ ಆಫ್ರಿಕಾದ ಸ್ಲಮ್‌ಗಳಲ್ಲಿ ವಿವಿಧ ಸೌಲಭ್ಯಗಳೊಂದಿಗೆ ವಾಸಿಸುವ ಜನರಿಗೆ ವಿಮೆ ಸೌಲಭ್ಯವನ್ನು ಸ್ಥಳೀಯಾಡಳಿತ ಮಾಡಿಕೊಟ್ಟು, ಅವರ ಆರೋಗ್ಯವನ್ನು ಕಾಪಾಡುವ ಹೊಣೆ ಹೊತ್ತಿದೆ. ಹೀಗಾಗಿ ಸ್ಮಾರ್ಟ್ ಸ್ಲಮ್ ನಮ್ಮ ದೇಶದ, ರಾಜ್ಯದ, ನಗರದ ಪ್ರಮುಖ ಆದ್ಯತೆಯಾಗಬೇಕಿದೆ. ಅದರಲ್ಲೂ ಸ್ಮಾರ್ಟ್ ಸಿಟಿಗಳ ಪಟ್ಟಿಯಲ್ಲಿರುವ ಮಂಗಳೂರು ಮಹಾನಗರಕ್ಕಂತೂ ಆವಶ್ಯಕವಾಗಿದೆ.
ಶಿವ ಸ್ಥಾವರಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Video: ಮದುವೆ ಸಂಭ್ರಮದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು
MGM: ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು; ಅಮೃತ ಮಹೋತ್ಸವ
SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್ ಬ್ಯಾಟರ್
Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ
Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.