ಮಂಗಳೂರಿಗೂ ಬರಲಿ ಪರಿಸರ ಸ್ನೇಹಿ ರೈಲು
Team Udayavani, Sep 23, 2018, 12:51 PM IST
ತೀವ್ರಗತಿಯಲ್ಲಿ ಬೆಳೆಯುತ್ತಿರುವ ದೇಶದ ಜನಸಂಖ್ಯೆ ಹಾಗೂ ನಗರೀಕರಣದ ಪ್ರಭಾವದಿಂದಾಗಿ ಸಾರಿಗೆ ಸಂಚಾರ ವ್ಯವಸ್ಥೆಗೆ ಸರಕಾರ ಹಲವಾರು ಅತ್ಯಾಧುನಿಕ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ. ಇದ ರಿಂದಾಗಿ ಭೂ ಸಾರಿಗೆಗೆ ಹೆಚ್ಚು ಪ್ರಾಧಾನ್ಯ ದೊರೆಯುತ್ತಿದೆ. ಅದ್ದರಿಂದ ಲೇ ರೈಲು, ಬಸ್‌ನಂಥ ಸಾರ್ವಜನಿಕ ವಾಹನಗಳಿಗೆ ಹೆಚ್ಚಿನ ಪ್ರೋತ್ಸಾಹವೂ ಸಿಗುತ್ತಿದೆ.
ರೈಲು ಸಂಚಾರವೂ ದೇಶದ ಅತಿದೊಡ್ಡ ಸಂಚಾರ ವ್ಯವಸ್ಥೆಯಲ್ಲಿ ಒಂದಾಗಿದೆ. ಸುಮಾರು 1.21 ಲಕ್ಷ ಕಿ.ಮೀ. ರೈಲು ಸಂಚಾರ ಸಂಪರ್ಕ ಹೊಂದಿರುವ ನಮ್ಮ ದೇಶ ಪ್ರಪಂಚದ ನಾಲ್ಕನೇ ಅತಿದೊಡ್ಡ ರಾಷ್ಟ್ರವಾಗಿದೆ. ದೇಶದ ಮೂಲೆ ಮೂಲೆಗೆ ಇಂದು ಅತಿ ಕಡಿಮೆ ವೆಚ್ಚದಲ್ಲಿ ತಲುಪಲು ಸಾಧ್ಯವಿರುವುದಿಂದ, ಸರಕು- ಸಾಗಾಟ ಹಾಗೂ ಜನ ಸಂಚಾರಕ್ಕೆಂದು ರೈಲು ಸಾರಿಗೆಯೇ ಹೆಚ್ಚು ಬಳಕೆಯಾಗುತ್ತಿದೆ.
ನಮ್ಮಲ್ಲಿರುವ ರೈಲು ಸಂಚಾರ ಇಂದಿಗೂ ಹಳೆ ಕಾಲದಲ್ಲಿದೆ ಎಂಬ ಆರೋಪದ ಮಧ್ಯೆಯೇ ಕೆಲವೊಂದು ನಗರಗಳಲ್ಲಿ ಮೆಟ್ರೋ ರೈಲು ಸದ್ದು ಮಾಡತೊಡಗಿದೆ. ಕೆಲವು ನಗರಗಳಲ್ಲಿ ಅತ್ಯಾಧುನಿಕ ರೈಲು ಸಂಪರ್ಕವನ್ನು ಕಲ್ಪಿಸಿತಾದರೂ ಹೆಚ್ಚಿನದಾಗಿ ಇನ್ನೂ ಹಳೆ ಕಾಲದ ಎಂಜಿನ್ ಯುಕ್ತ ರೈಲು ಬೋಗಿಗಳನ್ನೇ ಬಳಸಲಾಗುತ್ತಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಯಾಗಿದ್ದರೂ ರೈಲುಗಳಲ್ಲಿ ಇಂಧನಗಳ ಬಳಕೆಯಾಗುತ್ತಿರುವುದರಿಂದ ಪರಿಸರ ಮಾಲಿನ್ಯವೂ ಹೆಚ್ಚಾಗಿದೆ.
ಪರಿಸರ ಸ್ನೇಹಿ ಅನೇಕ ಕಾರ್ಯಗಳು ಜಾರಿಯಾಗಿದ್ದರೂ ರೈಲುಗಳಲ್ಲಿ ಇದರ ಕಲ್ಪನೆ ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ. ಭಾರತದ ರೈಲುಗಳನ್ನು ಕೂಡ ಪರಿಸರ ಸ್ನೇಹಿಯಾಗಿ ಬಳಕೆ ಮಾಡಬಹುದು ಎಂಬ ಅರಿವು ನಮ್ಮಲ್ಲಿ ಮೂಡಬೇಕಾದ ಅನಿವಾರ್ಯತೆ ಇದೆ.
ಪರಿಸರ ಸ್ನೇಹಿ ರೈಲು
ಬೆಳೆಯುತ್ತಿರುವ ಜರ್ಮನ್ ದೇಶವೂ ಹೊಸ ಪ್ರಯೋಗದ ಮೂಲಕ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದೆ. ಅಂತೆಯೇ ಇತ್ತೀಚೆಗೆ ಜರ್ಮನ್ ಜಾಗತಿಕ ತಾಪಮಾನ, ಪರಿಸರ ಮಾಲಿನ್ಯ ತಗ್ಗಿಸಬೇಕು ಎಂಬ ಸದುದ್ದೇಶದಿಂದ ಜಲಜನಕ ಆಧಾರಿತ ರೈಲಿನ ಓಡಾಡವನ್ನು ಆರಂಭಿಸಿತ್ತು. ಫ್ರಾನ್ಸ್‌ನ ಅಲ್‌ಸ್ಟಾಮ್ ಎಂಬ ಕಂಪೆನಿಯೂ ಈ ಜಲಜನಕ ರೈಲಿನ ನಿರ್ಮಾಣ ಮಾಡಿದೆ. ಈ ರೈಲು ಜಲಜನಕ ಅಣುಗಳ ರಾಸಾಯನಿಕ ಕ್ರಿಯೆಯಿಂದ ಉತ್ಪತ್ತಿಯಾಗುವ ವಿದ್ಯುತ್ಛಕ್ತಿಯಿಂದಾಗಿ ಓಡಾಡುತ್ತದೆ.
ಹೆಚ್ಚುವರಿ ವಿದ್ಯುತ್ತನ್ನು ರೈಲಿನಲ್ಲಿರುವ ಲೀಥಿಯಂ ಆಯಾನ್ ಬ್ಯಾಟರಿಗಳಿಂದ ರೀಚಾರ್ಚ್ ಮಾಡಬಹುದಾಗಿದ್ದು, ಇದು ಒಂದು ಬಾರಿ ಜಲಜನಕ ಪೂರೈಕೆಯಿಂದ ಸುಮಾರು 1,000 ಕಿ.ಮೀ. ದೂರದವರೆಗೆ ಚಲಿಸುತ್ತದೆ. ಇದರ ಬಾಳಿಕೆ ಡಿಸೇಲ್ ರೈಲಿನ ಬಾಳಿಕೆಗೆ ಸಮಾನ ಎಂದು ಕಂಪೆನಿ ತಿಳಿಸಿದೆ. ಈ ರೈಲಿನ ಒಟ್ಟು ವೆಚ್ಚ 50 ಕೋಟಿ ರೂ. ಮಾತ್ರ. ಅತಿದೊಡ್ಡ ರೈಲು ಸಾರಿಗೆ ಸಂಪರ್ಕ ಹೊಂದಿರುವ ಭಾರತ ದೇಶವೂ ಕೂಡ ಜರ್ಮನ್ ಮಾದರಿಯ ಪರಿಸರ ಸ್ನೇಹಿ ರೈಲುಗಳನ್ನು ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಇದೆ.
ದುಬಾರಿ ವೆಚ್ಚ ವ್ಯಯಿಸಿ, ಇಂಧನ ಉರಿಸಿ ಸಂಚಾರಿಸುವ ರೈಲಿಗಿಂತ, ಪರಿಸರ ಸ್ನೇಹಿ ರೈಲಿನ ಆವಶ್ಯಕತೆ ಇಂದು ನಮಗೂ ಹೆಚ್ಚಾಗಿದೆ. ಇಂಥ ರೈಲುಗಳು ನಮ್ಮಲ್ಲೂ ಬಂದರೆ ಸಾರ್ವಜನಿಕರಿಗೂ ಹೆಚ್ಚಿನ ಪ್ರಯೋಜನವಾಗಲಿದೆ ಜತೆಗೆ ಸಂಪರ್ಕ ಜಾಲ ಇನ್ನೂ ವಿಸ್ತರಿಸಲು ಸಾಧ್ಯವಾಗಲಿದೆ.
ಶಿವ ಸ್ಥಾವರಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.