ಮಂಗಳೂರಿಗೆ ಬರಲಿ ಎಲೆವೇಟೆಡ್ ಹೈವೆ
Team Udayavani, Jan 5, 2020, 5:33 AM IST
ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ನಗರಗಳಲ್ಲಿ ಸಂಚಾರ ದಟ್ಟಣೆಗೆ ನೇರವಾಗಿ ಕಾರಣವಾಗುತ್ತಿದೆ. ಹೌದು ಇತ್ತೀಚೆಗೆ ಜನರ ಆದಾಯದ ಪ್ರಮಾಣ ಹೆಚ್ಚಾದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಿಟ್ಟು ತಮ್ಮದೇ ಸ್ವಂತ ಕಾರು ಅಥವಾ ಬೈಕಗಳ ಮೂಲಕ ಬೀದಿಗಿಳಿಯುತ್ತಿದ್ದಾರೆ. ಇದರಿಂದ ಹಳ್ಳಿ ಅಥವಾ ಸಣ್ಣ ಪ್ರಮಾಣದ ನಗರ ಪ್ರದೇಶಗಳಲ್ಲಿ ಅಷ್ಟೇನೂ ತೊಂದರೆ ಆಗದಿದ್ದರೂ ಮೆಟ್ರೋ ನಗರಗಳಾಗಿ ಬೆಳೆಯುತ್ತಿರುವ ಮತ್ತು ಈಗಾಗಲೇ ಬೆಳೆದಿರುವ ನಗರಗಳಲ್ಲಿ ಬ್ರಹತ್ ಸಮಸ್ಯೆ ಹುಟ್ಟುಕೊಳ್ಳುತ್ತಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್, ದೆಹಲಿ, ಮುಂಬಯಿ, ಕೋಲ್ಕತಾ ಇನ್ನಿತರ ಮಹಾನಗರಗಳಲ್ಲಿ ಸಮಸ್ಯೆ ಉಂಟಾಗುತ್ತಿರುವ ಸಂಚಾರ ದಟ್ಟಣೆಯಿಂದ ಇದರಿಂದ ಅಲ್ಲಿನ ಜನರು ಬೇಸತ್ತಿದ್ದಾರೆ. ಮಹಾನಗರಗಳಲ್ಲಿ ವಾಸ ಮಾಡುತ್ತಿರುವ ವ್ಯಕ್ತಿ ದಿನದ 24ಗಂಟೆಗಳಲ್ಲಿ ಏನಿಲ್ಲವೆಂದರೂ ಕನಿಷ್ಠ 2ರಿಂದ 3 ಗಂಟೆಗಳನ್ನು ಸಂಚಾರದಲ್ಲೇ ಕಳೆಯುತ್ತಿದ್ದಾನೆ. ಅಂತಹ ನಗರಗಳ ಸಾಲಿನಲ್ಲಿ ನಮ್ಮ ಮಂಗಳೂರು ಕೂಡ ಸೇರಿದೆ ಎನ್ನುವುದನ್ನು ಮರೆಯುವಂತಿಲ್ಲ. ನಗರಗಳಲ್ಲಿ ಸಂಚಾರ ದಟ್ಟನೆ ಕಡಿಮೆ ಮಾಡುವಲ್ಲಿ ಫ್ಲೈ ಓವರ್‌ಗಳು, ಎಲೆವೇಟೆಡ್ ಹೈವೆಗಳು ಬಹು ಮುಖ್ಯವಾದ ಪಾತ್ರ ವಹಿಸುತ್ತಿವೆ. ಮಂಗಳೂರಲ್ಲಿ ಸಂಜೆ ಮತ್ತು ಬೆಳಗ್ಗೆ 8ಗಂಟೆಯಿಂದ 10ಗಂಟೆಯವರೆಗೂ ನಂತೂರು ಸರ್ಕಲ್, ಕಂಕನಾಡಿಯ ಕರಾವಳಿ ಸರ್ಕಲ್, ಪಂಪ್‌ವೆಲ್ ಮುಂತಾದ ಪ್ರಮುಖ ವೃತ್ತಗಳಲ್ಲಿ ವಿಪರೀತ ಸಂಚಾರ ದಟ್ಟಣೆೆಯಿಂದ ಈಗಲೇ ನಗರದ ಜನ ಬೇಸತ್ತಿದ್ದಾರೆ. ಅದರಲ್ಲೆ ಪಂಪ್‌ವೆಲ್ ಫ್ಲೈಓವರ್ ವಿಳಂಬದಿಂದಾಗಿ ಕಂಕನಾಡಿ ಪರಿಸರದಲ್ಲಿ ಸಂಚಾರ ದಟ್ಟನೆ ಇನ್ನಷ್ಟು ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಇದಕ್ಕೆ ಸುಲಭ ಪರಿಹಾರವೆಂಬಂತೆ ಬೆಂಗಳೂರು, ವಿದೇಶದ ಮಹಾನಗರಗಳಲ್ಲಿರುವಂತಹ ಎಲೆವೇಟೆಡ್ ಹೈವೆ ನಿರ್ಮಿಸಬಹುದು.
ಮಂಗಳೂರು ನಗರದಲ್ಲಿ ವಿಸ್ತಾರವಾದ ರಸ್ತೆಗಳ ಸಂಖ್ಯೆ ಕಡಿಮೆ ಇದೆ ಎಂದರೆ ತಪ್ಪಾಗಲಿಕ್ಕಿಲ್ಲ. ಚೀನಾ, ಜಪಾನ್ ಹಾಗೂ ನಮ್ಮ ಬೆಂಗಳೂರಿನಲ್ಲೂ ಕೆಲವಡೆ ಇರುವಂಥ ಎಲೆವೇಟೆಡ್ ಹೈವೆ ನಿರ್ಮಿಸುವುದರಿಂದ ಮೇಲೆ ಮತ್ತು ಕೆಳಗೂ ವಾಹನಗಳು ಸಂಚರಿಸಬಹುದು. ಅಲ್ಲದೇ ಇಗಿರುವ ಕಟ್ಟಡಗಳಿಗೆ ಹಾನಿ ಮಾಡದಂತೆ ಇರುವ ಜಾಗವನ್ನೇ ಸಮರ್ಪಕವಾಗಿ ಬಳಸಿಕೊಂಡಂತೆಯೂ ಆಗುತ್ತದೆ.
ಎಲೆವೇಟೆಡ್ ಹೈವೆ ನಿರ್ಮಾಣ
ಎಲೆವೇಟೆಡ್ ಹೈವೆ ನಿರ್ಮಾಣದಿಂದ ನಗರಗಳಲ್ಲಿ ಸಂಚಾರ ದಟ್ಟಣೆಯನ್ನು ಸುಲಭವಾಗಿ ನಿಯಂತ್ರಣ ಮಾಡಬಹುದು. ನಗರದ ಜನತೆಯ ಪ್ರಯಾಣದ ಸಮಯವನ್ನೂ ಕಡಿಮೆ ಮಾಡಬಹುದು. ಸಂಚಾರ ದಟ್ಟಣೆಯಿಂದ ಉಂಟಾಗುವ ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಇತಆರೋಗ್ಯ ಸಮಸ್ಯೆಗಳನ್ನು ತಡೆಯಬಹುದಾಗಿದೆ. ಸಂಚಾರಿ ದೀಪಗಳ ಸರಿಯಾದ ನಿರ್ವಹಣೆಯ ಕೊರತೆಯಿಂದಾಗಿ ಆಗುತ್ತಿರುವಂತ ನೂರಾರು ಅಪಘಾತ, ಸಾವಿರಾರು ಸಾವುನೋವುಗಳನ್ನು ತಡೆಯಬಹುದು. ಇದರಿಂದ ಶೇ. 35 ರಷ್ಟು ಸಂಚಾರ ದಟ್ಟನೆ, ಶೇ 32ರಷ್ಟು ಮಾಲಿನ್ಯವನ್ನು ತಡೆಯುಬಹುದು.
– ಶಿವಾನಂದ ಎಚ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.