ಹಾರುವ ಕಾರು ! ಟ್ರಾಫಿಕ್‌,ಪಾರ್ಕಿಂಗ್‌ ಸಮಸ್ಯೆ ಪರಿಹಾರಕ್ಕೆ ಹೊಸ ದಾರಿ


Team Udayavani, Dec 30, 2018, 7:32 AM IST

30-december-10.jpg

ರಸ್ತೆ ಬದಿ ನಡೆದುಕೊಂಡು ಹೋಗುವಾಗ ಆಕಾಶದಿಂದ ಗೆಳೆಯರಲ್ಲಿ ಯಾರಾದರೂ ಹಾಯ್‌, ಹಲೋ ಎಂದರೆ ಆತಂಕ ಪಡುವ ಅಗತ್ಯವಿಲ್ಲ. ಇಂಥ ಕಾಲ ದೂರವಿಲ್ಲ. ಯಾಕೆಂದರೆ ಈಗಾಗಲೇ ಜರ್ಮನಿಯಲ್ಲಿ ಇಂಥ ಒಂದು ಸನ್ನಿವೇಶ ಸೃಷ್ಟಿಯಾಗಿದೆ. ಯಾಕೆಂದರೆ ಇಲ್ಲಿ ರಸ್ತೆಯಲ್ಲಿ ಓಡಾಡಬೇಕಿದ್ದ ಕಾರುಗಳು ನಮ್ಮ ತಲೆ ಮೇಲೆ ಹಾರಾಡಿ ಹೋಗುತ್ತಿವೆ.

ನಮ್ಮ ಮಂಗಳೂರು ಸೇರಿದಂತೆ ದೇಶದ ಹಲವು ಪ್ರಮುಖ ನಗರಗಳಲ್ಲಿ ಟ್ರಾಫಿಕ್‌ ಸಮಸ್ಯೆ ಎಂಬುದು ಗಂಭೀರ ಸ್ವರೂಪವನ್ನೇ ತಾಳಿದೆ. ಇದಕ್ಕೆ ಪರ್ಯಾಯ ದಾರಿಗಳನ್ನು ಹುಡುಕಿ ಬಹುತೇಕ ಎಲ್ಲರೂ ಸೋತಿದ್ದಾರೆ. ಫ್ಲೈ ಓವರ್‌, ಅಡ್ಡ ರಸ್ತೆ, ರಿಂಗ್‌ ರೋಡ್‌ ಸಹಿತ ಇನ್ನು ಹಲವು ಕ್ರಮಗಳು ಸೀಮಿತವಾಗಿರುತ್ತದೆ. ಆದರೆ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುವುದು. ಹೀಗಾಗಿ ಟ್ರಾಫಿಕ್‌ ಸಮಸ್ಯೆ ಎಂಬುದೂ ಎಂದೂ ಮುಗಿಯದ ಸಮಸ್ಯೆಯಾಗಿ ಕಾಡುವುದು. ಅದಕ್ಕಾಗಿ ನಮ್ಮ ವಾಹನಗಳನ್ನು ಮುಂದೊಂದು ದಿನ ಬದಲಾಯಿಸಬೇಕಾದ ಅನಿವಾರ್ಯತೆಯೂ ಬರಬಹುದು.

ಈ ನಿಟ್ಟಿನಲ್ಲಿ ಬಸ್‌ ವ್ಯವಸ್ಥೆಯ ಬಗ್ಗೆ ಕೇಳಿದ್ದೇವೆ. ಆದರೆ ಈಗ ಕಾರುಗಳ ಸರದಿ. ಜರ್ಮನಿಯಲ್ಲಿ ಹಾರುವ ಎಲೆಕ್ಟ್ರಿಕ್‌ ಕಾರುಗಳನ್ನು ಕಾರ್ಯರೂಪಕ್ಕೆ ತರುವ ಪ್ರಯೋಗಗಳು ನಡೆಯುತ್ತಿದೆ. ಈ ಕಾರುಗಳನ್ನು ಲೆಲಿಯುಮ್‌ ಕಾರು ಎನ್ನಲಾಗುತ್ತದೆ.

ಏನಿದು ಹೊಸ ಕಾರು?
ಟ್ರಾಫಿಕ್‌ ಸಮಸ್ಯೆಗೆ ಕೊಂಚ ಮಟ್ಟಿನ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಲೆಲಿಯುಮ್‌ ಕಾರು ಯಶಸ್ವಿಯಾಗುತ್ತದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು. ಸದ್ಯ ಇದು ಪ್ರಯೋಗಾರ್ಥವಾಗಿ ಚಾಲನೆ ನಡೆಸಲಾಗುತ್ತಿದೆ. ಇದರಲ್ಲಿ ಯಶಸ್ವಿಯಾದರೆ ಮುಂದೊಂದು ದಿನ ಕಾರುಗಳು ನಮ್ಮ ತಲೆ ಮೇಲೆ ಹಾರುವ ದಿನ ದೂರವಿಲ್ಲ.

ಬ್ಯಾಟರಿ ಚಾಲಿತ ಕಾರು ಇದಾಗಿರುವುದರಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ. ಇದರ ನಿಯಂತ್ರಣಕ್ಕೆ ರಿಮೋಟ್‌ ಕಂಟ್ರೋಲ್‌ ವ್ಯವಸ್ಥೆಯಿದೆ. ಈ ಕಾರುಗಳನ್ನು ಟೆರೇಸ್‌ ಮೇಲೂ ಪಾರ್ಕ್‌ ಮಾಡಬಹುದು. ಹೀಗಾಗಿ ನಗರ ಪ್ರದೇಶಗಳಲ್ಲಿರುವ ಟ್ರಾಫಿಕ್‌ ಸಮಸ್ಯೆ ಮಾತ್ರವಲ್ಲ ಪಾರ್ಕಿಂಗ್‌ ಸಮಸ್ಯೆಗೂ ಪರಿಹಾರ ಕೊಟ್ಟಂತಾಗುತ್ತದೆ. ಬೈಕ್‌ ಚಲಿಸುವಾಗ ಉಂಟಾಗುವಷ್ಟು ಸದ್ದು ಇದರಿಂದ ಹೊರಬರುತ್ತದೆ.

36 ಸಣ್ಣ ಪ್ರೊಪೆಲ್ಲರ್ಸ್‌ ಗಳನ್ನು ಹೊಂದಿರುವ ಈ ಕಾರಿನಲ್ಲಿ 186 ಮೈಲಿಗಳನ್ನು ಅಂದರೆ ಸರಿ ಸುಮಾರು ಒಂದು ಗಂಟೆ ತಗಲುವ ದೂರವನ್ನು ಐದು ನಿಮಿಷಗಳಲ್ಲಿ ತಲುಪಬಹುದು. ಇದರ ಬ್ಯಾಟರಿ 150 ಕೆ.ಜಿ. ಭಾರವಿದೆ. ಆಟೋ ಪೈಲೆಟ್‌ ವ್ಯವಸ್ಥೆ ಇರುವುದರಿಂದ ಸದ್ಯ ಏಕಕಾಲದಲ್ಲಿ ಇದರಲ್ಲಿ ಇಬ್ಬರು ಪ್ರಯಾಣಿಸಬಹುದಾಗಿದೆ. ಇದರ ಗರಿಷ್ಠ ವೇಗ ಪ್ರಮಾಣ 300 ಕಿ.ಮೀ. ಆಗಿದೆ. ಇದರ ಒಟ್ಟು ಭಾರ 220 ಕೆ.ಜಿ. ಆಗಿದ್ದು, 640 ಕೆ.ಜಿ. ಭಾರವನ್ನು ಹೊರುವ ಸಾಮರ್ಥ್ಯ ವನ್ನು ಹೊಂದಿದೆ.

ಇಂಥ ಕಾರುಗಳು ನಮ್ಮ ದೇಶದಲ್ಲೂ ಪರಿಚಯವಾದರೆ ಇಲ್ಲಿನ ಬಹು ಮುಖ್ಯ ಸಮಸ್ಯೆಯಾಗಿರುವ ಪಾರ್ಕಿಂಗ್‌, ಟ್ರಾಫಿಕ್‌ ಪರಿಹಾರಕ್ಕೆ ಹೊಸ ದಾರಿಯೊಂದು ತೆರೆದುಕೊಂಡಂತಾಗುತ್ತದೆ.

  ವಿಶ್ವಾಸ್‌ ಅಡ್ಯಾರ್‌

ಟಾಪ್ ನ್ಯೂಸ್

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

yadiyurappa

40 percent commission ಸುಳ್ಳು ಸಾಬೀತು : ಕಾಂಗ್ರೆಸಿಗರಿಗೆ ತಾಕೀತು ಮಾಡಿದ ಯಡಿಯೂರಪ್ಪ

ಮುಂದಿನ ವಿಮಾನದಲ್ಲೇ ಶಮಿ ಆಸ್ಟ್ರೇಲಿಯಕ್ಕೆ ತೆರಳಲಿ: ಗಂಗೂಲಿ

Sourav Ganguly: ಮುಂದಿನ ವಿಮಾನದಲ್ಲೇ ಶಮಿ ಆಸ್ಟ್ರೇಲಿಯಕ್ಕೆ ತೆರಳಲಿ

Sahakara-saptha

Cooperation: ನಬಾರ್ಡ್‌ ನೆರವು ಕಡಿತದಿಂದ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

yadiyurappa

40 percent commission ಸುಳ್ಳು ಸಾಬೀತು : ಕಾಂಗ್ರೆಸಿಗರಿಗೆ ತಾಕೀತು ಮಾಡಿದ ಯಡಿಯೂರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.