ಬಸ್ ಮೆಟ್ಟಿಲೇರುವುದೇ ಪ್ರಯಾಸ!
Team Udayavani, Dec 15, 2019, 4:49 AM IST
ಸಿಟಿ, ಸರ್ವಿಸ್ ಸೇರಿದಂತೆ ಖಾಸಗಿ ಬಸ್‌ಗಳ ಮೆಟ್ಟಿಲುಗಳು ಎತ್ತರದಲ್ಲಿರುವುದರಿಂದ ಅದನ್ನು ಹತ್ತುವುದೇ ಒಂದು ಸವಾಲು. ಪ್ರಯಾಣಿಕರು ಪ್ರಯಾಸಪಟ್ಟು ಬಸ್ ಹತ್ತಬೇಕಾದ ಸ್ಥಿತಿ ಇದೆ. ಹಲವು ವರ್ಷಗಳಿಂದ ಹಿರಿಯ ನಾಗರಿಕರು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಅನೇಕ ಬಾರಿ ಈ ಸಮಸ್ಯೆ ಬಗೆಹರಿಸಲು ಒತ್ತಾಯಿಸುತ್ತಾ ಬಂದಿದ್ದರೂ ಪ್ರಯೋಜನವಾಗಿಲ್ಲ.
ಬಸ್‌ಗಳು ಸದಾ ಸಮಯದ ಹಿಂದೆ ಓಡುತ್ತಿರುತ್ತವೆ. ಆ ಬಸ್‌ಗಳನ್ನು ಹತ್ತುವಾಗ ಅನೇಕ ರೀತಿಯ ಅಪಾಯ ಎದುರಾಗುತ್ತದೆ. ಎತ್ತರದ ಮೆಟ್ಟಿಲುಗಳನ್ನು ಏರಲಾಗದೆ ಆಯತಪ್ಪಿ ಕೆಳಕ್ಕೆ ಬಿದ್ದ ಘಟನೆಗಳು ಹಲವೆಡೆ ನಡೆದಿವೆ. ಇತ್ತೀಚಿಗಿನ ವರ್ಷಗಳಲ್ಲಿ ಮಂಗಳೂರು ನಗರದಲ್ಲಿ ಓಡಾಡುತ್ತಿರುವ ಕೆಲವು ವೋಲ್ವೋ ಬಸ್‌ಗಳು, ಕೆಎಸ್‌ಆರ್‌ಟಿಸಿ ನರ್ಮ್ ಬಸ್‌ಗಳು ಹಾಗೂ ಕೆಲವೇ ಸಿಟಿ ಬಸ್‌ಗಳು ಮಾತ್ರ ತಗ್ಗು ಮೆಟ್ಟಿಲನ್ನು(ಲೋ ಫ್ಲೋರ್) ಹೊಂದಿವೆ. ಹಿರಿಯ ನಾಗಕರಿಕರು, ಮಕ್ಕಳು, ಮಹಿಳೆಯರ ಹಿತದೃಷ್ಟಿಯಿಂದ ಲೋ ಫ್ಲೋರ್ ಬಸ್‌ಗಳಿಗೆ ಮಾತ್ರ ಅವಕಾಶ ನೀಡಬೇಕು. ಆರ್‌ಟಿಒ ಲೋ ಫ್ಲೋರ್ ಕಡ್ಡಾಯ ಎಂದು ಹೇಳಿದರೂ ಹಲವಾರು ಕಾರಣಗಳನ್ನು ನೀಡಿ ಕೆಲವು ಬಸ್‌ನವರು ಎತ್ತರದ ಮೆಟ್ಟಿಲುಗಳ ಬಸ್‌ಗಳನ್ನೇ ಓಡಿಸುತ್ತಿದ್ದಾರೆ. ಮೆಟ್ಟಿಲು ಹತ್ತಲು ಸಾಧ್ಯವಾಗದವರು ಲೋ ಫ್ಲೋರ್ ಬಸ್‌ಗಳು ಬರುವವರೆಗೇ ಕಾದು ಅನಂತರ ಅದರಲ್ಲಿಯೇ ಪ್ರಯಾಣಿಸುವ ಅನಿವಾರ್ಯತೆ ಹಲವು ಸಂದರ್ಭಗಳಲ್ಲಿ ಉಂಟಾಗುತ್ತದೆ. ಇನ್ನು ಮಹಿಳೆಯರು ಎದುರಿನ ಬಾಗಿಲಿನಲ್ಲಿ ಮತ್ತು ಪುರುಷರು ಹಿಂದಿನ ಬಾಗಿಲಿನಲ್ಲಿಯೇ ಬಸ್ ಹತ್ತಿ ಇಳಿಯಬೇಕು ಎಂಬ ನಿಯಮವೂ ಸರಿಯಾಗಿ ಪಾಲನೆಯಾಗುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.