ಚರಂಡಿಗಳ ನೈರ್ಮಲ್ಯಕ್ಕೆ ಜಪಾನ್‌ ಮಾದರಿ 


Team Udayavani, Oct 7, 2018, 12:51 PM IST

7-october-11.gif

ನಗರದ ಬಹುತೇಕ ಎಲ್ಲ ರಸ್ತೆಗಳ ಪಕ್ಕದಲ್ಲಿಯೇ ಚರಂಡಿಗಳನ್ನು ನಿರ್ಮಿಸಲಾಗುತ್ತದೆ. ಮಳೆ, ತ್ಯಾಜ್ಯ ನೀರು ಹರಿಯಲಿಕ್ಕೆಂದೇ ಇರುವ ಇದರಲ್ಲಿ ತ್ಯಾಜ್ಯವನ್ನು ಸರಿಯಾಗಿ ನಿರ್ವಹಣೆ ಮಾಡದೆ ಸುತ್ತಮುತ್ತಲಿನ ಪರಿಸರವಿಡೀ ಗಬ್ಬುನಾಥ ಬೀರುತ್ತಿರುವ, ಫ‌ುಟ್‌ ಪಾತ್‌ ನಲ್ಲಿ ನಡೆಯುವವರು, ವಾಹನ ಸವಾರರು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಹಲವೆಡೆ ನಿರ್ಮಾಣವಾಗಿರುವುದನ್ನು ನಾವು ಕಣ್ಣಾರೇ ನೋಡಿರುತ್ತೇವೆ. ಸ್ವಲ್ಪ ಮಳೆ ಬಂದರೂ ಸಾಕು ಚರಂಡಿಯ ನೀರು ರಸ್ತೆಯ ಲ್ಲೆಲ್ಲ ಹರಡಿ ರಸ್ತೆಯನ್ನೂ ಕೊಳಚೆಯನ್ನಾಗಿ ಮಾಡಿದ್ದನ್ನೂ ನೋಡಿರುತ್ತೇವೆ.

ನಮ್ಮ ದೇಶದ ಪ್ರಮುಖ ಎಲ್ಲ ನಗರಗಳ ಬಹು ದೊಡ್ಡ ಸಮಸ್ಯೆಯೇ ಇದಾಗಿದೆ. ಆದರೆ ಈ ಸಮಸ್ಯೆಗೆ ಪರಿಹಾರವೇ ಇಲ್ಲವೇನೋ ಎಂಬಂತೆ ಆಡಳಿತ ಅಧಿಕಾರಿಗಳು ಕೈಕಟ್ಟಿ ಕುಳಿತಿರುತ್ತಾರೆ. ನಮ್ಮ ದೇಶವನ್ನು ಬಿಟ್ಟು ಕೊಂಚ ಹೊರದೇಶಗಳತ್ತ ಗಮನ ಹರಿಸಿದರೆ ಸುವ್ಯವಸ್ಥಿತ ಚರಂಡಿಯೂ ಪ್ರವಾಸಿಗರನ್ನು ಸೆಳೆಯುವಂತೆ ಮಾಡಿರುವ ಉದಾಹರಣೆಗಳಿವೆ. ರಸ್ತೆಯ ಬದಿಯ ಚರಂಡಿಗಳನ್ನು ನಾವು ಸುವ್ಯವಸ್ಥಿತವಾಗಿ ಬಳಕೆ ಮಾಡಿ, ಅದರತ್ತ ವೂ ಪ್ರವಾಸಿಗರನ್ನೂ ಸೆಳೆಯುವಂತೆ ಮಾಡವ ವಿಭಿನ್ನ ಯೋಜನೆ ಜಾರಿಯಾಗಿದ್ದು ಜಪಾನ್‌ನಲ್ಲಿ. ಬಹುಶಃ ಇದನ್ನು ನಾವು ಪ್ರಯೋಗ ಮಾಡಿ ನೋಡಬಹುದು.

ಏನಿದು?
ಜಪಾನ್‌ ದೇಶ ತನ್ನಲ್ಲಿರುವ ಸಂಪನ್ಮೂಲವನ್ನು ವಿಭಿನ್ನವಾಗಿ ಬಳಸಿಕೊಳ್ಳುತ್ತದೆ ಎಂಬ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಅತ್ಯಾಧುನಿಕ ತಂತ್ರಜ್ಞಾನವಾಗಲಿ, ವಿಜ್ಞಾನವಾಗಲಿ ಅದನ್ನು ಜನೋಪಯೋಗಿಯಾಗಿ ಬಳಸಿಕೊಂಡು ಜಪಾನಿಗರು ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ. ಅದರಂತೆ, ರಸ್ತೆ ಬದಿಯ ಚರಂಡಿಗಳನ್ನು ಸ್ವತ್ಛ ಸುಂದರಗೊಳಿಸಿ ಪ್ರವಾಸಿಗರನ್ನು ಸೆಳೆಯುವಂತೆ ಮಾಡಿರುವುದು ಎಲ್ಲರೂ ಮೆಚ್ಚಲೇಬೇಕಾದ ಸಂಗತಿ.

ಜಪಾನ್‌ ದೇಶದ ಬಹುತೇಕ ರಸ್ತೆ ಬದಿಯ ಚರಂಡಿಗಳನ್ನು ಕೂಡ ಪ್ರವಾಸಿಗರನ್ನು ಸೆಳೆಯುವಂತೆ ಮಾಡಲಾಗಿದೆ. ಅದೇನೆಂದರೆ. ಅಲ್ಲಿನ ಚರಂಡಿಗಳಲ್ಲಿ ಹರಿಯುವ ತ್ಯಾಜ್ಯ ನೀರನ್ನು ಶುದ್ಧೀಕರಣಗೊಳಿಸಲು ಅಲ್ಲಿ ಯಾವುದೇ ತಂತ್ರಜ್ಞಾನವನ್ನು ಬಳಸಿಲ್ಲ. ಬದಲಾಗಿ ಮೀನುಗಳ ಮೂಲಕ ಚರಂಡಿಗಳನ್ನು ನೈರ್ಮಲ್ಯ ಮಾಡಲಾಗುತ್ತಿದೆ. ಜಪಾನ್‌ನ ಹಿಡಾ ಫ‌ುರುಕುವಾ ನಗರದ ದೊಡ್ಡ ಕಾಲುವೆಗಳಲ್ಲಿನ ತ್ಯಾಜ್ಯ ನಿರ್ವಹಣೆಗೆ ಕೋಯಿ ಎಂಬ ಹೆಸರಿನ ಮೀನುಗಳನ್ನು ಹರಿಯಬಿಡಲಾಗುತ್ತದೆ. ಈ ಮೀನುಗಳು ಬಣ್ಣ ಬಣ್ಣದ ಮೀನುಗಳಾಗಿದ್ದು, ಇದು ರಸ್ತೆಯಲ್ಲಿ ನಡೆದು ಹೋಗುವ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಹಾಗಾಗಿ ಅಲ್ಲಿನ ಚರಂಡಿಗಳನ್ನು ನೋಡಿ ಯಾರೂ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇಲ್ಲ. ಬದಲಾಗಿ ಎಲ್ಲರೂ ಇಲ್ಲಿ ನಿಂತು ಮೀನು ಚಲನವಲನ ಕಣ್ತುಂಬಿಕೊಂಡು, ಫೋಟೋ ತೆಗೆದು ತಮ್ಮ ದಾಖಲೆಯಲ್ಲಿಟ್ಟು ಕೊಂಡಿರುತ್ತಾರೆ.

ಮೀನುಗಳೇ ಈ ಕಾಲುವೆಯನ್ನು ಸ್ವಚ್ಛಗೊಳಿಸುತ್ತದೆ ಎಂದರೆ ತಪ್ಪಾಗುತ್ತದೆ. ಇದರಲ್ಲಿ ಆಡಳಿತ ವ್ಯವಸ್ಥೆಯ ಪಾಲೂ ಇದೆ. ಸಮಯಕ್ಕೆ ಸರಿಯಾಗಿ ಚರಂಡಿಗಳನ್ನು ಸ್ವಚ್ಛಗೊಳಿಸಿ, ನೀರನ್ನು ಶುದ್ಧಗೊಳಿಸಲು ಈ ಕೋಯಿ ಮೀನುಗಳನ್ನು ಚರಂಡಿಯಲ್ಲಿ ಹರಿಯ ಬಿಡುತ್ತಾರೆ. ಹೀಗಾಗಿ ಅಲ್ಪ ಪ್ರಮಾಣದಲ್ಲಿ ಉಳಿದ ಕೊಳಕು ತ್ಯಾಜ್ಯವೂ ಈ ಮೀನುಗಳಿಂದ ಸ್ವಚ್ಛವಾಗುತ್ತದೆ. ಬಹುತೇಕ ಜಪಾನ್‌ ದೇಶಕ್ಕೆ ಪ್ರವಾಸಕ್ಕೆ ಹೋದವರೂ ಈ ಯೋಚನೆಯನ್ನು ಕಂಡು ಬೆರೆಗಾಗಿದ್ದಾರೆ.

ಸ್ಮಾರ್ಟ್‌ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರು ನಗರದ ಚರಂಡಿ ವ್ಯವಸ್ಥೆಗಳ ಬಗ್ಗೆ ನಾವು ನೋಡಿದ್ದೇವೆ. ಇಲ್ಲಿ ಇದರ ನೈರ್ಮಲ್ಯ ಕಾಪಾಡುವುದೇ ಸವಾಲಿನ ಕೆಲಸವಾಗಿದೆ. ಹೀಗಿರುವಾಗ ಜಪಾನ್‌ನಲ್ಲಿ ಚರಂಡಿಗಳಲ್ಲಿ ಮೀನುಗಳನ್ನು ಹರಿಬಿಟ್ಟು ನೈರ್ಮಲ್ಯ ಕಾಪಾಡಿ, ಪ್ರವಾಸಿಗರನ್ನು ಸೆಳೆಯುವಂತೆ ಮಾಡುವ ಯೋಜನೆ ನಮ್ಮ ಸ್ಮಾರ್ಟ್‌ ನಗರಿಯ ಯೋಜನೆಯೊಳಗೆ ಸೇರಿ ಕೊಂಡರೆ ನಮ್ಮ ನಗರಗಳ ಚರಂಡಿಗಳಿಗೂ ಸ್ವಚ್ಛವಾಗುವುದು ಮಾತ್ರವಲ್ಲ ಬಣ್ಣ ಬಣ್ಣದ ಮೀನುಗಳಿಂದ ಪ್ರವಾಸಿಗರನ್ನೂ ಸೆಳೆಯಬಹುದಲ್ಲವೇ?

 ಶಿವ ಸ್ಥಾವರಮಠ

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.