ಮಾದರಿ ರಸ್ತೆ ನಿರ್ಮಾಣವಾಗಲಿ
Team Udayavani, Jan 20, 2019, 8:01 AM IST
ರಸ್ತೆಗಳು ಆಕರ್ಷಕವಾಗಿರಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆ ಕೊಡುವುದು ಕಷ್ಟ. ಆದರೆ ಮಂಗಳೂರಿನ ಬಲ್ಲಾಳ್ ಬಾಗ್- ಮಣ್ಣ ಗುಡ್ಡ ರಸ್ತೆಯನ್ನು ಮಾದರಿ ರಸ್ತೆ ಎಂದು ಕರೆಯಬಹುದು. ಇದು ಸಂಪೂರ್ಣ ಕಾಂಕ್ರೀಟ್ ರಸ್ತೆಯಾಗಿದ್ದು, ಒಂದು ಕಡೆ ಸುಮಾರು 10- 15 ಮೀಟರನ್ನು ಹೊರತುಪಡಿಸಿ ರಸ್ತೆಯ ಎರಡೂ ಮಗ್ಗುಲಲ್ಲಿ ಆಕರ್ಷಕವಾದ ಕಾಲುದಾರಿಯನ್ನು ಹೊಂದಿದೆ. ಜತೆಗೆ ರಸ್ತೆಯುದ್ದಕ್ಕೂ ಗಿಡಗಳು ತುಂಬಿಕೊಂಡಿರುವುದರಿಂದ ಸುಂದರವಾಗಿ ಕಾಣುತ್ತದೆ.
ದಶಕದ ಹಿಂದೆ ಉರ್ವಸ್ಟೋರ್- ಲೇಡಿಹಿಲ್, ಲೇಡಿಹಿಲ್- ಪಿ.ವಿ.ಎಸ್., ಬಲ್ಮಠ ರಸ್ತೆ, ಮೈದಾನ ರಸ್ತೆ (ಕ್ಲಾಕ್‌ಟವರ್- ಪೊಲೀಸ್ ಕಮಿಷನರ್ ಕಚೇರಿ ವರೆಗಿನ )ಯ ನೆನಪು ಬರುವಂತಿದೆ. ಈಗಿನ ರೀತಿಯಲ್ಲಿ ರಸ್ತೆಯಂಚಿಗೆ ವಿದ್ಯುತ್ ದೀಪಗಳನ್ನು ಅಳವಡಿಸಿ, ಕಾಲುದಾರಿಯಲ್ಲಿ ವಾಹನಗಳನ್ನು ಓಡಿಸದೆ, ನಿಲ್ಲಿಸದೆ ಪಾದಚಾರಿಗಳಿಗೆ ಬಿಟ್ಟರೆ ತುಂಬಾ ಅನುಕೂಲವಾಗಬಹುದು. ಇದೇ ಮಾದರಿಯಲ್ಲಿ ಮಂಗಳೂರಿನ ಇತರ ಕೆಲವು ರಸ್ತೆಗಳನ್ನು ಅಭಿವೃದ್ಧಿಪಡಿಸಿದರೆ ಉತ್ತಮ.
ಮಣ್ಣಗುಡ್ಡ- ಲಾಲ್‌ಬಾಗ್ ರಸ್ತೆ
ಈ ರಸ್ತೆಯ ಎರಡೂ ಮಗ್ಗುಲಲ್ಲಿ ವಿಶಾಲ ಮರಗಳಿದ್ದು, ಸದಾ ನೆರಳು ಆವರಿಸಿರುತ್ತದೆ. ಆದರೆ ಹೆಚ್ಚಿನ ಮರಗಳಿಗೆ ದೊಡ್ಡ ದೊಡ್ಡ ಕಟ್ಟೆಗಳನ್ನು ಮಾಡಿದ್ದು, ಮರಗಳನ್ನು ಉಳಿಸಿ, ಕಟ್ಟೆಗಳನ್ನು ತೆಗೆದು, ರಸ್ತೆಯನ್ನು ಕಾಂಕ್ರೀಟ್ ರಸ್ತೆ ಮಾಡಿ, ಕಾಲುದಾರಿ ನಿರ್ಮಿಸದರೆ ತಂಬಾ ಆಕರ್ಷಕವಾಗುವುದು.
ಕೊಟ್ಟಾರ ಚೌಕಿ- ಕೊಟ್ಟಾರ- ಪಂಪ್‌ವೆಲ್- ಕರಾವಳಿ ವೃತ್ತ ದ್ವಿಪಥದ ರಸ್ತೆಗಳು
ಉಡುಪಿ ಕಡೆಯಿಂದ ಬರುವವರಿಗೆ ಕೊಟ್ಟಾರ ಚೌಕಿ, ಬೆಂಗಳೂರು, ಕೇರಳ ಕಡೆಯಿಂದ ಬರುವವರಿಗೆ ಪಂಪ್‌ವೆಲ್ ಮಂಗಳೂರು ನಗರವನ್ನು ಸ್ಪಂದಿಸುವ ತಾಣ. ಆದ್ದರಿಂದ ನಗರಕ್ಕೆ ಬರುವವರ ಅನುಕೂಲಕ್ಕೆ ಮತ್ತು ನಗರದ ಬಗ್ಗೆ ಉತ್ತಮ ಭಾವನೆ ಬರಲು ಈ ಎರಡೂ ರಸ್ತೆಗಳನ್ನು ಉತ್ತಮ ಕಾಲುದಾರಿಯೊಂದಿಗೆ ಅಭಿವೃದ್ಧಿಗೊಳಿಸಿದರೆ ನಗರ ಸೌಂದರ್ಯ ವೃದ್ಧಿಯಾಗುವುದು. ಕೋಡಿಕಲ್‌ನ ಶಾಂತಿಲೇನ್‌ನಲ್ಲಿ ಕಳೆದ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಂತಹ 15- 20 ಮೀಟರ್ ಉದ್ದದ ಶಾಂತಿಲೇನ್ – ಕೋಡಿಕಲ್ ಕೂಡುರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಇತ್ತೀಚೆಗೆ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಜತೆಗೆ ಇದೇ ರೀತಿ ಇತರ ಒಳ ರಸ್ತೆಗಳೂ ಅಭಿವೃದ್ಧಿಯಾಗಬೇಕಿದೆ.
ವಿಶ್ವನಾಥ್ ಕೋಟೆಕಾರ್,
ಕೋಡಿಕಲ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.