ಸಾರ್ವಜನಿಕ ಶೌಚಾಲಯ ನಗರದ ಆದ್ಯತೆಯಾಗಲಿ


Team Udayavani, Jan 19, 2020, 5:37 AM IST

meg-12

ನಗರದ ಬಹುತೇಕವಾಗಿ ಹೆಚ್ಚಿನ ಕಡೆಗಳಲ್ಲಿ ಬಯಲು ಮಲಮೂತ್ರ ವಿಸರ್ಜನೆ ಕಂಡುಬರುವುದಿಲ್ಲ. ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ವಹಿಸುವುದರಿಂದ ಮನೆಗಳಲ್ಲಿ ಸಾಮಾನ್ಯವಾಗಿ ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ ನಗರಕ್ಕೆ ಹೊರಗಿನಿಂದ ಭೇಟಿ ನೀಡುವವರಿಗೆ ಮತ್ತು ನಿರ್ಗತಿಕರಿಗೆ ಮಲಮೂತ್ರ ವಿಸರ್ಜನೆಗೆ ತೀರಾ ತೊಂದರೆಯಾಗುತ್ತದೆ. ಏಕೆಂದರೆ ನಮ್ಮ ನಗರಗಳಲ್ಲಿ ಇಂದು ಸಮರ್ಪಕವಾದ ಸಾರ್ವಜನಿಕ ಶೌಚಗೃಹಗಳು ಇಲ್ಲದಿರುವುದು ಇದಕ್ಕೆ ಮುಖ್ಯ ಕಾರಣ.

ಹೌದು ಇಂದು ದೇಶದ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಶೌಚಗೃಹಗಳ ಕೊರತೆ ಎದ್ದು ಕಾಣುವುದರಿಂದ ಮತ್ತು ಅಗತ್ಯ ಸಮಯದಲ್ಲಿ ದೊರಕದೇ ಇರುವುದರಿಂದ ನಗರಕ್ಕೆ ಬೇರೆ ಊರಿನಿಂದ ತಾತ್ಕಾಲಿಕ ಅಥವಾ ಇತರ ಕೆಲಸಕ್ಕಾಗಿ ಬರುವ ಗ್ರಾಮೀಣ ಪ್ರದೇಶದ ಜನರು ಮತ್ತು ಯಾತ್ರಿಕರಿಗೆ ತೀವ್ರ ಸಮಸ್ಯೆ ಉಂಟಾಗುತ್ತದೆ. ನಗರದಲ್ಲಿ ಸುತ್ತಾಡುವಾಗ ಅಚಾನಕ್ಕಾಗಿ ಮಲಮೂತ್ರ ಅಥವಾ ಮೂತ್ರ ವಿಸರ್ಜನೆ ಮಾಡಬೇಕಾದರೆ ಸಾರ್ವಜನಿಕ ಶೌಚಗೃಹಗಳನ್ನು ಹುಡುಕಲು ಅಲೆಯಬೇಕಾಗುತ್ತದೆ. ಇದಕ್ಕೆ ಮುಖ್ಯ ಕಾರಣ ನಮ್ಮ ನಗರಗಳಲ್ಲಿ ಸರಕಾರ ಅಥವಾ ಅಲ್ಲಿನ ಸ್ಥಳೀಯಾಡಳಿತದಿಂದ ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಗೃಹಗಳನ್ನು ನಿರ್ಮಿಸದೆ ಇರುವುದರಿಂದ ನಗರದ ನೈರ್ಮಲ್ಯಕ್ಕೆ ತೊಂದರೆಯಾಗುತ್ತದೆ.

ಈ ಪರಿಸ್ಥಿತಿಯಿಂದ ಮಂಗಳೂರು ಮಹಾನಗರವೂ ಹೊರತಾಗಿಲ್ಲ. ಸಾರ್ವಜನಿಕರಿಗೆ ಉಪಯೋಗವಾಗುವಂತೆ ಸಾರ್ವಜನಿಕ ಶೌಚಾಲಯಗಳನ್ನು ನಗರದ ಜನನಿಬಿಡ ಪ್ರದೇಶಗಳಲ್ಲಿ ನಿರ್ಮಿಸುವುದು ಕೂಡ ಅಗತ್ಯ. ಇದರಿಂದ ನಗರದ ನೈರ್ಮಲ್ಯ ಕಾಪಾಡಬಹುದು.

ಈ ವಿಚಾರವಾಗಿ ಕೆಲವೊಂದು ದೇಶಗಳು ಅಳವಡಿಸಿಕೊಂಡೊರುವ ಯೋಜನೆಗಳು ದೇಶಕ್ಕೆ ಮಾದರಿಯಾಗಬಲ್ಲವು. ಈ ನಿಟ್ಟಿನಲ್ಲಿ ಪೋರ್ಟ್‌ ಲ್ಯಾಂಡ್‌ ಮತ್ತು ಅಮೆರಿಕ ವಾಷಿಂಗ್ಟನ್‌ ಡಿ.ಸಿ. ಹಾಗೂ ಇತರ ನಗರಗಳಲ್ಲಿ ಸಾರ್ವಜನಿಕ ಶೌಚಗೃಹವನ್ನು ಅತ್ಯಾಧುನಿಕವಾಗಿ ನಿರ್ಮಿಸಲಾಗಿದೆ. ಇದು ಅಲ್ಲಿ ಕಡ್ಡಾಯವಾಗಿದೆ. ಅಲ್ಲದೆ ಇದು ಸ್ವತ್ಛತೆಯನ್ನು ಕಾಪಾಡುವಲ್ಲಿಯೂ ಸಹಕಾರಿಯಾಗಿದೆ.

ಹೀಗಿರಲಿ ಶೌಚಗೃಹ
ಅಮೆರಿಕದಲ್ಲಿ ಈಗಾಗಲೇ ನಿರ್ಮಿಸಿರುವ ಹಾಗೆ ಸ್ಟೀಲ್‌ನಿಂದ ತಯಾರಿಸಿದ ಶೌಚಗೃಹಗಳು ನಿರ್ಮಿಸುವುದು ಸೂಕ್ತ. ಇವು ಕಡಿಮೆ ತೂಕ ಹೊಂದಿರುವುದರಿಂದ ತಯಾರಿಸಿ ನಗರದ ವಿವಿಧ ಸ್ಥಳಗಳಿಗೆ ತಲುಪಿಸಬಹದು.
ಸ್ಟೀಲ್‌ನಿಂದ ತಯಾರಿಸುವುದರಿಂದ ಇದು ಸುದೀರ್ಘ‌ ಬಾಳಿಕೆ ಬರುತ್ತವೆ. ಅಲ್ಲದೆ ಇದು ಸರಕಾರದ ವೆಚ್ಚವನ್ನೂ ಕಡಿಮೆಮಾಡುತ್ತದೆ ಮತ್ತು ಬೇಗನೆ ನಿರ್ಮಿಸಲು ಸಾಧ್ಯವಾಗುತ್ತದೆ.

ಸುಲಭವಾಗಿ ಸಿಗುವಂತಿರಲಿ
ನಗರದಲ್ಲಿ ಹೆಚ್ಚು ಜನರ ಓಡಾಟ ಇರುವಂತಹ ಸ್ಥಳಗಳಲ್ಲಿ ಸಾರ್ವಜನಿಕ ಶೌಚಗೃಹಗಳನ್ನು ಸ್ಥಾಪಿಸಬೇಕು. ಅವು ಜನರನ್ನು ಹೆಚ್ಚು ಹುಡುಕಾಡಿಸದೆ ಬೇಗನೆ ಸಿಗುವಂತ ಸ್ಥಳಗಳಲ್ಲಿ ಇರಬೇಕು ಮತ್ತು ಅವುಗಳ ಸರಿಯಾದ ನಿರ್ವಹಣೆ ಅಗತ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣವು ಸ್ಮಾರ್ಟ್‌ ಸಿಟಿಯ ಆದ್ಯತೆಯಾಗಲಿ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರವೂ ಕೂಡ ಅಮೆರಿಕದಲ್ಲಿ ಆರಂಭಿಸಲಾಗಿರುವ ಸಾರ್ವಜನಿಕ ಶೌಚಾಲಯದ ಮಾದರಿಯಲ್ಲಿ ಅಳವಡಿಸಿಕೊಳ್ಳುವುದು ಕೂಡ ಉತ್ತಮ ವಾದುದು. ಇದಕ್ಕೆ ಆಡಳಿತ ವ್ಯವಸ್ಥೆ ಮನಸ್ಸು ಮಾಡಲಿ.

ಸ್ವಚ್ಛತೆಗೆ ಆದ್ಯತೆ
ಈಗಾಗಲೇ ಕೇಂದ್ರ ಸರಕಾರ ಸ್ವಚ್ಛ ಭಾರತ ಕನಸನ್ನು ಸಾಕಾರಗೊಳಿಸುವಲ್ಲಿ ಹಲವಾರು ಪ್ರಯತ್ನ ಮಾಡುತ್ತಿದೆ. ಇದು ಕೂಡ ಅದಕ್ಕೆ ಸಹಕಾರಿಯಾಗಿದೆ. ಇಂದು ದೊಡ್ಡ ನಗರಗಳು ನೀರಿನ ಅಭಾವವನ್ನು ಎದುರಿಸುತ್ತಿವೆ. ಆದರೆ ಈ ಆಧುನಿಕ ಮಾದರಿಯ ಶೌಚಗೃಹಗಳು ನೀರನ್ನು ಉಳಿಸುವಲ್ಲಿ ಹೆಚ್ಚು ಉಪಯುಕ್ತವಾಗಿವೆ. ಸ್ಟೀಲ್‌ನಿಂದ ಮಾಡಿದ ಕಾರಣ ಇತರ ಶೌಚಾಗೃಹಗಳಿಗಿಂತ ಇವುಗಳನ್ನು ಕಡಿಮೆ ನೀರಿನಿಂದ ಮತ್ತು ಬೇಗನೆ ಸ್ವಚ್ಛಗೊಳಿಸಬಹುದು. ಅಲ್ಲದೆ ಹೊರಗಿನಿಂದ ಬಂದ ಯಾತ್ರಿಕರು, ಜನರು ಶೌಚಗೃಹ ಸಿಗದೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡುವುದನ್ನು ತಪ್ಪಿಸಬಹುದು.

– ಶಿವಾನಂದ ಎಚ್‌.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.