ಅಂಗಡಿ ಬದಿಗಳ ರಸ್ತೆ ಕಸ ಮುಕ್ತವಾಗಲಿ
Team Udayavani, Oct 13, 2019, 4:57 AM IST
ಮಂಗಳೂರು ನಗರವು ಶುಚಿತ್ವಕ್ಕೆ ಪ್ರಶಸ್ತಿಯನ್ನು ಪಡೆದುಕೊಂಡ ನಗರವಾಗಿದೆ. ಆದರೆ, ನಗರದ ಒಳಹೊಕ್ಕು ನೋಡಿದರೆ, ಅಲ್ಲಲ್ಲಿ ಕಸದ ರಾಶಿ ಇನ್ನೂ ಗೋಚರಿಸುವುದು ಸ್ಪಷ್ಟ. ಪ್ರಮುಖವಾಗಿ ಸಣ್ಣ ಪುಟ್ಟ ಅಂಗಡಿಗಳ ಎದುರು ಅನಗತ್ಯವಾಗಿರುವ ಕಸಗಳನ್ನು ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ಎಸೆಯುವುದನ್ನು ಕಾಣಬಹುದು. ಪ್ಲಾಸ್ಟಿಕ್‌ನಲ್ಲಿ ಪ್ಯಾಕ್ ಮಾಡಲಾಗಿರುವ ವಸ್ತುಗಳನ್ನು ತಿಂದು ಅಲ್ಲಲ್ಲಿಯೇ ಬಿಸಾಡುವುದರಿಂದ ಮಣ್ಣಿನಲ್ಲಿ ಕೊಳೆತು ಹೋಗದೆ, ಹಾಗೇ ಉಳಿದು ಬಿಡುತ್ತದೆ. ಇದರಿಂದ ನಗರದ ಸೌಂದರ್ಯಕ್ಕೂ ಧಕ್ಕೆಯಾಗುತ್ತದೆ. ಮುಖ್ಯರಸ್ತೆಗಳ ಬದಿಯಲ್ಲೇ ಇರುವ ಹಲವಾರು ಅಂಗಡಿಗಳ ಎದುರಿನ ರಸ್ತೆ ಬದಿಗಳಲ್ಲಿ ಈ ರೀತಿ ಕಸ ಎಸೆಯುವುದನ್ನು ಕಾಣಬಹುದು.
ಪ್ರಮುಖವಾಗಿ ಆಯಾ ಅಂಗಡಿಯವರು ತಮ್ಮ ಅಂಗಡಿಗಳಲ್ಲಿ ಗ್ರಾಹಕರು ಕಸ ಹಾಕಲು ಪೂರಕವಾಗುವಂತೆ ಡಸ್ಟ್‌ಬಿನ್‌ಗಳನ್ನು ಇಡಬೇಕು. ಪಾಲಿಕೆಯೂ ಹೀಗೆ ಕಸ ಎಸೆಯುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ಡಸ್ಟ್‌ಬಿನ್ ಇಟ್ಟು ಕಸವನ್ನು ಅದಕ್ಕೆ ಹಾಕುವಂತೆ ಎಲ್ಲ ಅಂಗಡಿ ಮಾಲಕರಿಗೆ ಸೂಚಿಸಿದೆ. ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದೆ. ಆದರೆ, ಈ ಹೇಳಿಕೆ ಕೇವಲ ಹೇಳಿಕೆಯಾಗಿ ಉಳಿಯದೆ, ಕಸ ಎಸೆಯುವವರ ಮೇಲೆ ಕಠಿನ ಕ್ರಮ ಕೈಗೊಂಡರಷ್ಟೇ ಸುಧಾರಣೆ ಸಾಧ್ಯವಾಗುತ್ತದೆ.
ಹೆದ್ದಾರಿ ಸುಧಾರಣೆಯಾಗಲಿ
ಮಂಗಳೂರಿನಿಂದ ಪುತ್ತೂರಿಗೆ ತೆರಳುವ ರಸ್ತೆಯಲ್ಲಿ ಮಾಣಿವರೆಗಿನ ರಸ್ತೆ ದುಃಸ್ಥಿತಿಯಿಂದಾಗಿ ಗಂಟೆಗಟ್ಟಲೆ ಟ್ರಾಫಿಕ್ ಜಾಂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಜನಸಾಮಾನ್ಯರಿಗಿದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರ ಪರಿಸ್ಥಿತಿ ಅಯ್ಯೋ ಎನಿಸದೆ ಇರದು. ಬಿಸಿಲಿನಲ್ಲಿ ಕಾದ ಕಬ್ಬಿಣದಂತಾದ ಹೊಂಡ ಗುಂಡಿ ರಸ್ತೆಯಲ್ಲಿ ಟ್ರಾಫಿಕ್ ಜಾಂ ನಡುವೆ ಸಿಕ್ಕಿ ಹಾಕಿಕೊಳ್ಳಬೇಕಾದ ಸ್ಥಿತಿ ಜನಸಾಮಾನ್ಯರದ್ದಾಗಿದೆ. ಕಳಪೆ ರಸ್ತೆ ಕಾಮಗಾರಿಯಿಂದಾಗಿ ಮಳೆಗಾಲದಲ್ಲಿ ರಸ್ತೆ ಎದ್ದು ಹೋಗಿ ಈ ದುಃಸ್ಥಿತಿ ಉಂಟಾಗಿರುವುದು ತಿಳಿದ ವಿಚಾರವೇ. ಸರಾಗ ಮತ್ತು ಸುಗಮ ಸಂಚಾರಕ್ಕೆ ಹೆದ್ದಾರಿಯೂ ಇಲ್ಲದಿದ್ದರೆ, ಮೂಲಭೂತ ಸೌಕರ್ಯ ಕಲ್ಪಿಸಿಯೂ ಅರ್ಥವೇನು? ಹೆದ್ದಾರಿಯ ಅಲ್ಲಲ್ಲಿ ಹೊಂಡಗುಂಡಿ ಉಂಟಾಗಿರುವುದರಿಂದ ದ್ವಿಚಕ್ರ ಮಾತ್ರವಲ್ಲದೆ, ಕಾರು ಚಾಲಕರಿಗೂ ರಸ್ತೆ ಗಮನಕ್ಕೆ ಸಿಗದೆ, ಹೊಂಡಗುಂಡಿಗೆ ಸಿಲುಕಿಕೊಂಡೇ ಕಾರು ಓಡಿಸಬೇಕಾದ ಪರಿಸ್ಥಿತಿ ಇದೆ. ಇದರಿಂದ ಕಾರಿಗೂ ಪೆಟ್ಟು ಬಿದ್ದು, ಮತ್ತೂಂದಷ್ಟು ರಿಪೇರಿಗಾಗಿ ಖರ್ಚು ಮಾಡಬೇಕಾದ ಅನಿವಾರ್ಯತೆಯಲ್ಲಿ ಸಾಮಾನ್ಯ ನಾಗರಿಕನಿದ್ದಾನೆ. ಸಂಬಂಧಪಟ್ಟವರು ಸುಧಾರಿತ ರಸ್ತೆ ವ್ಯವಸ್ಥೆಯನ್ನು ಕಲ್ಪಿಸಿಕೊಡುವಲ್ಲಿ ಆದ್ಯ ಗಮನ ಹರಿಸಬೇಕು.
ಡಿಬಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.