ಸ್ವಯಂ ದುರಸ್ತಿ ರಸ್ತೆಗಳ ತಂತ್ರಜ್ಞಾನ ಅಳವಡಿಸಿಕೊಳ್ಳಲಿ
Team Udayavani, Mar 1, 2020, 4:53 AM IST
ತಂತ್ರಜ್ಞಾನವು ಎಲ್ಲ ಕ್ಷೇತ್ರಗಳಿಗೂ ಕಾಲಿಟ್ಟಿದೆ. ತಂತ್ರಜ್ಞಾನ ಹೊರತುಪಡಿಸಿ ಯಾವುದು ಕೂಡ ಅಭಿವೃದ್ಧಿಯಾಗುವುದಿಲ್ಲ ಎಂಬವಾದ ಆಗಾಗ ಕೇಳಿರುತ್ತೇವೆ. ಮುಂದುವರಿದ ತಂತ್ರಜ್ಞಾನವೂ ಇಂದು ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ. ಈ ನಿಟ್ಟಿನಲ್ಲಿ ಅಭಿವೃದ್ಧಿ ಶೀಲ ದೇಶಗಳು ಮುಂದುವರಿದ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅಭಿವೃದ್ಧಿ ಪಥದತ್ತ ಸಾಗುತ್ತಿದೆಯಾದರೂ ಕೆಲವು ಕ್ಷೇತ್ರಗಳಿಗೆ ಪರಿಣಾಮಕಾರಿಯಾಗಿ ಬಳಸಿಕೊಂಡಿಲ್ಲ ಎಂಬ ವಾದವೂ ಇದೆ.
ಈ ವಿಚಾರವಾಗಿ ಮೂಲ ಸೌಲಭ್ಯಗಳ ಅಭಿವೃದ್ಧಿ, ನೆರೆಹಾವಳಿ ತಡೆ, ರಸ್ತೆಗಳ ನಿರ್ಮಾಣದಂತ ವಿಷಯಗಳಿಗೆ ಮುಂದುವರಿದ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕಾಗಿದೆ. ಇದರಿಂದಾಗಿ ಮೂಲಸೌಲಭ್ಯ ಸಮಸ್ಯೆಗೆ ತತ್‌ಕ್ಷಣವೇ ಪರಿಹಾರ ಸಿಗುತ್ತದೆ. ದೇಶದ ಗ್ರಾಮೀಣ ಮತ್ತು ನಗರಗಳಲ್ಲಿ ನಿರ್ಮಾಣವಾಗುವ ರಸ್ತೆಗಳ ಪರಿಸ್ಥಿತಿ ಹೇಗಿದೆಯೆಂದರೆ ಉದ್ಘಾಟನೆಗೊಂಡ ಮರುದಿನವೇ ರಸ್ತೆಗಳು ದುರಸ್ತಿಗೆ ಬಂದು ಬಿಡುತ್ತವೆ. ಸರಿಯಾಗಿ ಕಾಮಗಾರಿ ಮಾಡದಿರುವುದು ಇದಕ್ಕೆ ಒಂದು ಕಾರಣವಾಗಿದೆ. ಆಗ ಸಾರ್ವಜನಿಕರು ಆಡಳಿತವನ್ನು ದೂಷಿಸುತ್ತ ಸುಮ್ಮನೇ ಕೂರ ಬೇಕಾಗುತ್ತದೆ. ಇದಕ್ಕೆ ಪರಿಹಾರವಾಗಿ ಮತ್ತೆ ರಸ್ತೆ ದುರಸ್ತಿಗೆ ಅನುದಾನ ಬಿಡುಗಡೆಗೊಂಡು, ಅದಕ್ಕೆ ಕಾಮಗಾರಿ ಕೈಗೊಳ್ಳುವುದು ಎಂಬಂತಾಗಿದೆ. ಇದರ ಬದಲಿ ತಾಂತ್ರಿಕವಾಗಿ ನಾವು ಯೋಚಿಸಬೇಕಾಗಿದೆ. ಇದಕ್ಕೆ ಪರಿಹಾರ ಖಂಡಿತ ಇದೆ.
ಕಾರ್ಯ ವಿಶೇಷತೆ ಏನು?
ಅಲ್ಟ್ರಾ ಹೈ-ಸ್ಟ್ರೆಂಥ್ ಕಾಂಕ್ರೀಟ್ ಮತ್ತು ವಿಶೇಷ ನಾರುಗಳನ್ನು ಬಳಸಿ ಈ ರಸ್ತೆಯನ್ನು ನಿರ್ಮಿಸಲಾಗುತ್ತದೆ. ಅಲ್ಲದೇ ಈ ರಸ್ತೆ ನಿರ್ಮಾಣ ಮಾಡುವಾಗ ಶೇ. 60 ರಷ್ಟು ನೊಣ ಬೂದಿ ಮತ್ತು ಶೇ. 40ರಷ್ಟು ಮಾತ್ರ ಸಿಮೆಂಟ್‌ನ್ನು ಬಳಸಲಾಗುತ್ತದೆ. ಇದರ ವೈಶಿಷ್ಟ ಏನೆಂದರೆ ರಸ್ತೆಯಲ್ಲಿ ಬಿರುಕುಗಳು ಉಂಟಾದಾಗ ಮಳೆ ಅಥವಾ ಇನ್ನಿತರ ಸಂದರ್ಭ ಇದರ ಮೇಲೆ ನೀರು ಬಿದ್ದಾಗ ಆ ನೀರನ್ನು ಹೀರಿಕೊಂಡು, ಹೆಚ್ಚಿನ ಪ್ರಮಾಣದಲ್ಲಿ ಸಿಲಿಕೇಟ್‌ಗಳನ್ನು ಉತ್ಪಾದಿಸಿ ತನ್ನಿಂದ ತಾನೇ ಬಿರುಕುಗಳನ್ನು ಮುಚ್ಚುತ್ತದೆ.
ಸ್ವಯಂ ದುರಸ್ತಿ ರಸ್ತೆ ತಂತ್ರಜ್ಞಾನವೂ ಮುಂದುವರಿದ ತಂತ್ರಜ್ಞಾನದ ಒಂದು ಭಾಗವಾಗಿದ್ದು ಇದೊಂದು ಕೌಶಲವಾಗಿದೆ. ಈ ತಂತ್ರಜ್ಞಾನವನ್ನು ಕೆಲವು ದೇಶಗಳು ಈಗಾಗಲೇ ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿವೆ. ಭಾರತದಲ್ಲಿ ಕೂಡ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಿದೆ. ಸಂಚಾರಕ್ಕೆ ಪೂರಕವಾದ , ಪಾರದರ್ಶಕ ಆಡಳಿತಕ್ಕೆ ಈ ಯೋಜನೆ ಸಹಕಾರಿಯಾಗಲಿದೆ. ರಸ್ತೆಗಳ ನಿರ್ಮಾಣಕ್ಕೆಂದು ಇಂತಿಷ್ಟು ಅನುದಾನವನ್ನು ಮೀಸಲಿಟ್ಟು ಕಾಮಗಾರಿ ಪೂರ್ಣಗೊಳಿಸುರುತ್ತೇವೆ, ಆದರೆ ಮತ್ತೇ ರಸ್ತೆಗಳು ಬಿರುಕು ಬಿಟ್ಟು, ಹೊಂಡ-ಗುಂಡಿಗಳಿಂದ ಕೂಡಿ ದುಸ್ತರ ಸಂಚಾರಕ್ಕೆ ಕಾರಣವಾಗುತ್ತದೆ. ಇಂತಹ ಕಾರ್ಯಗಳು ಮರುಕಳಿಸಬಾರದು ಎಂದರೆ ಈ ಯೋಜನೆಯನ್ನು ಜಾರಿಗೊಳಿಸಬೇಕು. ಈಗಾಗಲೇ ನಮ್ಮ ಮಂಗಳೂರು ನಗರದಲ್ಲಿ ಕೂಡ ಇಂತಹ ಹಲವು ರಸ್ತೆ ಸಮಸ್ಯೆಗಳನ್ನು ನೋಡಬಹುದು. ದುಃಸ್ಥಿತಿಯಾದ ರಸ್ತೆಗಳಅಭಿವೃದ್ಧಿಗೆ ಆಡಳಿತ ವರ್ಗವೂ ಶ್ರಮಿಸುತ್ತಿದೆಯಾದರೂ ಇಂತಹ ಮುಂದುವರಿದ ಸ್ವಯಂ ದುರಸ್ತಿ ರಸ್ತೆ ತಂತ್ರಜ್ಞಾನವನ್ನು ಅಳವಡಿಸಿಕೊಂಡಾಗ ಸಂಚಾರ ಅಭಿವೃದ್ಧಿಗೆ ಪೂರಕವಾಗಲಿದೆ. ಈ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ನಗರದ ಅಭಿವೃದ್ಧಿಗೆ ಯೋಜಿಸಬೇಕಿದೆ.
ಸ್ವಯಂ ದುರಸ್ತಿ ರಸ್ತೆಗಳ ತಂತ್ರಜ್ಞಾನ
ಆಗಾಗ ದುರಸ್ತಿಗೊಳ್ಳುವ ರಸ್ತೆಗಳಿಗೆ ತಂತ್ರಜ್ಞಾನದ ಮೂಲಕ ಸಮಸ್ಯೆಯನ್ನು ಪರಿಹರಿಸುವ ವಿಧಾನವೇ ಸ್ವಯಂ ದುರಸ್ತಿ ರಸ್ತೆಗಳ ತಂತ್ರಜ್ಞಾನ (ಸೆಲ್ಫ್ ರಿಪೇರಿ ರೋಡ್ ಟೆಕ್ನಾಲಜಿ). ಇದೊಂದು ತಂತ್ರಜ್ಞಾನ ಪೂರಕವಾದ ಯೋಜನೆಯಾಗಿದೆ. ಕೆನಡಾದ ಬ್ರಿಟಿಷ್ ಕೊಲಂಬಿಯ ವಿ.ವಿ.ಯ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಭಾರತ ಮೂಲದ ನೇಮ್‌ಕುಮಾರ್ ಭಾಟಿಯಾ ಅವರು ಈ ರಸ್ತೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ತಂತ್ರಜ್ಞಾನದಿಂದ ಸ್ವಯಂ ಆಗಿ ರಸ್ತೆಗಳು ದುರಸ್ತಿಗೊಳ್ಳುತ್ತವೆ. ಈ ಯೋಜನೆಯನ್ನು ಬೆಂಗಳೂರು ಸಮೀಪದ ಹಳ್ಳಿಯೊಂದರಲ್ಲಿ ಪ್ರಯೋಗ ಮಾಡಲಾಗಿದ್ದು ಯಶಸ್ವಿಯಾಗಿದೆ.
- ಅಭಿನವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.