ಸ್ಮಾರ್ಟ್ ನಗರಿಗೂ ಬರಲಿ ಲಿಟಲ್ ಫ್ರೀ ಲೈಬ್ರೆರಿ
Team Udayavani, Mar 17, 2019, 7:41 AM IST
ಪುಸ್ತಕ ಓದೋದು ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಒತ್ತಡದ ಬದುಕಿನಲ್ಲಿ ಸಮಯ ಇಲ್ಲದೇ ಇರೋದ್ರಿಂದ ಪುಸ್ತಕ ಮೂಲೆ ಗುಂಪಾಗಿದೆ. ಸಿಗುವ ಸ್ವಲ್ಪ ಕಾಲಾವಕಾಶಗಳೆಲ್ಲ ಸಾಮಾಜಿಕ ಜಾಲತಾಣಗಳಲ್ಲೇ ಜಾಲಡುತ್ತಾ ಸಮಯ ಹರಣವಾಗುತ್ತಿದೆ. ಓದುವ ಮನಸ್ಸಿದ್ರು ಕೂಡ ಪುಸ್ತಕ ಹಿಡಿದು ಜ್ಞಾನವೃದ್ಧಿ ಮಾಡುವ ಸಮಯ ಇಲ್ಲದ ವಾತಾವರಣ ಸೃಷ್ಟಿಯಾಗುತ್ತಿರುವುದು ದುರಂತವೇ ಸರಿ.
ಇಂದಿನ ಮಕ್ಕಳಿಗೂ ಅಷ್ಟೇ. ಮೊಬೈಲೇ ಪ್ರಪಂಚವಾಗಿದೆ. ಸಣ್ಣ ಸಣ್ಣ ಕತೆಗಳ ಪರಿಚಯವಿಲ್ಲ. ಹೊಸ ವಿಷಯಗಳ ತಿಳಿಯುವ ಮನಸ್ಸಿಲ್ಲ. ಓದುವುದರಿಂದ ಅನೇಕ ವಿಷಯಗಳು ಸಿಕ್ಕರೂ ಅದು ಕಡೆಗಣನೆಯತ್ತ ಸಾಗುತ್ತಿದೆ. ಹಾಗಂತ ಓದುವವರೇ ಇಲ್ಲ ಎಂದರೆ ತಪ್ಪಾಗುತ್ತದೆ. ನಗರ, ಗ್ರಾಮೀಣ ಪ್ರದೇಶದಲ್ಲೂ ಪುಸ್ತಕ ಪ್ರಿಯರಿದ್ದಾರೆ. ಆದರೆ ಗ್ರಂಥಾಲಯಗಳು ದೂರವಿರುವುದರಿಂದ, ಬೇಕಾದ ಪುಸ್ತಕ ಖರೀದಿ ಮಾಡಿ ತರುವ ಆಸಕ್ತಿ ಇಲ್ಲದೇ ಇರುವುದರಿಂದ ಓದುವ ಮನಸ್ಸಿದ್ದರೂ ಪುಸ್ತಕವಿಲ್ಲ ಎಂದು ಕೊಂಡು ಸುಮ್ಮನಾಗುತ್ತಾರೆ.
ಈ ಸಮಸ್ಯೆ ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಇದೆ. ಆದರೆ ವಿದೇಶದಲ್ಲಿ ಇದಕ್ಕೊಂದು ವಿಶೇಷ ರೀತಿಯ ಪರಿಹಾರವನ್ನು ಲಿಟಲ್‌ಫ್ರೀ ಲೈಬ್ರೆರಿ ಮೂಲಕ ಕಂಡುಕೊಂಡಿದ್ದು, ಅದನ್ನೂ ನಾವೂ ಅಳವಡಿಸಿಕೊಳ್ಳಬೇಕಿದೆ.
ಏನಿದು ಲಿಟಲ್‌ಫ್ರೀ ಲೈಬ್ರೆರಿ?
ಜನರು ತಮ್ಮ ಸೃಜನಶೀಲ ಕಲ್ಪನೆಗೆಕಿಸುಲಿ ಹಾಕಿ ತಂದ ಯೋಚನೆ, ಯೋಜನೆಯೇ ಲಿಟಲ್ ಫ್ರೀ ಲೈಬ್ರೆರಿ ಲಿಟಲ್‌ಫ್ರೀ ಲೈಬ್ರೆರಿ ಇದೊಂದು ವಿಭಿನ್ನ ಕಾನ್ಸೆಪ್ಟ್ ಆಗಿದ್ದು, ತಮ್ಮ ಮನೆಯಲ್ಲಿ ಓದಿ ಮುಗಿಸಿದ ಪುಸ್ತಕಗಳನ್ನು ಬೇರೆಯವರಿಗೆ ಉಚಿತವಾಗಿ ಓದಿಸಿ ನಾವು ಬೇರೊಂದು ಪುಸ್ತಕವನ್ನು ಉಚಿತವಾಗಿಯೇ ಓದುವ ಪ್ರಕ್ರಿಯೆಯನ್ನು ಮಾಡುವಂತದ್ದಾಗಿದೆ. ಸಂಕ್ಷಿಪ್ತವಾಗಿ ಅಲ್ಲಲ್ಲಿ ಆಕರ್ಷಕ ಪುಸ್ತಕ ಸ್ಟಾಂಡ್‌ಗಳು ನಿರ್ಮಿಸಿ ಇಲ್ಲಿ ನಾವು ಓದಿರುವ ಪುಸ್ತಕಗಳನ್ನು ಬಿಟ್ಟು ನಮಗೆ ಇಷ್ಟವೆನಿಸಿದ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುವುದು.
ಕೆಲವೊಂದು ಪುಸ್ತಕ ಸ್ಟಾಂಡ್‌ಗಳ ಪಕ್ಕ ಅಲ್ಲೇ ಕುಳಿತು ಓದುವಂತಹ ಸುಂದರ ವಾತಾವರಣ ಇರುತ್ತದೆ. ವಿದೇಶದಲ್ಲಿ ಈ ಲಿಟಲ್ ಫ್ರೀ ಲೈಬ್ರೆರಿಯ ಹಿಂದೆ ಶ್ರಮಿಸುವ ತಂಡವೇ ಇರು ತ್ತದೆ. ಇವರು ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ಈ ಪ್ರಯತ್ನಕ್ಕೆ ಕೈ ಜೋಡಿಸಲು ಸೆಳೆಯುತ್ತಾರೆ. ಈ ಪುಟ್ಟ ಲೈಬ್ರೆರಿಗಳು ಎಲ್ಲ ವಯಸ್ಸಿನವರನ್ನು ಕೇಂದ್ರೀಕರಿಸಿ ನಿರ್ಮಿಸಲಾಗಿರುತ್ತದೆ. ಹೆಚ್ಚಾಗಿ ಪಾರ್ಕ್, ರಸ್ತೆ ಬದಿಗಳಲ್ಲಿ ಇಂಥ ಲೈಬ್ರೆರಿಗಳು ಕಾಣಸಿಗುತ್ತವೆ.
ಮಂಗಳೂರಿಗೂ ಬರಲಿ
ಮಂಗಳೂರು ಸುತ್ತಮುತ್ತ ಅನೇಕ ಪಾರ್ಕ್‌ಗಳಿವೆ. ಆಕರ್ಷಕ ಪಾದಚಾರಿ ರಸ್ತೆಗಳೂ ಇವೆ. ಇಲ್ಲಿ ಎಲ್ಲ ಲಿಟಲ್ ಫ್ರೀ ಲೈಬ್ರೆರಿಯನ್ನು ನಿರ್ಮಾಣ ಮಾಡಬಹುದಾಗಿದೆ. ಕೆಲವೊಂದು ಸಂಘ ಸಂಸ್ಥೆಗಳು ಈ ಬಗ್ಗೆ ಗಮನ ಕೊಟ್ಟರೆ ನಗರಕ್ಕೊಂದು ಹೊಸ ಕಲ್ಪನೆಯ ಜತೆಗೆ ಕೊಡುಗೆಯನ್ನು ನೀಡಿದಂತಾಗುತ್ತದೆ.
ವಿಶ್ವಾಸ್ ಅಡ್ಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.