ನಗರದ ಟ್ರಾಫಿಕ್‌  ಸಮಸ್ಯೆ ನಿವಾರಣೆಯಾಗಲಿ 


Team Udayavani, Jan 13, 2019, 7:45 AM IST

13-january-11.jpg

ಮಂಗಳೂರು ನಗರದ ಜನ ಸಂಖ್ಯೆ ಮತ್ತು ವಾಹನಗಳ ಒಟ್ಟು ಸಂಖ್ಯೆಯು ವಾಹನಗಳ ಸಂಖ್ಯೆ ಜನ ಸಂಖ್ಯೆಗೆ ಸಮಾನಾಂತರವಾಗಿದೆ. ಹೊಸದಿಲ್ಲಿಯನ್ನು ಹೊರತುಪಡಿಸಿದರೆ ದೇಶದಲ್ಲಿಯೇ ಜನಸಂಖ್ಯೆಗೆ ಹೊಂದಿಕೊಂಡು ಹೆಚ್ಚು ವಾಹನಗಳಿರುವ ನಗರಗಳಲ್ಲಿ ನಮ್ಮ ನಗರವೂ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲ ದಿನವೂ ಟ್ರಾಫಿಕ್‌ ತೊಂದರೆ ತಪ್ಪಿದ್ದಲ್ಲ. ಹೀಗಾಗಿ ಅದನ್ನು ಪರಿಹರಿಸುವತ್ತ ಒಂದಷ್ಟು ಕ್ರಮಗಳನ್ನು ಅನುಸರಿಸಬೇಕಿದೆ. ಮುಖ್ಯವಾಗಿ:

„ ಬಹುತೇಕ ಎಲ್ಲ ರಸ್ತೆಗಳ ಸುಧಾರಣೆಯಾಗಬೇಕು. ಪಿವಿಎಸ್‌- ಬಂಟ್ಸ್‌ ಹಾಸ್ಟೆಲ್‌ ರಸ್ತೆಯನ್ನು ದ್ವಿಮುಖ ರಸ್ತೆಯಾಗಿ ಪರಿವರ್ತಿಸಬೇಕು.

„ ಹಂಪನಕಟ್ಟೆ ಪ್ರದೇಶದಿಂದ ಕೆ.ಎಂ.ಸಿ. ಕಾಲೇಜಿನ ತನಕ ಮತ್ತು ಲಾಲ್‌ ಬಾಗ್‌ ಬಲ್ಲಾಳ್‌ಬಾಗ್‌ ಮಧ್ಯಪ್ರದೇಶದಿಂದ ಪಿ.ವಿ.ಎಸ್‌. ತನಕ ಏಕ ಪಥದ ಮೇಲ್ಸೇತುವೆ ನಿರ್ಮಿಸಬೇಕು. ಇದರೊಂದಿಗೆ ವಾಹನಗಳ ನಿಲುಗಡೆಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು.

„ ವಾಹನ ಪಾರ್ಕಿಂಗ್‌ ಮಾಹಿತಿ ಫ‌ಲಕಗಳಿಗೆ ಅನುಗುಣವಾಗಿಯೇ ನಡೆಸಬೇಕು. ಕೆಲವೊಂದು ಕಡೆ ಈ ನಿಯಮಗಳು ಸರಿಯಾಗಿ ಪಾಲನೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಕಠಿನ ಕ್ರಮಕೈಗೊಳ್ಳಬೇಕು.

„ ಪಂಪ್‌ ವೆಲ್‌ ನಲ್ಲಿ ಮುಖ್ಯ ಬಸ್‌ ನಿಲ್ದಾಣ ನಿರ್ಮಾಣ ಯೋಜನೆಯನ್ನು ಶೀಘ್ರದಲ್ಲೇ ಕಾರ್ಯರೂ ಪಕ್ಕೆ ತರಬೇಕು. ಪಂಪ್‌ವೆಲ್‌ನಿಂದ ಸ್ಟೇಟ್‌ಬ್ಯಾಂಕ್‌ ಗೆ ಆವಶ್ಯಕತೆಗೆ ಅನುಗುಣವಾಗಿ ‘ಲೋಪ್ಲೊರ್‌” ಬಸ್‌ಗಳನ್ನು ಅಳವಡಿಸಿದರೆ, ಬಸ್‌ಗಳ ಓಡಾಟದಲ್ಲಿ ಕಡಿಮೆಯಾಗುವುದು.

„ ಪಂಪ್‌ವೆಲ್‌ನ ಮೂಲಕ ಬರುವ ಕೆ.ಎಸ್‌.ಆರ್‌.ಟಿ.ಸಿ. ಬಸ್‌ಗಳು (ಕರ್ನಾಟಕ ಮತ್ತು ಕೇರಳ) ಪಂಪ್‌ವೆಲ್‌, ನಂತೂರ್‌, ಬಿಜೈ ಮಾರ್ಗದ ಮೂಲಕ ಬಸ್‌ ನಿಲ್ದಾಣ ಸೇರಿ ಬಿಜೈ- ಲಾಲ್‌ಬಾಗ್‌- ಪಿ.ವಿ.ಎಸ್‌.- ಬಲ್ಮಠ- ಕಂಕನಾಡಿ- ಪಂಪ್‌ವೆಲ್‌ ಮಾರ್ಗದ ಮೂಲಕ ನಿರ್ಗಮಿಸಿದರೆ, ಮುಖ್ಯ ನಗರದಲ್ಲಿ ಬಸ್‌ಗಳ ಓಡಾಟದಲ್ಲಿ ಕಡಿಮೆಯಾಗುವುದು.

„ ಪಿ.ವಿ.ಎಸ್‌. ವೃತ್ತ ಪ್ರದೇಶದಲ್ಲಿ, ಕೆನರಾ ಕಾಲೇಜಿನಿಂದ ಬಂಟ್ಸ್‌ ಹಾಸ್ಟೆಲ್‌ಗೆ ಸಾಗುವ ದಾರಿ ಏರು ತಗ್ಗಿನಿಂದ ಕೂಡಿದೆ. ಅಲ್ಲದೆ, ಸಿಗ್ನಲ್‌ನಿಂದಾಗಿ ನವಭಾರತ ವೃತ್ತದ ಕಡೆಗೆ ಹೋಗುವ ವಾಹನಗಳು ರಸ್ತೆಯ ಎಲ್ಲ ಜಾಗವನ್ನು ಆಕ್ರಮಿಸಿಕೊಳ್ಳುವುದರಿಂದ ಬಂಟ್ಸ್‌ ಹಾಸ್ಟೆಲ್‌ ಕಡೆಗೆ ಸಿಗ್ನಲ್‌ ‘ಪ್ರಿ’ ಇದ್ದರೂ, ವಾಹನಗಳ ಓಡಾಟಕ್ಕೆ ಅಸಾಧ್ಯವಾಗುತ್ತದೆ. ಬಂಟ್ಸ್‌ಹಾಸ್ಟೆಲ್‌ ಕಡೆಗೆ ಹೋಗುವ ವೃತ್ತ ಪ್ರದೇಶದಲ್ಲಿ ಕಾಂಕ್ರೀಟ್‌ ಹಾಕಿ ಅಭಿವೃದ್ಧಿಗೊಳಿ ಸಿ ದರೆ ಎಡಗಡೆ ವಾಹನಗಳ ಓಡಾಟಕ್ಕೆ ಕೋನ್‌ಗಳನ್ನು ಅಳವಡಿಸಿದರೆ ವಾಹನಗಳ ಸಂಚಾರ ಸಾಧ್ಯ ವಾ ಗು ವುದು.

„ ನಗರದ ಹೆಚ್ಚಿನ ವೃತ್ತ ಪ್ರದೇಶಕ್ಕೆ ಸಮೀಪದಲ್ಲೇ ಬಸ್‌ ನಿಲ್ದಾಣಗಳಿದ್ದು, ಕೆಲವೊಂದು ಬಾರಿ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ ನಿಲುಗಡೆಯಾಗು ವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಹೀಗಾಗಿ ಬಸ್‌ ನಿಲ್ದಾಣಗಳನ್ನು ವೃತ್ತ ಪ್ರದೇಶಕ್ಕಿಂತ ಕೊಂಚ ದೂರದಲ್ಲಿ ಇಡುವುದು ಉತ್ತಮ.

„ ನಂತೂರು ರಾಷ್ಟ್ರೀಯ ಹೆದ್ದಾರಿಗಳ ಸಂಗಮ ಪ್ರದೇಶ ಇಲ್ಲಿ ಮತ್ತು ಕೆ.ಪಿ.ಟಿ. ವೃತ್ತ ಪ್ರದೇಶದಲ್ಲೂ ನಗರದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಬೇಕಾದರೆ ವೃತ್ತವನ್ನು ಹಾದು ಹೋಗಬೇಕು. ಹೀಗಾಗಿ ಈ ಎರಡು ಕಡೆಗಳಲ್ಲಿ ಯಾವಾಗಲೂ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ ಪಾದುವಾ ಹೈಸ್ಕೂಲ್‌ ಬಳಿಯೂ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಇದಕ್ಕೆಲ್ಲ ಪರಿಹಾರ ಮೇಲ್ಸೆತುವೆ.

„ ಪಂಪ್‌ ವೆಲ್‌ ನಲ್ಲಿ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಬೇಕು. ನಗರ ಪ್ರದೇಶಕ್ಕೆ ಬರುವ ವಾಹನಗಳನ್ನು ಮಿತಿಗೊಳಿಸುವುದು, ವಾಹನಗಳ ನಿಲುಗಡೆಗೆ ಅವಕಾಶವನ್ನು ಕಲ್ಪಿಸುವುದು, ರಸ್ತೆಗಳನ್ನು ಅಭಿವೃದ್ಧಿಗೊಳಿ ಸುವತ್ತ ಚಿಂತನೆ ನಡೆಸಿದರೆ ನಮ್ಮ ಮಂಗಳೂರು ಟ್ರಾಫಿಕ್‌ ಸಮಸ್ಯೆಯಿಂದ ಮುಕ್ತವಾಗಲು ಸಾಧ್ಯವಿದೆ.

  ವಿಶ್ವನಾಥ್‌ ಕೋಟೆಕಾರ್‌, ಕೋಡಿಕಲ್ 

ಟಾಪ್ ನ್ಯೂಸ್

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.