ಪ್ರವಾಸೋದ್ಯಮ ಅಭಿವೃದ್ಧಿಗೆ ಮೆಗಾಸರ್ಕ್ಯೂಟ್ 


Team Udayavani, Nov 11, 2018, 12:57 PM IST

11-november-9.gif

ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರಕಾರಗಳು ಸಾಕಷ್ಟು ಕ್ರಮವಹಿಸುತ್ತಿವೆ. ಮೆಗಾಸಕ್ಯೂಟ್‌ ಯೋಜನೆ ಅನ್ವಯ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ, ಸಂಪರ್ಕ ವ್ಯವಸ್ಥೆ, ಕಲ್ಪಿಸುವುದು, ಆ ಮೂಲಕ ಇವುಗಳಿಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯವಾಗಿ ಪ್ರವಾಸೋದ್ಯಮ ನಕಾಶೆಯಲ್ಲಿ ಸ್ಥಾನಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ. ಈ ಮೂಲಕ ಅವಿಭಜಿತ ದ.ಕ. ಜಿಲ್ಲೆಯ ಪ್ರವಾಸೋದ್ಯಮ ಸ್ಥಳಗಳಿಗೊಂದು ಹೊಸ ಆಯಾಮ ನೀಡುವುದು ಈ ಯೋಜನೆಯ ಉದ್ದೇಶ.

ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮೆಗಸರ್ಕ್ಯೂಟ್ ಗಳನ್ನು ರೂಪಿಸುವುದಾಗಿ ರಾಜ್ಯ ಸರಕಾರ ಇತ್ತೀಚೆಗೆ ಘೋಷಿಸಿದೆ. ಮೆಗಾಸರ್ಕ್ಯೂಟ್ ಪ್ರವಾಸೋದ್ಯಮ ದೃಷ್ಟಿಯಿಂದ ಪೂರಕ ಉಪಕ್ರಮವಾಗಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನು ಒಳಗೊಂಡಂತೆ ಈ ಪ್ರಸ್ತಾವ ಬಹಳಷ್ಟು ವರ್ಷಗಳ ಹಿಂದೆಯೂ ರೂಪುಗೊಂಡಿತ್ತು. ಸರಕಾರ ಈ ಪ್ರಸ್ತಾವನೆಗೂ ಮರುಜೀವ ನೀಡುವುದು ಅವಶ್ಯವಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಎರಡೂ ಜಿಲ್ಲೆಗಳನ್ನು ಒಳಗೊಂಡ ಮೆಗಾ ಸರ್ಕ್ಯೂಟ್ ಪ್ರಸ್ತಾವನೆಯನ್ನು 2011ರಲ್ಲಿ ಮಾಡಲಾಗಿತ್ತು.

ಕೇಂದ್ರ ಪ್ರವಾಸೋದ್ಯಮ ಸಚಿವರಾಗಿದ್ದ ಸುಬೋದ್‌ಕಾಂತ್‌ ಸಹಾಯ್‌ ಅವರು 2011ರ ಡಿಸೆಂಬರ್‌ 17 ರಂದು ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಮೆಗಾಸರ್ಕ್ಯೂಟ್  ಕೊಡುಗೆಯನ್ನು ಪ್ರಕಟಸಿದ್ದರು. ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಪ್ರವಾಸೋದ್ಯಮಿಗಳು, ಶಾಸಕರು, ರಾಜ್ಯ ಸರಕಾರ ಪ್ರವಾಸೋದ್ಯಮ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜರಗಿದ್ದ ಸಭೆಯಲ್ಲಿ ದ.ಕನ್ನಡ ಹಾಗೂ ಉಡುಪಿ ಜಿಲ್ಲೆಗಳನ್ನು ಮೆಗಾಸರ್ಕ್ಯೂಟ್ ಯೋಜನೆಯಲ್ಲಿ ಸೇರಿಸುವುದಾಗಿ ಸಚಿವರು ಭರವಸೆ ನೀಡಿದ್ದರು. ಮೆಗಾ ಸರ್ಕ್ಯೂಟ್ ಪ್ರಸ್ತಾವನೆ ರಾಜ್ಯ ಸರಕಾರದ ಕಡೆಯಿಂದ ಬರಬೇಕಾಗುತ್ತದೆ. ಪ್ರಸ್ತಾವನೆ ಬಂದ ಕೂಡಲೇ ಸಚಿವಾಲಯ ದಕ್ಷಿಣ ಭಾರತದಲ್ಲಿ ಯೋಜಿಸಿರುವ ಮೆಗಾಸರ್ಕ್ಯೂಟ್ ಯೋಜನೆಗಳ ಪಟ್ಟಿಯಲ್ಲಿ ಇದನ್ನು ಸೇರಿಸುವುದಾಗಿ ಸಚಿವರು ಪ್ರಕಟಿಸಿದ್ದರು. ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಉನ್ನತ ಮಟ್ಟ ಅಧಿಕಾರಿಗಳ ಸಮ್ಮುಖದಲ್ಲೇ ಸಚಿವರು ಇದನ್ನು ಪ್ರಸ್ತಾವನೆ ಮಾಡಿದ್ದರೂ ಇನ್ನೂ ಯೋಜನೆ ಸಾಕಾರಗೊಂಡಿಲ್ಲ. ಕೇಂದ್ರ ಪ್ರವಾಸೋದ್ಯಮ ಇಲಾಖೆ ದ.ಭಾರತದಲ್ಲಿ ಮಂಜೂರು ಮಾಡಿರುವ ಮೆಗಾಸರ್ಕ್ಯೂಟ್ ಗಳಲ್ಲಿ ದ.ಕನ್ನಡ ಹಾಗೂ ಉಡುಪಿ ಅವಕಾಶದಿಂದ ವಂಚಿತವಾಯಿತು.

ಮೆಗಾಸರ್ಕ್ಯೂಟ್ 
ದ.ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಮೆಗಾ ಸರ್ಕ್ಯೂಟ್ ಉಪಯುಕ್ತ ಯೋಜನೆಯಾಗಬಲ್ಲದು. ಮೆಗಾಸರ್ಕ್ಯೂಟ್ ಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ಅನುದಾನ ಲಭಿಸುತ್ತದೆ. ಇದರ ಅನುಷ್ಠಾನ ಹೊಣೆ ರಾಜ್ಯ ಸರಕಾರದ್ದಾಗಿರುತ್ತದೆ. ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ, ಸಂಪರ್ಕ ವ್ಯವಸ್ಥೆ, ಕಲ್ಪಿಸುವುದು, ಆ ಮೂಲಕ ಇವುಗಳಿಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯವಾಗಿ ಪ್ರವಾಸೋದ್ಯಮ ನಕಾಶೆಯಲ್ಲಿ ಸ್ಥಾನಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ. ಕೇಂದ್ರ ಪ್ರವಾಸೋದ್ಯಮ ಇಲಾಖೆಯಲ್ಲಿರುವ ಹತ್ತಾರು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಅವಿಭಜಿತ ದ.ಕನ್ನಡ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳು, ಪ್ರವಾಸೋದ್ಯಮ ಕೇಂದ್ರಗಳಿಗೆ ಇದರ ಪ್ರಯೋಜನ ಲಭಿಸಲಿದೆ.

ಕೇಂದ್ರ ಪ್ರವಾಸೋದ್ಯಮ ಇಲಾಖೆ 2011-12 ನೇ ಸಾಲಿನಲ್ಲಿ ದೇಶದಲ್ಲಿ 53 ಮೆಗಾ ಸರ್ಕ್ಯೂಟ್/ಡೆಸ್ಟಿನೇಶನ್‌ಗಳನ್ನು ಗುರುತಿಸಿತ್ತು. ಇದರಲ್ಲಿ 35 ಯೋಜನೆಗಳಿಗೆ ಮಂಜೂರಾತಿ ಲಭಿಸಿದ್ದು ಕರ್ನಾಟಕದ ಹಂಪೆ, ಪಟ್ಟದಕಲ್‌ ಹಾಗೂ ಬಾದಾಮಿ, ಐಹೊಳೆ, ಕೇರಳದ ಮುಜಿರಿಸ್‌ ಹೆರಿಟೆಜ್‌ ಸರ್ಕ್ಯೂಟ್, ಅಲಪುಳ ಹಿನ್ನೀರು ಸರ್ಕ್ನೂಟ್‌ ಸೇರಿದೆ. ಎಲ್ಲ ಆರ್ಹತೆಗಳಿದ್ದರೂ ಆಸಕ್ತಿ ಮತ್ತು ಉತ್ತೇಜನದ ಕೊರತೆಯಿಂದ ದ.ಕನ್ನಡ ಹಾಗೂ ಉಡುಪಿ ಜಿಲ್ಲೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ತಾಣಗಳ ನಕಾಶೆಯಲ್ಲಿ ಗುರುತಿಸಿಕೊಳ್ಳಲು ವಿಫಲವಾಗಿತ್ತು. ಇದೀಗ ರಾಜ್ಯ ಪ್ರವಾಸೋದ್ಯಮ ಸಚಿವರು ರಾಜ್ಯದಲ್ಲಿ ಕೆಲವು ಪ್ರವಾಸಿತಾಣಗಳನ್ನು ಮೆಗಾ ಸರ್ಕ್ಯೂಟ್ ನಲ್ಲಿ ಜೋಡಿಸುವುದಾಗಿ ಇತ್ತೀಚೆಗೆ ಘೋಷಿಸಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಭಾಗದಲ್ಲಿ ಅನೇಕ ಪುಣ್ಯ ಕ್ಷೇತ್ರಗಳಿವೆ. ಪ್ರವಾಸಿ ತಾಣಗಳಿವೆ. ಸುಂದರ ಬೀಚ್‌ ಗಳಿವೆ. ಈ ಭಾಗದಲ್ಲೂ ಪ್ರವಾಸೋದ್ಯಮವನ್ನು ಅಭಿವೃದ್ದಿ ಪಡಿಸಲು ಮೆಗಾ ಸರ್ಕ್ಯೂಟ್ ಪೂರಕವಾಗಬಹುದು.

ಪಂಚತಾರಾ ಹೊಟೇಲ್‌ ಇಲ್ಲ
ಕರಾವಳಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರು ಉತ್ಸುಕತೆ ತೋರುತ್ತಿದ್ದಾರೆ. ಆದರೆ ಮೂಲಸೌಕರ್ಯಗಳು ಹಾಗೂ ಪೂರಕ ವಾತಾವರಣ ಇನ್ನೂ ಪೂರ್ಣಪ್ರಮಾಣದಲ್ಲಿ ಅಭಿವೃದ್ದಿ ಕಾಣದಿರುವುದು ಹಿನ್ನಡೆಯಾಗಿ ಪರಿಣಾಮಿಸಿದೆ. ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಸರ್ವಋತು ಬಂದರು ಇದೆ . ಇದೆಲ್ಲ ಪ್ರವಾಸಿಗರಿಗೆ ಪೂರಕವಾಗಿದೆ. ಆದರೆ ಇನ್ನೂ ಕೂಡಾ ಪಂಚತಾರಾ ಹೊಟೇಲ್‌ಗ‌ಳು ಬಂದಿಲ್ಲ. ಮಂಗಳೂರಿಗೆ ಬಂದ ಪ್ರವಾಸಿಗರು ಪಂಚತಾರಾ ಹೊಟೇಲ್‌ ಹುಡುಕಿಕೊಂಡು ಪಕ್ಕದ ಕೇರಳರಾಜ್ಯದ ಬೇಕಲಕ್ಕೆ ಹೋಗುತ್ತಿದ್ದಾರೆ.

ಪ್ರಮುಖ ಸಂದರ್ಶನ ತಾಣಗಳು
ದ.ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣಗಳು ಸೇರಿದಂತೆ 18 ಪ್ರಮುಖ ತಾಣಗಳಿವೆ. ಇದರಲ್ಲಿ 11 ತಾಣಗಳು ಮಂಗಳೂರು ನಗರದಲ್ಲಿವೆ.
„ಶ್ರೀ ಕ್ಷೇತ್ರ ಧರ್ಮಸ್ಥಳ
„ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ
„ಶ್ರೀ ಕ್ಷೇತ್ರ ಪೊಳಲಿ
„ಶ್ರೀ ಕ್ಷೇತ್ರ ಕಟೀಲು
„ ಶ್ರೀ ಮಂಗಳಾದೇವಿ ಕ್ಷೇತ್ರ
„ಕದ್ರಿ ಶ್ರೀ ಮಂಜುನಾಥ ಕ್ಷೇತ್ರ
„ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ
„ ಮೂಲ್ಕಿ ಶ್ರೀ ಕ್ಷೇತ್ರ ಬಪ್ಪನಾಡು
„ಬಾವುಟಗುಡ್ಡೆ ಸೈಂಟ್‌ ಅಲೋಶಿಯಸ್‌ ಚಾಪೆಲ್‌
„ ಉಳ್ಳಾಲ ಸಯ್ಯದ್‌ ಮದನಿ ದರ್ಗಾ
„ ಮೂಡಬಿದಿರೆ ಸಾವಿರಕಂಬ ಬಸದಿ
„ಸಸಿಹಿತ್ಲು ಬೀಚ್‌
„ ಪಣಂಬೂರು ಬೀಚ್‌
„ ತಣ್ಣೀರುಬಾವಿ ಬೀಚ್‌
„ ಸುಲ್ತಾನ್‌ ಬತ್ತೇರಿ
„ ಸೋಮೇಶ್ವರ ಶ್ರೀ ಸೋಮನಾಥ ಕ್ಷೇತ್ರ
„ ಸೋಮೇಶ್ವರ ಬೀಚ್‌
„ ಪಿಳಿಕುಲ ನಿಸರ್ಗಧಾಮ

ಕೇಶವ ಕುಂದರ್‌

ಟಾಪ್ ನ್ಯೂಸ್

Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್‌ ಭೇಟಿ ಸಾಧ್ಯತೆ

Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್‌ ಭೇಟಿ ಸಾಧ್ಯತೆ

DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ

DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ

Supreme Court: ಮೀಸಲಿಗಾಗಿ ಆಗುವ ಮತಾಂತರ ಸಂವಿಧಾನಕ್ಕೆ ಮೋಸ

Supreme Court: ಮೀಸಲಿಗಾಗಿ ಆಗುವ ಮತಾಂತರ ಸಂವಿಧಾನಕ್ಕೆ ಮೋಸ

Kiran-rejiu

Lokasabha: ಕರ್ನಾಟಕದ 869 ಸೇರಿ 58,929 ವಕ್ಫ್ ಆಸ್ತಿಗಳ ಅತಿಕ್ರಮ: ಕಿರಣ್‌ ರಿಜಿಜು

Udupi: ನ. 29 ರಿಂದ ಡಿ. 1 ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವ ಸಂಭ್ರಮ

Udupi: ನ. 29 ರಿಂದ ಡಿ. 1 ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವ ಸಂಭ್ರಮ

Kundapura: ಇಂದು ಉಳ್ಳೂರು ಕೆರೆಗದ್ದೆ ಕಂಬಳ

Kundapura: ಇಂದು ಉಳ್ಳೂರು ಕೆರೆಗದ್ದೆ ಕಂಬಳ

SERBIA

Jaipur: ಬರೋಬ್ಬರಿ 3,676 ಕಿ.ಮೀ. ಹಾರಿದ ಕೊಕ್ಕರೆ: ದಾಖಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್‌ ಭೇಟಿ ಸಾಧ್ಯತೆ

Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್‌ ಭೇಟಿ ಸಾಧ್ಯತೆ

2

Kasaragod: ಕೊಲೆ ಯತ್ನ; ವೀಡಿಯೋ ಕಾನ್ಫರೆನ್ಸ್‌ ಮೂಲಕ ನಕ್ಸಲ್‌ ಸೋಮನ್‌ ವಿಚಾರಣೆ

DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ

DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ

Supreme Court: ಮೀಸಲಿಗಾಗಿ ಆಗುವ ಮತಾಂತರ ಸಂವಿಧಾನಕ್ಕೆ ಮೋಸ

Supreme Court: ಮೀಸಲಿಗಾಗಿ ಆಗುವ ಮತಾಂತರ ಸಂವಿಧಾನಕ್ಕೆ ಮೋಸ

Kiran-rejiu

Lokasabha: ಕರ್ನಾಟಕದ 869 ಸೇರಿ 58,929 ವಕ್ಫ್ ಆಸ್ತಿಗಳ ಅತಿಕ್ರಮ: ಕಿರಣ್‌ ರಿಜಿಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.