ಸ್ಮಾರ್ಟ್ ನಗರಿಗೂ ಬರಲಿ ಸಂಚಾರಿ ಗ್ರಂಥಾಲಯ
Team Udayavani, Feb 24, 2019, 7:41 AM IST
ಒತ್ತಡದ ಜೀವನ, ಸ್ಮಾರ್ಟ್ ಫೋನ್‌ಗೆ ಒಗ್ಗಿಕೊಂಡಿರುವ ಜನರಿಂದ ಗ್ರಂಥಾಲಯಗಳು ಬಹುದೂರವೇ ಸಾಗುತ್ತಿವೆ. ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಶಿಕ್ಷಕರಿಗಷ್ಟೇ ಗ್ರಂಥಾಲಯಗಳು ಸೀಮಿತವಾಗುತ್ತಿವೆ. ಓದುವ ಮನಸ್ಸಿದ್ದರೂ ಮನೆಗಿಂತ ಕೊಂಚ ದೂರದಲ್ಲಿರುವ ಗ್ರಂಥಾಲಯಕ್ಕೆ ಹೋಗಿ ಪುಸ್ತಕ ಖರೀದಿಸಿ ಓದುವ ತಾಳ್ಮೆ ಯಾರಲ್ಲೂ ಉಳಿದಿಲ್ಲ. ಇಂಥವರಿಗಾಗಿ ಮನೆ ಬಾಗಿಲಿಗೆ ಪುಸ್ತಕ ತಲುಪಿಸಿದರೆ ಸ್ವಲ್ಪವಾದರೂ ಓದುವ ಹವ್ಯಾಸವನ್ನು ಹೆಚ್ಚಿಸಲು ಸಾಧ್ಯವಿದೆ. ಮನೆ ಮುಂದೆ ಪುಸ್ತಕಗಳು ಬಂದರೆ ಒಮ್ಮೆಯಾದರೂ ಅತ್ತ ಹೋಗಿ ಯಾವ ಪುಸ್ತಕವಿದೆ, ಹೇಗಿದೆ ಎಂದು ನೋಡುವ ಕುತೂಹಲ ಎಲ್ಲರಲ್ಲೂ ಉಂಟಾಗುತ್ತದೆ.ಜನರಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸಲು, ಜ್ಞಾನಾಭಿವೃದ್ಧಿಗೆ ದಾರಿ ಮಾಡಿಕೊಡಲು ವಿದೇಶಗಳಲ್ಲಿ ಕೆಲವೊಂದು ಕಡೆಗಳಲ್ಲಿ ಟ್ರಾವೆಲಿಂಗ್ ಲೈಬ್ರೆರಿ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ.
ಮುಖ್ಯವಾಗಿ ಇಟಲಿಯ ಒಂದು ನಗರದಲ್ಲಿರುವ ಟ್ರಾವೆಲಿಂಗ್ ಲೈಬ್ರೆರಿಯ ಪ್ರಯೋಜನವನ್ನು ಹೆಚ್ಚಿನ ಜನರು ಪಡೆ ಯು ತ್ತಿ ದ್ದಾರೆ. ಇದು ಜನರಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸಿದೆ.
ಏನಿದು ಟ್ರಾವೆಲಿಂಗ್ ಲೈಬ್ರೆರಿ? ಟ್ರಾವೆಲಿಂಗ್ ಲೈಬ್ರೆರಿಯು ಯಾವ ಪ್ರದೇಶದಲ್ಲಿ ಓದುಗರ ಕೂಟಗಳು ಇದೆಯೋ ಅಲ್ಲೆಲ್ಲ ಪುಸ್ತಕಗಳನ್ನು ಹೊತ್ತ ವಾಹನವು ಸಂಚರಿಸಿ ಓದುಗರ ಹಸಿವನ್ನು ತಣಿಸುತ್ತದೆ. ಈ ಮೂಲಕ ಲೈಬ್ರೆರಿಗೆ ಹೋಗಿ ಸಮಯ ಕೊಡಲು ಸಾಧ್ಯವಾಗದವರಿಗೆ ಟ್ರಾವೆಲಿಂಗ್ ಲೈಬ್ರರಿಯಿಂದಾಗಿ ತಮ್ಮ ಓದುವ ಹವ್ಯಾಸವನ್ನು ಮುಂದುವರಿಸಲು ಸಾಧ್ಯವಾಗುತ್ತಿದೆ. ಈ ಟ್ರಾವೆಲಿಂಗ್ ಲೈಬ್ರರಿಯ ಕಲ್ಪನೆ ಮೊದಲು ಉಗಮಗೊಂಡಿದ್ದು ಆಂಟೋನಿಯಾ ಲಾ ಕಾವ ಎನ್ನುವ ಇಟಲಿಯ ಪ್ರಜೆಯಿಂದ. ತನ್ನ ಮೂರು ಚಕ್ರದ ಗಾಡಿಯಿಂದ ನಗರಗಳಲ್ಲಿ ಸಂಚರಿಸಿ ಆರಂಭವಾದ ಈ ಗಾಡಿ ಕಾನ್ಸೆಪ್ಟ್ ಇಂದು ಎಲ್ಲೆಡೆಯಲ್ಲೂ ಪ್ರಸಿದ್ಧಿಯಾಗಿದೆ.
ಮಂಗಳೂರಿಗೂ ಬರಲಿ
ನಗರವಾಸಿಗಳಲ್ಲಿ ಹೆಚ್ಚಾಗಿ ಗ್ರಂಥಾಲಯಕ್ಕೆ ಹೋಗಿ ಪುಸ್ತಕ ಓದುವಷ್ಟು ಸಮಯ ಇರುವುದಿಲ್ಲ. ಹೀಗಾಗಿ ಸಮಯ ಸಿಕ್ಕಾಗ ಸಂಚಾರಿ ಗ್ರಂಥಾಲಯವನ್ನು ನಾವು ಆಯ್ದುಕೊಳ್ಳಬಹುದಾಗಿದೆ. ಇದರಿಂದ ಸಮಯದ ಉಳಿತಾಯವೂ ಆಗುವುದು. ಆಡಳಿತದ ವತಿಯಿಂದಲೇ ಇಂಥ ಒಂದು ಕ್ರಮ ಕೈಗೊಳ್ಳಬಹುದು.
ನಗರದ ವಿವಿಧ ವಾರ್ಡ್‌ನ ಒಂದು ನಿರ್ದಿಷ್ಟ ಪ್ರದೇಶದಲ್ಲಿ, ವಸತಿ ಗೃಹಗಳ ಬಳಿ, ಸಂಘ, ಸಂಸ್ಥೆಗಳ ಕಚೇರಿ ಸಮೀಪ ದಿನದಲ್ಲಿ ಒಂದೆರಡು ಗಂಟೆಗಳ ಸಂಚಾರಿ ಗ್ರಂಥಾಲಯವು
ತೆರಳಿ ಜ್ಞಾನವನ್ನು ಹಂಚುವ ಕೆಲಸ ಮಾಡಬಹುದು. ಇದು ನಗರದ ಅಭಿವೃದ್ಧಿಯತ್ತಲೂ ಒಂದು ಮಹತ್ವದ ಹೆಜ್ಜೆಯಾಗಲಿದೆ.
ವಿಶ್ವಾಸ್ ಅಡ್ಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.