ಮೊಬೈಲ್ ಮಾರ್ಕೆಟ್ ಮಂಗಳೂರು ಸ್ಮಾರ್ಟ್ ನಗರಿಗೂ ಬರಲಿ
Team Udayavani, Feb 10, 2019, 6:32 AM IST
ಮಾರುಕಟ್ಟೆಗಳು ಹತ್ತಿರವಾಗಿರಬೇಕು, ಆರೋಗ್ಯಕರವಾದ ವಸ್ತುಗಳು ಅಲ್ಲಿ ದೊರೆಯಬೇಕು, ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂಬುದು ಎಲ್ಲರ ಅಭಿಪ್ರಾಯ. ಅದಕ್ಕಾಗಿ ಎಲ್ಲರೂ ಮಾಲ್ ಗಳು, ಸಾವಯವ ಸಂತೆ ಗಳ ಮೊರೆ ಹೋಗುತ್ತಿದ್ದಾರೆ. ಸ್ಮಾರ್ಟ್ ನಗರಿ ಮಂಗಳೂರಿನಲ್ಲೂ ಈಗ ಮಾರ್ಕೆಟ್‌ಗೆ ಹೋಗುವ ಹೆಚ್ಚಿನ ಜನರು ಸಾವಯವ ಸಂತೆ, ಮಾಲ್ ಗಳಿಗೆ ಹೋಗಿ ತರಕಾರಿ, ಹಣ್ಣು ಹಂಪಲುಗಳನ್ನು ಕೊಂಡು ತರುತ್ತಿದ್ದಾರೆ. ಆದರೆ ಇದಕ್ಕಾಗಿ ಹೆಚ್ಚು ಸಮಯ ಮೀಸಲಿಡಬೇಕಾಗುತ್ತದೆ. ಬ್ಯುಸಿ ಲೈಫ್ ನಲ್ಲಿ ಇದು ಕಷ್ಟ ಎನ್ನುವವರೂ ಹಲವರಿದ್ದಾರೆ. ಇದರ ಬದಲು ಒಂದು ಸಣ್ಣ ಮಾಲ್ ಸಾವಯವ ತರಕಾರಿಗಳನ್ನು ಹೊತ್ತು ಕೊಂಡು ಮನೆ ಮುಂದೆ ಬಂದರೆ ಹೇಗಿರುತ್ತದೆ? ಅಮೆರಿಕದ ಚಿಕಾಗೋದಲ್ಲಿ ಇಂಥ ಒಂದು ವ್ಯವಸ್ಥೆಯಿದೆ. ಸುಂದರವಾದ ಸುಸಜ್ಜಿತ ಬಸ್ ವೊಂದು ಸಾವಯವ ತರಕಾರಿಗಳನ್ನು ಹೊತ್ತು ಕೊಂಡು ಪೇಟೆಯ ಗಲ್ಲಿಗಲ್ಲಿಗಳಲ್ಲಿ ಸಂಚರಿಸುತ್ತದೆ. ಇದು ರೈತರಿಗೆ ಮಾತ್ರವಲ್ಲ ಅಲ್ಲಿನ ಸರಕಾರಕ್ಕೂ ಉತ್ತಮ ಲಾಭವನ್ನು ತಂದುಕೊಟ್ಟಿದೆ. ಸ್ಥಳೀಯ ಸರಕಾರಕೈಗೊಂಡಿ ರುವ ಪ್ರಶ್ ಮೂವ್ಸ್ ಮೊಬೈಲ್ ಮಾರ್ಕೆಟ್ ಯೋಜನೆಯಿಂದಾಗಿ ಗ್ರಾಮೀಣ ಭಾಗದ ರೈತರು ದೊಡ್ಡ ಮಟ್ಟಿನ ಲಾಭವನ್ನು ಪಡೆಯುತ್ತಿದ್ದಾರೆ.
ನಗರವಾಸಿಗಳಿಗೆ ಹಳ್ಳಿಯ ಉತ್ಪನ್ನಗಳು ಸುಲಭವಾಗಿ ಸಿಗುವಂತೆ ಮತ್ತು ರೈತರ ಉತ್ಪನ್ನವನ್ನು ನೇರ ಖರೀದಿಸುವಂತೆ ಮಾಡಲು ಇಲ್ಲಿನ ಸರ ಕಾರ ಕೈಗೊಂಡ ಮಹತ್ವದ ಯೋಜನೆ ಪ್ರಶ್ ಮೂವ್ಸ್ ಮೊಬೈಲ್ ಮಾರ್ಕೆಟ್. ನಮ್ಮ ನಗರಗಳ ಬಸ್‌ಗಳಲ್ಲಿ ಜನರು ಸಂಚರಿಸಿದರೆ ಅಮೆರಿಕದ ಚಿಕಾಗೊ ನಗರದ ಗಲ್ಲಿ ಗಲ್ಲಿಗಳಲ್ಲಿ ತರಕಾರಿಗಳು ಸಂಚರಿಸುತ್ತವೆ. ಅಂದರೆ ಇದರರ್ಥ ಇಲ್ಲಿ ರೈತರೇ ಬೆಳೆದ ಉತ್ಪನ್ನಗಳ ಗ್ರಾಹಕರು ಸುಲಭವಾಗಿ ಖರೀದಿಸಲು ಸಹಾಯ ಮಾಡುವಂತೆ ಮಾರುಕಟ್ಟೆ ದೂರವನ್ನು ಕಡಿಮೆಗೊಳಿಸುವ ಸಲುವಾಗಿ ಬಸ್ ಗಳನ್ನು ಮಾರುಕಟ್ಟೆ ರೀತಿಯಲ್ಲಿ ಬದಲಾಯಿಸಿ ಮೊಬೈಲ್ ರೈತರ ಮಾರುಕಟ್ಟೆಯಾಗಿ ಬಳಸುತ್ತದೆ. ಈ ಬಸ್‌ಗಳು ಶಾಲೆ, ಸಮುದಾಯ ಮತ್ತು ಆರೋಗ್ಯ ಕೇಂದ್ರಗಳಿಗೆ ಉತ್ಪನ್ನಗಳನ್ನು ತರುವ ಮೂಲಕ ಜನರ ಸಮಯವನ್ನು ಉಳಿತಾಯ ಮಾಡುತ್ತದೆ. ಹಣ್ಣು ತರಕಾರಿಗಳು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪುವುದರಿಂದ ಮಾರುಕಟ್ಟೆಯ ಬೆಲೆಗಿಂತ ಕಡಿಮೆಯಾಗಿದೆ.
ಈ ತಾಜಾ ಮೂವ್ಸ್ ಆರೋಗ್ಯಕರ ಆಹಾರದ ಆಯ್ಕೆ ಮಾಡಲು ಮತ್ತು ರೈತರನ್ನು ಪ್ರೋತ್ಸಾಹಿಸಲು ಸಹಕಾರಿಯಾಗಿದೆ. ಮಂಗಳೂರಿನಲ್ಲಿ ಈಗಾಗಲೇ ಸಾವಯವ ಸಂತೆ, ಸಾವಯವ ತರಕಾರಿಯನ್ನು ಕರೆ ಮಾಡಿ ಮನೆ ಬಾಗಿಲಿಗೆ ತರುವಂತ ವ್ಯವಸ್ಥೆ ಇದ್ದರೂ ಬಸ್ ಗಳ ಮೂಲಕ ತರ ಕಾರಿ ಮನೆ ಬಾಗಿಲಿಗೆ ಬರುವ ಸೌಲಭ್ಯವಿಲ್ಲ. ಸ್ಥಳೀಯ ಆಡ ಳಿತದ ಮೂಲಕ ಇದು ಜಾರಿಯಾದರೆ ಸಾರ್ವಜನಿಕರಿಗೆ ಅನುಕೂಲವಾಗುವುದು, ನಗರ, ಗ್ರಾಮೀಣ ವಲಯದ ರೈತರಿಗೂ ಪ್ರೋತ್ಸಾಹ ಸಿಕ್ಕಿದಂತಾಗುವುದು ಮಾತ್ರವಲ್ಲ ಆಡಳಿತಕ್ಕೂ ನಿರ್ದಿಷ್ಟ ಆದಾಯ ಕೈಸೇರುವುದು. ಹೀಗಾಗಿ ಇದೊಂದು ಆಶಾದಾಯಕ ಯೋಜನೆಯಾಗುವುದರಲ್ಲಿ ಸಂದೇಹವಿಲ್ಲ.
ವಿಶ್ವಾಸ್ ಅಡ್ಯಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.