ತೆರೆದಿರುವ ಚರಂಡಿ: ಕೈಗೊಳ್ಳಬೇಕಿದೆ ಸುರಕ್ಷೆ ಕ್ಷಮ
Team Udayavani, Dec 9, 2018, 2:26 PM IST
ಮಂಗಳೂರು ನಗರದ ಮಣ್ಣಗುಡ್ಡೆ ಬರ್ಕೆ, ಕಂಬ್ಳಾ ಕ್ರಾಸ್ ಬಳಿ ಇರುವ ತೋಡಿನಲ್ಲಿ ಒಳಚರಂಡಿ ನೀರು ಹರಿದು ಹೋಗುತ್ತಿದ್ದು, ಆಸುಪಾಸಿನ ಜನರಿಗೆ ತೊಂದರೆ ಉಂಟಾಗಿದೆ. ನಗರದ ಅನೇಕ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಅಸಮರ್ಪಕವಾಗಿದ್ದು, ಸಣ್ಣ ಮಳೆ ಬಂದರೂ ರಸ್ತೆ ಮೇಲೆ ಕೃತಕ ನೆರೆ ಬಂದು ಅವಾಂತರ ಸೃಷ್ಟಿಸುವುದು ಸಾಮಾನ್ಯವಾಗಿದೆ. ಹಲವಾರು ವರ್ಷಗಳಿಂದ ತೋಡಿನ ಮಣ್ಣು ತೆಗೆಯಲಿಲ್ಲ.
ಅದೇ ರೀತಿ ಮಠದ ಕಣೆಯಿಂದ ಕುದ್ರೋಳಿ ದೇವಸ್ಥಾನದವರೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಹಾನಗರ ಪಾಲಿಕೆಯ ಬೇಜವಾಬ್ದಾರಿತನದಿಂದ ಮಳೆ ನೀರು ಹರಿಯುವ ತೋಡಿನಲ್ಲಿ ಒಳಚರಂಡಿ ನೀರು ಹರಿಯುತ್ತದೆ. ಇದರಿಂದಾಗಿ ಸುತ್ತಮುತ್ತಲಿನ ಮನೆಮಂದಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ.
ದುರ್ವಾಸನೆಯಿಂದ ಕೂಡಿದ ನೀರಿನಿಂದ ಜನರು ಜೀವನ ನಡೆಸುವುದೇ ಕಷ್ಟವಾಗಿದೆ. ಮಠದ ಕಣಿ, ಗುಂಡೂರಾವ್ ಲೇನ್, ಬರ್ಕೆ, ಕಂಬಾÛಕ್ರಾಸ್, ನಾರಾಯಣ ಗುರು ಶಾಲೆ, ಕುದ್ರೋಳಿ ದೇವಸ್ಥಾನದ ಮೂಲಕ ಅಳಕೆಯ ದೊಡ್ಡ ತೋಡಿಗೆ ಹಾದು ಹೋಗುವ ಒಳಚರಂಡಿಯ ವ್ಯವಸ್ಥೆ ಇದು. ಈ ಒಳ ಚರಂಡಿಯಲ್ಲಿ ಪೈಪ್‌ಲೈನ್ ವ್ಯವಸ್ಥೆ ಕೂಡ ಇಲ್ಲ. ಡ್ರೈನೇಜ್ ವ್ಯವಸ್ಥೆಯೂ ಇಲ್ಲ. ನಡೆದು ಹೋಗಲು ಸರಿಯಾದ ದಾರಿಯೂ ಇಲ್ಲ. ಇದರಿಂದಾಗಿ ಬಾವಿಯ ನೀರಿನ ಬಣ್ಣ ಬದಲಾಗಿ, ಬಾವಿಯಲ್ಲಿ ಹುಳ, ಹುಪ್ಪಟೆಗಳು ಬಂದು ನೀರು ವಾಸನೆಗೆ ತಿರುಗಿತು. ಆಸುಪಾಸಿನ ಬಾವಿಯನ್ನು ಮುಚ್ಚಿದರು. ಮಳೆ ನೀರು ಕೂಡ ಮನೆಯ ಒಳಗೆ ಬರುತ್ತದೆ. ದಯವಿಟ್ಟು ಸಂಬಂಧ ಪಟ್ಟ ಅಧಿಕಾರಿಗಳು ತತ್‌ಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.
ರವಿಕಲಾ ಆರ್. ಕೋಟ್ಯಾನ್,
ಕಂಬ್ಳಾ ಕ್ರಾಸ್ ರೋಡ್, ಬರ್ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.