ನಮ್ಮ ನಗರಗಳು ಹೀಗಿದ್ದರೆ ಚೆಂದ
Team Udayavani, Oct 20, 2019, 5:44 AM IST
ನಗರಗಳು ಹೇಗಿರಬೇಕು ಎಂಬುದು ಬೃಹತ್ ಪ್ರಶ್ನೆ ಎನ್ನಿಸಬಹುದು. ಆದರೆ ನಮ್ಮ ನಗರಗಳು ಹೀಗಿದ್ದರೆ ಚೆಂದ ಎಂದು ಬಯಸುವುದು ಆಶಯದ ನೆಲೆ. ಅದಕ್ಕೆ ಉತ್ತರ ಕಂಡುಕೊಳ್ಳಬೇಕಾದದ್ದು ಅಲ್ಲಿರುವ ನಾಗರಿಕರಾದ ನಮ್ಮ ಹೊಣೆಯೂ ಹೌದು. ಇಲ್ಲದಿದ್ದರೆ, ನಮ್ಮ ನಗರಗಳನ್ನು ಆಳುವವರು ಬರೀ ದಂತಗೋಪುರಗಳನ್ನು ನಿರ್ಮಿಸುತ್ತಿರುತ್ತಾರೆ.
ನಮ್ಮ ನಗರವನ್ನು ಎಲ್ಲರೂ ಪ್ರೀತಿಸಬೇಕು, ಆ ನಗರದಲ್ಲಿ ಇರಬೇಕಪ್ಪಾ ಎಂದುಕೊಳ್ಳಲು ನಮ್ಮ ನಗರ ಹೇಗಿರಬೇಕು? ಏನಿರಬೇಕು? ಎಂಬ ಪ್ರಶ್ನೆಗಳನ್ನು ನಾವು ನಮಗೇ ಕೇಳಿಕೊಳ್ಳಬೇಕು. ಯಾಕೆಂದರೆ, ಅದಕ್ಕೆ ಉತ್ತರ ಸಿಕ್ಕಿದ್ದರೆ ನಮ್ಮ ನಗರವನ್ನು ಆಳುವವರಿಗೆ ಕೊಂಚ ವಿವರಿಸಬಹುದು. ಹಲವು ಬಾರಿ ಉದ್ದೇಶಪೂರ್ವಕ ತಪ್ಪನ್ನು ಎಸಗುತ್ತಿದ್ದರೆ, ಸ್ವಾಮಿ, ಸ್ವಲ್ಪ ತಡೀರಿ ಎನ್ನಬಹುದು. ಅದನ್ನೂ ಕೇಳದಿದ್ದರೆ ಪ್ರತಿಭಟಿಸಿ ಬುದ್ಧಿ ಹೇಳಬಹುದು.
ನಮ್ಮ ನಗರಗಳು ಹೀಗಿದ್ದರೆ ಒಳ್ಳೆಯದೆನ್ನುವುದು ಬರೀ ಕಲ್ಪನೆಯಾಗಿರಬಾರದು. ಅದಕ್ಕಿಂತ ಹೆಚ್ಚಾಗಿ ಸ್ಪಷ್ಟ ಲೆಕ್ಕಾಚಾರವಾಗಿರಬೇಕು. ಈಗ ಹಲವು ಆ್ಯಪYಳು, ಸಂಸ್ಥೆಗಳು ನಗರದ ವಾಸಯೋಗ್ಯತೆಯನ್ನು ಅಳೆದು ಹೇಳಲು ಬಂದಿವೆ. ಹಾಗಾದರೆ ಹೊರಗಿನಿಂದ ನಮ್ಮ ನಗರಗಳಿಗೆ ಬರುವವರು ಏನನ್ನು ಲೆಕ್ಕ ಹಾಕುತ್ತಾರೆ ಗೊತ್ತೇ? ಈ ಪಟ್ಟಿ ಓದಿ.
ವಸತಿ
ಹೌದು, ಮೊದಲ ಬಾರಿಗೆ ಪ್ರತಿಯೊಬ್ಬರೂ ಯೋಚಿಸುವುದು, ಆ ನಗರದಲ್ಲಿ ಮನೆಗೆ ಬಾಡಿಗೆ ಎಷ್ಟಿರಬಹುದು? ನಮ್ಮ ಸಂಬಳದಲ್ಲಿ ಭರಿಸಲು ಸಾಧ್ಯವೇ? ಅಥವಾ ಆ ನಗರಕ್ಕಿಂತ ಕೊಂಚ ದೂರದಲ್ಲಿದ್ದು ನಿರ್ವಹಿಸುವುದು ಸೂಕ್ತವೇ? ವಸತಿಯ ಪ್ರಶ್ನೆಗೆ ಉತ್ತರ ಸಿಕ್ಕರೆ ಉಳಿದ ಜಂಟಿ ಪ್ರಶ್ನೆಗಳಿಗೆ ಅವರೇ ಸಮಾಧಾನವನ್ನು ಕಂಡುಕೊಳ್ಳುತ್ತಾರೆ.
ಜೀವನ ಮಟ್ಟ
ಮನೆ ಸಿಕ್ಕಿತೆಂದುಕೊಳ್ಳೋಣ, ಬಳಿಕ ಹುಟ್ಟಿಕೊಳ್ಳುವುದು ಜೀವನ ಮಟ್ಟ. ಯಾವ ಆರ್ಥಿಕ ಮಟ್ಟದ ಜನರು ಹೆಚ್ಚಿ¨ªಾರೆ ? ಪ್ರತಿಯೊಂದಕ್ಕೂ ದುಬಾರಿ ಬೆಲೆ ತೆರಬೇಕೇ? ಮನೆ ಬಾಡಿಗೆ ಬಿಡಿ, ಉಳಿದವುಗಳ ಕಥೆ ಏನು? ಪ್ರತಿಯೊಂದಕ್ಕೂ ಉಳಿದ ನಗರಗಳಿಗಿಂತ ಒಂದೂವರೆ ಪಟ್ಟು, ಎರಡರಷ್ಟು ಹಣ ಹೆಚ್ಚು ಕೊಡುವುದಿದ್ದರೆ ಬದುಕಲು ಸಾಧ್ಯವೇ?-ಇದೂ ಸಹ ನಗರಗಳ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಶಿಕ್ಷಣ
ಇವೆಲ್ಲವೂ ಸ್ವಲ್ಪ ಪರವಾಗಿಲ್ಲ ಎಂದ ಮೇಲೆ ಶಿಕ್ಷಣ ವ್ಯವಸ್ಥೆಯನ್ನು ನೋಡುತ್ತೇವೆ. ಮಕ್ಕಳಿಗೆ ಶಿಕ್ಷಣ ಎಲ್ಲಿ ಚೆನ್ನಾಗಿ ಸಿಗುತ್ತದೆ? ಸೂಕ್ತ ಗುಣಮಟ್ಟದ ಶಾಲೆಗಳಿವೆಯೇ? ಅಲ್ಲಿಗೆ ಹೋಗಿಬರಲು ಏನಾದರೂ ಸಮಸ್ಯೆಯಾಗುತ್ತದೆಯೇ ? ಗುಣಮಟ್ಟದ ಶಿಕ್ಷಣ ಸಿಗುತ್ತದೆಯೇ ಇತ್ಯಾದಿ ಪ್ರಶ್ನೆಗಳು ಪ್ರಮುಖ ಪಾತ್ರ ವಹಿಸುತ್ತವೆ.
ಪರ್ಯಾಯ ಉದ್ಯೋಗ
ಉದ್ಯೋಗವೂ ಬಹಳ ಪ್ರಮುಖವಾದ ಆಯಾಮ. ಕಾರಣವೆಂದರೆ ಕೆಲವೊಮ್ಮೆ ಉದ್ಯೋಗ ಸಿಕ್ಕಿರಬಹುದು. ಆದರೆ, ಅದಕ್ಕೆ ಪೂರಕವಾಗಿ ಪರ್ಯಾಯ ಅವಕಾಶಗಳು ಎಷ್ಟಿವೆ? ಹೇಗೆಲ್ಲಾ ಅವುಗಳನ್ನು ಬಳಸಲು ಸಾಧ್ಯ? ಪೂರಕ ಉದ್ಯೋಗಗಳನ್ನು ಮಾಡಲು ಸಾಧ್ಯವೇ? ಎಂಥವರಿಗೆ ಉದ್ಯೋಗ ಸಿಕ್ಕೀತು? -ಇಂಥ ಹಲವು ಪ್ರಶ್ನೆಗಳು ಎಷ್ಟೋ ಬಾರಿ ನಗರಗಳ ಆಯ್ಕೆಯನ್ನೇ ಬದಲು ಮಾಡುತ್ತವೆ.
ಸುರಕ್ಷತೆ
ಹಲವು ಬಾರಿ ಇದೇ ಪ್ರಮುಖ ಆಯ್ಕೆಯಾಗುತ್ತದೆ. ಸುರಕ್ಷತೆ ಇಲ್ಲದಿದ್ದರೆ ಯಾರೂ ಯಾವ ನಗರವನ್ನೂ ಪ್ರೀತಿಸಲಾರರು. ಬದುಕಿನ ಸುರಕ್ಷತೆಗೇ ಪ್ರಥಮ ಆದ್ಯತೆ. ಯಾವುದೇ ನಗರದಿಂದ ಮತ್ತೂಂದು ನಗರಕ್ಕೆ ಸ್ಥಳಾಂತರಗೊಳ್ಳುವ ಮೊದಲು ಅಂಜುವುದು ಇದೇ ಕಾರಣಕ್ಕೆ. ಅಲ್ಲಿ ಹೇಗಿರುತ್ತೋ ಎಂಬುದು ಸ್ಥಳಾಂತರಗೊಳ್ಳುವವರು ತಮಗೇ ಕೇಳಿಕೊಳ್ಳುವ ಮೊದಲ ಪ್ರಶ್ನೆ.
ವಿರಾಮ
ವಿರಾಮ ಹೊತ್ತನ್ನು ಕಳೆಯಲು ಒಂದು ಉದ್ಯಾನವಿದ್ದರೆ ಚೆಂದ. ಮಕ್ಕಳಿಗೆ ಆಡಲಿಕ್ಕೆ ಒಂದಿಷ್ಟು ಜಾಗ. ಉತ್ತಮವಾದ ವಾತಾವರಣವನ್ನು ಕಾಪಿಡಲು ಒಂದಷ್ಟು ಮರಗಳು, ಹಸಿರು. ಹೀಗೆ ಒಂದಿಷ್ಟು ಬೇಡಿಕೆಯ ಪಟ್ಟಿಗಳನ್ನು ಎದುರಿಗಿಟ್ಟುಕೊಂಡು ಉತ್ತರ ಹುಡುಕುತ್ತಾರೆ ಸ್ಥಳಾಂತರಗೊಳ್ಳುವವರು. ಇವರು ಖಂಡಿತಾ ವಲಸಿಗರಲ್ಲ.
ಇವರ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿ ಕೊಡುವುದು ಅಲ್ಲಿನ ನಾಗರಿಕರಾದ ನಮ್ಮ ಹೊಣೆಗಾರಿಕೆಯೂ ಇದೆ. ಅದಕ್ಕೇ ನಾವು ಮೊದಲು ಅರ್ಥ ಮಾಡಿಕೊಂಡರೆ, ನಮ್ಮ ನಗರಗಳನ್ನಾಳುವವರಲ್ಲಿ ಉತ್ತರ ದೊರಕಿಸಿ ಕೊಡಬಹುದು.
ಸಾರಿಗೆ ಸಂಪರ್ಕ
ಮತ್ತೆ ಬರುವುದು ಸಾರಿಗೆ ವ್ಯವಸ್ಥೆಯ ಬಾಗಿಲಿಗೆ. ನಗರದೊಳಗೆ ಮತ್ತು ನಗರದಿಂದ ಇತರೆ ಭಾಗಗಳಿಗೆ ಇರುವ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ತೂಗಿ ಅಳೆಯಲಾಗುತ್ತದೆ. ಹಲವು ನಗರಗಳಲ್ಲಿ ಎಲ್ಲ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿರುವುದಿಲ್ಲ. ಒಂದು ಇದ್ದರೆ, ಇನ್ನೊಂದು ಇರದು. ಇದ್ದರೂ ಸರಿಯಾಗಿರದು. ಈ ಸಮಸ್ಯೆಗಳು ಇದ್ದೇ ಇವೆ. ಎಲ್ಲವೂ ತೃಪ್ತಿಕರವಾಗಿರದ್ದಿರೆ ಪರ್ಯಾಯ ಸಂಚಾರ ವ್ಯವಸ್ಥೆಯನ್ನೇ ಅವಲಂಬಿಸುವುದು ಸೂಕ್ತವೇ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲಾರಂಭಿಸುತ್ತಾರೆ.
ಅನುಪಮ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.