ರಸ್ತೆ ಬದಿಯೂ ಸುಂದರವಾಗಿರಲಿ
Team Udayavani, Mar 3, 2019, 8:15 AM IST
ನಮ್ಮ ಮಂಗಳೂರಿನ ಬಹುತೇಕ ರಸ್ತೆಗಳು ದ್ವಿಪಥವಾಗಿ ಸುಂದರವಾಗಿವೆ. ಆದರೆ ರಸ್ತೆ ಬದಿಗಳು ಮಾತ್ರ ಸರಿಯಾಗಿಲ್ಲ. ಅಲ್ಲಲ್ಲಿ ಚರಂಡಿಗಾಗಿ ಆಗೆದಿರುವ ತೋಡುಗಳಲ್ಲಿ ಕಲ್ಲು ಮಣ್ಣುಗಳು ತುಂಬಿಕೊಳ್ಳುತ್ತವೆ. ಇನ್ನು ಕೆಲವೆಡೆ ನೀರು ಹರಿದು ಹೋಗಲು ಚರಂಡಿಯೇ ಇಲ್ಲ. ಮತ್ತೆ ಕೆಲವಡೆ ರಸ್ತೆ ಬದಿಗಳಲ್ಲಿ ಕಲ್ಲು, ಮಣ್ಣು ತುಂಬಿಕೊಂಡು ನಡೆದಾಡುವುದೇ ಕಷ್ಟ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ.
ಸ್ಮಾರ್ಟ್ ನಗರಿಯಾಗಿರುವ ನಮ್ಮ ಮಂಗಳೂರಿನ ರಸ್ತೆ ಬದಿಗಳನ್ನು ಯಾಕೆ ಸುಂದರಗೊಳಿಸಬಾರದು. ರಸ್ತೆ ಬದಿಗಳನ್ನೂ ಪ್ರವಾಸಿಗರಿಗೆ, ಮಂಗಳೂರಿನಲ್ಲಿ ನಿತ್ಯವೂ ಸಂಚರಿಸುವ ಜನರಿಗೆ ಖುಷಿ ನೀಡುವಂತೆ ನಿರ್ಮಿಸಿದರೆ ಸ್ವಚ್ಛ, ಸುಂದರ ಮಂಗಳೂರು ನಮ್ಮದಾಗುವುದರಲ್ಲಿ ಸಂದೇಹವಿಲ್ಲ. ರಸ್ತೆ ಬದಿಗಳೆಂದರೆ ಯಾವುದಕ್ಕೂ ಉಪಯೋಗವಿಲ್ಲ ಎಂದು ಭಾವಿಸದೆ ಇವುಗಳ ಸೌಂದರ್ಯ ವೃದ್ಧಿಸಲು ಆಡಳಿತ ವ್ಯವಸ್ಥೆ ಕ್ರಮಕೈಗೊಳ್ಳಬಹುದು. ವಿಸ್ತಾರವಾದ ಜಾಗ ಇರುವಲ್ಲಿ ಗಿಡ, ಮರಗಳನ್ನು ಬೆಳೆಸಬಹುದು. ಕಡಿಮೆ ಜಾಗವಿದ್ದರೆ ಕುರು ಚಲು ಗಿಡಗಳನ್ನು ಬೆಳೆಯಬಹುದು. ಅಲಲ್ಲಿ ಕುಳಿತುಕೊಳ್ಳಲು ಬೆಂಚುಗಳನ್ನು ಇಟ್ಟರೆ ನಡೆದುಕೊಂಡು ಹೋಗುವವರಿಗೆ, ವಾಕಿಂಗ್ ಹೋಗುವವರಿಗೆ ಅನುಕೂಲವಾಗುವುದು. ಒಂದು ವೇಳೆ ಜಾಗವೇ
ಇಲ್ಲ ಎಂದಾದರೆ ಹತ್ತಿರದಲ್ಲಿ ಇರುವ ಗೋಡೆಗಳ ಮೇಲೆ ಚಿತ್ತಾರ ಬರೆದು ಸುಂದರಗೊಳಿಸಬಹುದು.
ಗೀತಾ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.