ನಗರಕ್ಕೆ ರೋಟರ್‌ಡ್ಯಾಂ ಪ್ಲಾಸ್ಟಿಕ್ ಪಾರ್ಕ್ ಮಾದರಿಯಾಗಲಿ
Team Udayavani, Nov 18, 2018, 1:19 PM IST
ಇಂದು ಜಗತ್ತನ್ನು ಬಾಧಿಸುತ್ತಿರುವ ಹತ್ತಾರು ಸಮಸ್ಯೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಒಂದಾಗಿದ್ದು, ಇದೊಂದು ಜಾಗತಿಕ ಸಮಸ್ಯೆಯಾಗಿಯೇ ಬಿಂಬಿಸಲಾಗಿದೆ. ಪ್ಲಾಸ್ಟಿಕ್ ಒಂದು ಕರಗದ ವಸ್ತು. ಇದು ಮಣ್ಣಿನಲ್ಲಿ ಕರಗದಿರುವುದರಿಂದಾಗಿ ಜೈವಿಕ ಸಂಕುಲಕ್ಕೆ ಹಾಗೂ ಪರಿಸರಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಇಂದು ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ವಿವಿಧ ಸಂಘ-ಸಂಸ್ಥೆಗಳು ಸಹಿತ ಜಾಗೃತಿ ಮೂಡಿಸಲಾಗುತ್ತಿದೆ. ಏತನ್ಮಧ್ಯೆ ಪ್ಲಾಸ್ಟಿಕ್ ನಿರ್ಮೂಲನೆ ಕನಸು ಕನಸಾಗಿಯೇ ಉಳಿದಿದೆ. ನಮ್ಮ ದಿನಗಳು ಮಾತ್ರ ಪ್ಲಾಸ್ಟಿಕ್‌ನಿಂದ ಆರಂಭವಾಗಿ ಪ್ಲಾಸ್ಟಿಕ್‌ನಿಂದ ಮುಕ್ತಾಯವಾಗುತ್ತಿದೆ.
ಪ್ಲಾಸ್ಟಿಕ್‌ಮಯ ಸಮಾಜದಲ್ಲಿ, ಪ್ಲಾಸ್ಟಿಕ್ ನಿರ್ಮೂಲನೆ ಮಾಡುವುದು ಅಸಾಧ್ಯವಾಗಬಹುದಾದರೂ ಅದನ್ನು ಮರುಪೂರಣ ಅಥವಾ ರೀಸೈಕ್ಲಿಂಗ್ ಮಾಡಬಹುದಾದ ತಾಂತ್ರಿಕತೆ ಜಗತ್ತಿನಲ್ಲಿದೆ ಎಂಬುದು ಗಮನಾರ್ಹ ಸಂಗತಿ. ಪ್ಲಾಸ್ಟಿಕ್‌ನ್ನು ರೀಸೈಕ್ಲಿಂಗ್ ಮಾಡಿಕೊಂಡು ಉಪಯುಕ್ತ ಮಾಡಿಕೊಳ್ಳುವ ಹತ್ತಾರು ಯೋಚನೆ, ಯೋಜನೆಗಳಲ್ಲಿ ಪ್ಲಾಸ್ಟಿಕ್ ಪಾರ್ಕ್ ಪರಿಕಲ್ಪನೆಯೂ ಒಂದು.
ರೋಟರ್‌ಡ್ಯಾಂ ಮಾದರಿಯಾಗಲಿ
ಹಾಲೆಂಡಿನ ರೋಟರ್‌ಡ್ಯಾಂನಲ್ಲಿ ಮಾದರಿಯಾದ ಪ್ಲಾಸ್ಟಿಕ್ ಪಾರ್ಕ್‌ನ್ನು ನಿರ್ಮಾಣ ಮಾಡಲಾಗಿದೆ. ಇದು ಜಗತ್ತಿಗೆ ಮಾದರಿಯಾಗಬಲ್ಲ ಪ್ಲಾಸ್ಟಿಕ್ ಪಾರ್ಕ್ ಆಗಿದೆ. ರೋಟರ್ ಡ್ಯಾಂನ ಸಮುದ್ರದಡದಲ್ಲಿರುವ ಈ ಪಾರ್ಕ್ ಸಮುದ್ರದಲ್ಲಿ ಬಿದ್ದಿರುವ ಕಸ, ತ್ಯಾಜ್ಯವನ್ನೇ ಬಳಸಿಯೇ ಪಾರ್ಕ್ ಮಾಡಲಾಗಿದೆ. ಪಾರ್ಕ್‌ನಲ್ಲಿ ನಿರ್ಮಿಸಲಾಗಿರುವ ಕುರ್ಚಿ, ಟೇಬಲ್, ಗುಡಿಸಲು ಹಾಗೂ ಸಸಿಗಳ ಎಲ್ಲವೂ ಕೂಡ ಮರುಪೂರಣವಾದ ಪ್ಲಾಸ್ಟಿಕ್ ತ್ಯಾಜ್ಯಗಳೇ. ಹೀಗಾಗಿ ಈ ಭಾಗದಲ್ಲಿ ಪ್ಲಾಸ್ಟಿಕ್‌ನಿಂದ ನಿರ್ಮಿಸಿದ ಈ ಪಾರ್ಕ್ ಕೇವಲ ಪ್ಲಾಸ್ಟಿಕ್ ಮರುಪೂರಣವಾಗಿದ್ದಷ್ಟೇ ಅಲ್ಲ, ಪ್ರವಾಸೋದ್ಯಮಕ್ಕೂ ಕೂಡ ಪೂರಕವಾಗಿದೆ ಎಂದು ಹೇಳಬಹುದು. ನಿರ್ಮಾಣಗೊಂಡ ಈ ಪಾರ್ಕ್‌ಏನೂ ಬಹುವೆಚ್ಚದ್ದೇನೂ ಅಲ್ಲ.
ಇದಲ್ಲದೇ ಥೈಲ್ಯಾಂಡ್‌ನಲ್ಲಿ ಪ್ರವಾಸೋದ್ಯಮ ಸಚಿವಾಲಯವೂ ಕೂಡ ಪ್ಲಾಸ್ಟಿಕ್‌ನ್ನು ಮರುಪೂರಣ ಮಾಡುವುದಕ್ಕಾಗಿಯೇ ಸುಮಾರು 154 ಪ್ಲಾಸ್ಟಿಕ್ ಪಾರ್ಕ್‌ನ್ನು ನಿರ್ಮಾಣ ಮಾಡಲಾಗಿದೆ. ಪಾರ್ಕ್ ನಿರ್ಮಾಣದಿಂದಾಗಿ ಪರಿಸರ ಕಾಳಜಿಯ ಜತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ.
ಈ ನಡೆಗಳು ಇಂದು ಭಾರತಕ್ಕೆ ಮಾದರಿಯಾಗಬೇಕಿದೆ. ಭಾರತದಲ್ಲಿ ಹಲವಾರು ಕಡೆ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಯೋಚಿಸಲಾಗುತ್ತಿದೆ. ಮಹತ್ವಾಕಾಂಕ್ಷಿ ಸ್ಮಾರ್ಟ್‌ಸಿಟಿ ಯೋಜನೆಯಿಂದ ದೇಶವೂ ನಗರೀಕರಣಕ್ಕೆ ಮಹತ್ವ ನೀಡಲಾಗಿದೆ. ಮಂಗಳೂರು, ಬೆಂಗಳೂರು ಹಾಗೂ ಹುಬ್ಬಳ್ಳಿಯಂತ ಮಹಾನಗರಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯೇ ಇಂದು ದೊಡ್ಡ ತಲೆನೋವಾಗಿದೆ. ಈ ಕಾರಣಕ್ಕೆ ಮಾದರಿಯಾದ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಆಡಳಿತವ ವ್ಯವಸ್ಥೆ ಆಸ್ಥೆ ವಹಿಸುವುದು ಸೂಕ್ತ.
ಮಂಗಳೂರಿನಲ್ಲಿ ಬಹುವೆಚ್ಚದಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಈಗಾಗಲೇ ಯೋಜನೆ ರೂಪಿಸಲಾಗಿದ್ದು, ಅದು ಕೇವಲ ಕಡತದಲ್ಲಿ ಬಾಕಿ ಉಳಿದಿದೆ ಎಂದು ಇತ್ತೀಚೆಗೆ ಪತ್ರಿಕೆಯಲ್ಲಿ ವರದಿಯಾಗಿತ್ತು. ಈ ಯೋಜನೆಗೆ ಸಂಬಂಧಿಸಿದಂತೆ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಮಾಡುವುದಾದರೆ, ನಗರದ ತ್ಯಾಜ್ಯವನ್ನೇ ಕ್ರೋಡೀಕರಿಸಿ, ಥೈಲ್ಯಾಂಡ್ ಹಾಗೂ ಹಾಲೆಂಡಿನ ರೋಟರ್‌ಡ್ಯಾಂನಲ್ಲಿ ನಿರ್ಮಿಸಿದ ಪ್ಲಾಸ್ಟಿಕ್ ಪಾರ್ಕ್‌ನಂತೆ ನಿರ್ಮಾಣ ಮಾಡಬೇಕಾಗಿರುವುದು ಆಡಳಿತ ವ್ಯವಸ್ಥೆಯ ಜವಾಬ್ದಾರಿಯಾಗಿದೆ.
ಏನಿದು ಪ್ಲಾಸ್ಟಿಕ್ ಪಾರ್ಕ್
ನಗರದಲ್ಲಿ ತ್ಯಾಜ್ಯವಾಗಿ ಉಳಿದಿರುವ ಪ್ಲಾಸ್ಟಿಕ್‌ನ್ನು ಎಸೆಯದೇ ಅದನ್ನು ಮರುಪೂರಣ ಮಾಡಿ, ಅದನ್ನು ಸೌಂದರೀಕರಣಗೊಳಿಸಿ ಪಾರ್ಕ್‌ನ್ನು ನಿರ್ಮಾಣ ಮಾಡಬಹುದಾಗಿದೆ. ಈ ಪಾರ್ಕ್ ನಿರ್ಮಾಣಕ್ಕೆ ಎಸೆಯಲ್ಪಡುವ ಕಸ ಹಾಗೂ ತ್ಯಾಜ್ಯವನ್ನು ತೆಗೆದುಕೊಂಡು ಪ್ರಾಣಿ, ಪಕ್ಷಿಗಳು ಹಾಗೂ ಟೇಬಲ್, ಕುರ್ಚಿ ಮುಂತಾದ ಸಲಕರಣೆಗಳನ್ನು ಮಾಡಿ, ಒಂದು ನಿರ್ದಿಷ್ಟ ವ್ಯಾಪ್ತಿಯ ಪಾರ್ಕ್ ಮಾಡಬಹುದು.
ಶಿವ ಸ್ಥಾವರಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.